ಫರಂಗಿಪೇಟೆ: ಕುಟುಂಬ ಹಾಗೂ ಸಹಪಾಠಿಗಳ ಪ್ರೇರಣೆಯಿಂದ ಸಮಾಜ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಇನ್ನೂ ಮುಂದೆಯೂ ಸಮಾಜದ ಕೆಲಸ ಮಾಡಲು , ದುಃಖಿತರ ಕಣ್ಣೊರೆಸಲು ಈ ಪ್ರಶಸ್ತಿ ಸ್ಫೂರ್ತಿ  ನೀಡಿದೆ ಎಂದು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಹೇಳಿದರು.

BTW_FEB14_1A (1)
ಎ. ಶಾಮರಾವ್ ಫೌಂಡೇಶನ್ ಕೊಡಮಾಡುವ ಪ್ರತಿಷ್ಠಿತ ಎ. ಶ್ಯಾಮರಾವ್ ಸ್ಮಾರಕ ಪ್ರಶಸ್ತಿಯನ್ನು ವಳಚ್ಚಿಲ್ನ ಶ್ರೀನಿವಾಸ್ ಕಾಲೇಜಿನಲ್ಲಿ ಸ್ಥಾಪಕರ ದಿನಾಚರಣೆಯ ಅಂಗವಾಗಿ ಭಾನುವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ವೀಕರಿಸಿ ಅವರು ಮಾತನಾಡಿದರು. 33 ವರ್ಷಗಳ ಸಾಧನೆಯನ್ನು ಗುರುತಿಸಿ ಶ್ಯಾಮರಾವ್ ಫೌಂಡೇಶನ್ ಈ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ ಹಾಗೂ ಜವಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ವೇದಿಕೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎ. ರಾಘವೇಂದ್ರ ರಾವ್, ಎ. ಶ್ರೀನಿವಾಸ ರಾವ್, ವಿಜಯಲಕ್ಷ್ಮೀ, ಶ್ರೀನಿವಾಸ ಮಯ್ಯ ಸಂಯೋಜಕ ಡಾ| ಎ. ಆರ್.ಶಬರಾಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ.ಮೋಹನ ಆಳ್ವ, ಶಿಕ್ಷಕ ಯಾಕೂಬ್ ಹಾಜರಿದ್ದರು.

 

By suddi9

Leave a Reply

Your email address will not be published. Required fields are marked *