ಮುಂಬಯಿ: ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್ (ರಿ.) ಮುಂಬಯಿ ರಾಷ್ಟ್ರೀಯ ಭಾವೈಕ್ಯತೆ ಬಿಂಬಿಸುವ ವಿಶೇಷ ಕಾರ್ಯಕ್ರಮದೊಂದಿಗೆ ತನ್ನ ದಶಮಾನೋತ್ಸವ ಕಾರ್ಯಕ್ರಮಕ್ಕೆ ಇದೇ ಬರುವ
ಮಾ.06ನೇ ಭಾನುವಾರ ಮಾಟುಂಗಾ ಪಶ್ಚಿಮದಲ್ಲಿನಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಚಾಲನೆ ನೀಡಲಿದೆಎಂದು ಗೌರವಅಧ್ಯಕ್ಷ ಭಾಸ್ಕರ ಸಸಿಹಿತ್ಲುತಿಳಿಸಿದ್ದಾರೆ.
ದಿ| ಸುಲೋಚನ ಬಿ.ಪೂಜಾರಿ ದ್ವಾರವನ್ನಾಗಿಸಿ, ವೀರಯೋಧ ಹನುಮಂತಪ್ಪಕೊಪ್ಪದ್ ವೇದಿಕೆಯಲ್ಲಿ ಸಾಯಂಕಾಲ 4.30 ಗಂಟೆಗೆ ನಡೆಸಲಾಗುತ್ತಿರುವ ಸಭಾ ಕಾರ್ಯಕ್ರಮಕ್ಕೆ ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮೆರಿ ಇದರ ಪ್ರಧಾನ ಅರ್ಚಕ ಎಸ್.ಎನ್ ಉಡುಪ ಆಶೀರ್ವಚನ ನೀಡಲಿದ್ದಾರೆ. ವೀರಕೇಸರಿ ಕಲಾವೃಂದ ಮುಂಬಯಿ ಅಧ್ಯಕ್ಷ ರಮೇಶ್ ಕೆ.ಶೆಟ್ಟಿಪಯ್ಯಾರು ಅಧ್ಯಕ್ಷತೆಯಲ್ಲಿ ಜರುಗುವ ಸಭಾ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಯಾಗಿ ಉದ್ಯಮಿ ರವೀಂದ್ರನಾಥ್ ಎಸ್. ಭಂಡಾರಿ, ಗೌರವ ಅತಿಥಿಗಳಾಗಿ ಕರುಣಾಕರ ಪುತ್ರನ್, ರವೀಂದ್ರ ಕೋಟ್ಯಾನ್, ರಾಜ್ಕುಮಾರ್ ಕಾರ್ನಾಡ್, ಲಕ್ಷ್ಮೀ ಎನ್.ಕೋಟ್ಯಾನ್, ರಾಮ ಪೂಜಾರಿ, ಸುಧಾಕರ ಪೂಜಾರಿ, ಉದಯ ಶೆಟ್ಟಿಕಾಂತಾವರ, ನಿಲೇಶ್ ಪೂಜಾರಿ ಜಾರಿ ಪಲಿಮಾರು, ಕು| ಶ್ರದ್ಧಾ ಸಾಲ್ಯಾನ್, ದಿನೇಶ್ ಕಂಕನಾಡಿ, ಪ್ರಕಾಶ್ ಶೆಟ್ಟಿಧರ್ಮನಗರ, ಅಶ್ವಿನಿ ಜಿ. ಕೋಟ್ಯಾನ್, ಸುರೇಶ್ ಪೂಜಾರಿ ಅಳದಂಗಡಿ ಆಗಮಿಸಲಿದ್ದು, ರಂಗಕರ್ಮಿ ಜಯ ಟಿ. ಪೂಜಾರಿ, ಸಮಾಜ ಸೇವಕ ಮೋಹನ್ಕುಮಾರ್ ಜೆ. ಗೌಡ ಅವರನ್ನು ಸನ್ಮಾನಿಸಲಾಗುವುದು. ಧಾರ್ಮಿಕ ಮುಂದಾಳು ಶ್ರೀಕಾಂತ ಸುವರ್ಣ, ರಂಗಭೂಮಿಯ ಹಿನ್ನೆಲೆ ಸಹಾಯಗಾರಶೈಲೇಶ್ ಸುವರ್ಣ ಅವರಿಗೆ ಗೌರವಾರ್ಪಣೆ ಹಾಗೂ ಬಡ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಿರುವರು ಎಂದು ಅಧ್ಯಕ್ಷ ಮಾಧವ ಪಡೀಲ್ ತಿಳಿಸಿದ್ದಾರೆ. ಉಪಾಧ್ಯಕ್ಷರುಗಳಾದಸತೀಶ್ ಎರ್ಮಾಳ್, ಉದಯ ವೇಣೂರು, ಕೋಶಾಧಿಕಾರಿ ಸತೀಶ್ ಮಾಂಟ್ರಾ ಡಿ, ಜತೆ ಕಾರ್ಯದರ್ಶಿ ಮಮತಾ ಶೆಟ್ಟಿ ಮಜಲಬೆಟ್ಟು ಬೀಡು, ಜತೆ ಕೋಶಾಧಿಕಾರಿ ಅನಿಲ್ ಸಿದ್ಧಕಟ್ಟೆ ಮತ್ತಿತರ ಪದಾಧಿಕಾರಿಗಳ ಸಾರಥ್ಯದಲ್ಲಿ ಅಪರಾಹ್ನ 3.00 ಗಂಟೆಯಿಂದ 4.30 ಗಂಟೆ ತನಕ ಮುಂಬಯಿಯ ವಿವಿಧ ತುಳು-ಕನ್ನಡ ಸಂಘ ಸಂಸ್ಥೆಗಳ ಸದಸ್ಯರಿಂದ ಹಾಗೂ ಮಕ್ಕಳಿಂದ`ನೃತ್ಯ ವೈವಿಧ್ಯ’ ಕಾರ್ಯಕ್ರಮ, ಸಾಯಂಕಾಲ 6.00 ಗಂಟೆಯಿಂದ ಸಪ್ತಸ್ವರ ಕಲ್ಚರಲ್ ಅಸೋಸಿಯೇಷನ್ನ ಸದಸ್ಯರು ಪ್ರಕಾಶ್ ಶೆಟ್ಟಿಧರ್ಮನಗರ ಸಾಹಿತ್ಯದಲ್ಲಿ, ಕುಸೇಲ್ದ ಪರಬೆ ಹೆಸರಾಂತ ದಿನೇಶ್ ಕಂಕನಾಡಿ ರಚಿಸಿ, ಭಾಸ್ಕರ ಸಸಿಹಿತ್ಲು ನಿರ್ದೇಶಿಸಿದ `ಯಮುನ ದಾನೆ ನಮೂನೆ..?’ ತುಳು ಸಾಮಾಜಿಕ ಹಾಸ್ಯಮಯ ನಾಟಕಪ್ರದರ್ಶಿಸಲಿದ್ದಾರೆ ಎಂದು ಕಾರ್ಯಕ್ರಮದ ಪ್ರದಾನ ಸಂಘಟಕ ಸಲಹಾ ಸಮಿತಿ ಸದಸ್ಯರುಗಳಾದ ಪ್ರಭಾಕರ ಬೆಳುವಾಯಿ ತಿಳಿಸಿದ್ದಾರೆ. ಮಹಾನಗರದ ಸಮಸ್ತ ತುಳು-ಕನ್ನಡಿಗರು, ರಾಷ್ಟ್ರಪ್ರೇಮಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್ನ ಕಾರ್ಯದರ್ಶಿ ಪ್ರಸನ್ನ ಕುಂಟಾಡಿ ವಿನಂತಿಸಿದ್ದಾರೆ.
