ಮುಂಬಯಿ (ಕಾಪು): ಉಡುಪಿ ಜಿಲ್ಲೆಯ ಕಾಪು ಎಲ್ಲೂರು ಮಾಗಣೆಯಲ್ಲಿ ಆಸ್ತಿತ್ವ ಪಡೆದುಕೊಂಡಿರುವ ಬೆಳಪು ಗ್ರಾಮದ ಇತಿಹಾಸ ಪ್ರಸಿದ್ಧ ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಪುನರ್ ನಿರ್ಮಾಣದ ಪ್ರಯುಕ್ತ ಎಲ್ಲೂರು ಸೀಮೆಯ ತಂತ್ರಿಗಳಾದ ಬ್ರಹ್ಮಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ಮೂಲಕವಾಗಿ ಕಳೆದ ಶುಕ್ರವಾರ ಭೂಮಿಪೂಜಾ ಪೂರ್ವಕ ಶಿಲಾನ್ಯಾಸ ನೆರವೇರಿಸಲಾಯಿತು.

Paniyooru Shilanyasa (C)

Paniyooru Shilanyasa-1ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾವನ್ನು ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಳಿಸಲು ಚಿಂತನೆ ನಡೆಸಲಾಗಿದ್ದು, ಪಣಿಯೂರು ಭಟಾರ ವೇ| ಮೂ| ವಾಸುದೇವ ಭಟ್ ಅವರ ನೇತೃತ್ವದಲ್ಲಿ ಶಿಲಾನ್ಯಾಸ ಪೂರ್ವಕ ಧಾರ್ಮಿಕ ವಿಧಾನಗಳನ್ನು ಪೂರೈಸಲಾಯಿತು. ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಜಿ. ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಎಲ್ಲೂರು, ದೇವಳದ ಆಡಳಿತ ಮೊಕ್ತೇಸರಪ್ರಫುಲ್ ಶೆಟ್ಟಿ ಎಲ್ಲೂರುಗುತ್ತು, ಗುತ್ತಿನಾರ್ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ನಡಿಮನೆ, ನಿರ್ಮಾಣದ ಉಸ್ತುವಾರಿ ರಮಾನಂದ ಶೆಟ್ಟಿ ಕಟಪಾಡಿ, ಪ್ರಮುಖರಾದ ಶ್ರೀವತ್ಸಾ ರಾವ್ ಕುಂಜೂರು, ಕರುಣಾಕರ ಶೆಟ್ಟಿ ಪಣಿಯೂರುಗುತ್ತು, ಕೊರಗ ಶೆಟ್ಟಿ ಬುಳಿಬೆಟ್ಟುಗುತ್ತು, ಬಸವ ಶೆಟ್ಟಿ ಕಬೇರಗುತ್ತು, ಜಯಾನಂದ ಶೆಟ್ಟಿ ನಡಿಮನೆ, ಶಿವ ಪೂಜಾರಿ ಗರಡಿಮನೆ, ಕೀರ್ತಿ ಶೆಟ್ಟಿ ಕಾಫಿ ತೋಟ, ಸಂಕಪ್ಪ ಪೂಜಾರಿ ಆಡ್ವೆ ಅಶೋಕ್ ಪೂಜಾರಿ ನಾಂಜಾರುಮನೆ, ರವಿ ಪೂಜಾರಿ ಬೈಲುತೋಟ, ಬಾಲಕೃಷ್ಣ ಪೂಜಾರಿ, ಮುಂಬಯಿ, ಯೋಗೀಶ್ ಪೂಜಾರಿ ಕೆರಮ, ಸರೋಜಿನಿ ಸನಿಲ್, ದೀಪಕ್ ಕುಮಾರ್ ಎರ್ಮಾಳ್, ಮುಂಬಯಿ ಸಮಿತಿ ಕಾರ್ಯದರ್ಶಿ ಸುಶೀನ್ ಶೆಟ್ಟಿ ಪಣಿಯೂರುಗುತ್ತು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಕೇಶ್ ಕುಂಜೂರು, ಕೋಶಾಧಿಕಾರಿ ಮಧ್ವರಾಜ್ ಪಣಿಯೂರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *