ಮುಂಬಯಿ: ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಸಂಗಬೆಟ್ಟು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ  ಎಂ.ತುಂಗಪ್ಪ ಬಂಗೇರ ಅವರು ಗೆಲುವನ್ನು ಸಾಧಿಸಿದ್ದಾರೆ. ಅವರು ಪ್ರತಿಪಕ್ಷದ ಅಭ್ಯರ್ಥಿ  ಕಾಂಗ್ರೆಸ್ ಪಕ್ಷದ ಮಾಯಿಲಪ್ಪ ಸಾಲ್ಯಾನ್ ಅವರನ್ನು ಪರಾಭವ ಗೊಳಿಸಿ ವಿಜೇತರಾಗಿದ್ದಾರೆ. ಉತ್ಸಾಹಿ ನೇತಾರರಾಗಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ ಸೇವೆಸಲ್ಲಿಸಿದ್ದು, ಬುದ್ಧ ಭಾರತರತ್ನ ರಾಷ್ಟ್ರೀಯ ಪುರಸ್ಕಾರದಿಂದ ಗೌರವಿಸಲ್ಪಟ್ಟ ತುಂಗಪ್ಪ ಬಂಗೇರ ಅವರು ಈ ಹಿಂದೆ ಎರಡು ಬಾರಿ ಸರಪಾಡಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಒಂದು ಬಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡು ಜನಾನುರೆಣಿಸಿದ್ದಾರೆ.

Tungappa Bangera-1 (1)ಬಂಟ್ವಾಳ ತಾಲೂಕು ಅಲ್ಲಿನ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ ಸಂಸ್ಥಾಪಕರಾಗಿದ್ದು, ವಾರ್ಷಿಕವಾಗಿ ಕಬ್ಬಡ್ಡಿ ಪಂದ್ಯಾಟ, ವಾರ್ಷಿಕವಾಗಿ ಉಚಿತ ಸಾಮೂಹಿಕ ವಿವಾಹ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನಪರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದೇ ಬರುವ ಭಾನುವಾರ (ಫೆ.28) ಪುಂಜಾಲಕಟ್ಟೆಯ ಅಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಲಿದ್ದು, ರಾಷ್ಟ್ರ ಮತ್ತು ರಾಜ್ಯದ ಗಣ್ಯಾಧಿ ಗಣ್ಯರ ಸಮ್ಮುಖದಲ್ಲಿ 8ನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ, ಸಾಧಕರಿಗೆ ರಾಜ್ಯ ಮಟ್ಟದ ಸ್ವಸ್ತಿಸಿರಿ ಪ್ರಶಸ್ತಿಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿರುವರು.

By suddi9

Leave a Reply

Your email address will not be published. Required fields are marked *