ಮುಂಬಯಿ: ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ಕಳೆದ ಭಾನುವಾರ ಜಗಜ್ಯೋತಿ ಕಲಾವೃಂದ ಹಮ್ಮಿಕೊಂಡ ವಾರ್ಷಿಕ ಕಾರ್ಯಕ್ರಮದಲ್ಲಿ ಕಾವ್ಯ ಸಂಕಲನ ಸ್ಪರ್ಧೆಯಲ್ಲಿ ವಿಜೇತ ಅನಿತಾ ಪೂಜಾರಿ ತಾಕೋಡೆ ಅವರಿಗೆ`ಶ್ರೀಮತಿಸುಶೀಲಶೆಟ್ಟಿಸ್ಮಾರಕ ಕಾವ್ಯ ಪ್ರಶಸ್ತಿ’ ಪ್ರದಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿಅತಿಥಿಗಳಾಗಿ ಉಪಸ್ಥಿತಹಿರಿಯ ಲೇಖಕಿ, ಶಿಕ್ಷಕಿ ಡಾ| ವಾಣಿ ಉಚ್ಚಿಲ್ಕರ್, ಕರುಣಾಕರಬಿ. ಶೆಟ್ಟಿ, ಪ್ರಭಾಕರ್ ಎಲ್ ಶೆಟ್ಟಿ, ಸತೀಶ ಅಲಗೂರ, ವಸಂತ ಸುವರ್ಣ, ಸನತ್ ಕುಮಾರ್ ಜೈನ್, ಸಂತೋಷ್ ಶೆಟ್ಟಿ, ಆಶಿಶ್ ಸೀತಾರಾಮ್ ಶೆಟ್ಟಿ, ಶೇಖರ್ ಶೆಟ್ಟಿಉಪಸ್ಥಿತಿಯಲ್ಲಿ ಕಾವ್ಯ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಕೊಡೆ ಮೂಲತಃ ಅನಿತಾ ಪೂಜಾರಿ ಅವರು, ಒಳನಾಡಿನ ಮತ್ತು ಮುಂಬಯಿಯ ಪ್ರಮುಖ ಎಲ್ಲಾ ಪತ್ರಿಕೆಗಳಲ್ಲಿ ಕತೆ, ಕವನ ಲೇಖನ ಪ್ರವಾಸ ಕಥನಗಳನ್ನು ನಿರಂತರವಾಗಿ ಬರೆಯುತ್ತಾ ಬಂದಿದ್ದಾರೆ.
12493622_959753784112694_649725306200835747_o

IMG-20160222-WA0015 (1) (1)

IMG-20160222-WA0017 (1)ಇವರ ಚೊಚ್ಚಲ ಕವನ ಸಂಕಲನ `ಕಾಯುತ್ತಾ ಕವಿತೆ’ ಪ್ರಕಟವಾಗಿದೆ. 2011ರಲ್ಲಿ ಮೈಸೂರಿನಲ್ಲಿ ಕೆ.ಎಸ್ ನೆನಪಿನ ಮೂಲತಃ ಪ್ರೇಮಕಾವ್ಯ ಪುರಸ್ಕಾರ?, 2012ರಲ್ಲಿ ಮುಂಬಯಿಯ ನವಚಿಂತನ ಸಂಸ್ಥೆಯಿಂದ `ಕವಿರತ್ನ ಪುರಸ್ಕಾರ’ 2013ರಲ್ಲಿ ಕಲಾಜಗತ್ತು(ರಿ) ವತಿಯಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿ ಕೆಮ್ಮಣ್ಣು ಗೋಪಾಲಕೃಷ್ಣ ರಾವ್ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ವತಿಯಿಂದ `ತುಳುಸಿರಿ ಪುರಸ್ಕಾರ’, ಜಯದೇವಿ ತಾಯಿ ಲಿಗಾಡೆ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ, ಜಿ ಡಿ ಜೋಶಿ ಪ್ರತಿಷ್ಟಾನದ ವತಿಯಿಂದ ಪ್ರವಾಸ ಕಥನಕ್ಕೆ ಬಹುಮಾನ, ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿರುತ್ತಾರೆ. ಇವರ ಕತೆ ಕವನಗಳು ಮುಂಬಯಿ ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, ಡಾ| ಎಸ್ ಎಲ್ ಭೈರಪ್ಪಅವರ ಶತಮಾನದ ಶತನಮನ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ನವಚಿಂತನ ಸಂಸ್ಥೆ ದೆಹಲಿ, ಅನುಭಾವ ಸಾಹಿತ್ಯ ಸಮ್ಮೇಳನ, ಅಖಿಲಭಾರತ ಹೊರನಾಡ ಕನ್ನಡ ಸಂಘಗಳ ಮಹಾಮೇಳ, ನವಚಿಂತನ ಸಂಸ್ಥೆಯ ಬಹುಭಾಷಾ ಕವಿಗೋಷ್ಠಿ, ಪುಣೆ ಕನ್ನಡ ಸಂಘ, ಹಾಗೂ ಮುಂಬಯಿಯ ಹೆಚ್ಚಿನ ಎಲ್ಲಾ ತುಳು ಕನ್ನಡ ಕವಿಗೋಷ್ಟಿಗಳಲ್ಲಿ ಇವರು ತಮ್ಮ ಸ್ವರಚಿತ ತುಳು ಕನ್ನಡ ಕವನಗಳನ್ನು ವಾಚಿಸುತ್ತಾರೆ. ಮಾನವೀಯತೆಯ ಹುಡುಕಾಟ, ಸಮಾಕಾಲೀನ ಬದುಕಿನತ್ತ ಆಸಕ್ತಿ, ಸಂಬಂಧಗಳನ್ನು ಉಳಿಸುವ ಪ್ರೀತಿ ವಿಶ್ವಾಸ, ಸೌಹಾರ್ದತೆ ಇವರ ಬರಹಗಳ ಪ್ರಮುಖ ಆಶಯವಾಗಿದೆ.

By suddi9

Leave a Reply

Your email address will not be published. Required fields are marked *