ನವದೆಹಲಿ; ನಿನ್ನೆ ತಾನೇ ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ತಮ್ಮ ಸಂಪುಟ ಸಹೂದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ರೈಲ್ವೆ ಖಾತೆ ಮತ್ತೆ ರಾಜ್ಯದ ಪಾಲಾಗಿದ್ದು, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದಗೌಡರಿಗೆ ರೈಲ್ವೆ ಖಾತೆ ಸಿಕ್ಕಿದೆ.
ಡಿ.ವಿ. ಸದಾನಂದಗೌಡ – ರೈಲ್ವೆ ಖಾತೆ ,
ಅನಂತ ಕುಮಾರ್ – ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ,
ಸುಷ್ಮಾ ಸ್ವರಾಜ್ – ವಿದೇಶಾಂಗ ಖಾತೆ , ರಾಜ್ನಾಥ್ ಸಿಂಗ್ – ಗೃಹ ಖಾತೆ ,ಧರ್ಮೆಂದ್ರ ಪ್ರಧಾನ್ – ಪೆಟ್ರೋಲಿಯಂ ಖಾತೆ ,ಪ್ರಕಾಶ್ ಜಾವಡೇಕರ್ – ವಾರ್ತಾ ಪ್ರಸಾರ, ಪರಿಸರ ಖಾತೆ ,ಪಿಯೂಷ್ ಗೋಯಲ್ – ಇಂಧನ, ಕಲ್ಲಿದ್ದಲು ,ನಿರ್ಮಲಾ ಸೀತಾರಾಮನ್ – ವಾಣಿಜ್ಯ ಖಾತೆ , ಅರುಣ್ ಜೇಟ್ಲಿ – ವಿತ್ತ ಸಚಿವ ,ಹೆಚ್ಚುವಾರಿಯಾಗಿ ಜೇಟ್ಲಿಗೆ ರಕ್ಷಣಾ ಖಾತೆ ,ವೆಂಕಯ್ಯ ನಾಯ್ಡು – ನಗರಾಭಿವೃದ್ಧಿ ಖಾತೆ ,ಸ್ಮೃತಿ ಇರಾನಿ- ಮಾನವ ಸಂಪನ್ಮೂಲ , ನಿತಿನ್ ಗಡ್ಕರಿ – ಸಾರಿಗೆ, ಬಂದರು ಸಚಿವ , ರವಿ ಶಂಕರ್ ಪ್ರಸಾದ್ – ಕಾನೂನು, ಟೆಲಿಕಾಂ ಸಚಿವ

