ಮೈಸೂರು : ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅಂಕಣಕಾರ ಪ್ರತಾಪ್ ಸಿಂಹ , ಅಡಗೂರು ವಿಶ್ವನಾಥ್ ಅವರನ್ನು ಭಜರಿ ಅಂತರದಲ್ಲಿ ಸೋಲಿಸಿದ್ದಾರೆ. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ನ ಹಳೆ ಹುಲಿ, 2009ರಲ್ಲಿ ಗೆದ್ದಿದ್ದ ಅಡಗೂರು ವಿಶ್ವನಾಥ್ ಅವರನ್ನು 9 ಸಾವಿರ ಮತಗಳ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪರಾಭವಗೊಂಡಿರುವುದು ಸಿದ್ದರಾಮಯ್ಯನವರಿಗೆ ತಲೆಎತ್ತಲಾರದಂತಾಗಿದೆ. ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲದಿದ್ದದೆ ಕುರ್ಚಿ ಅಲುಗಾಡುವುದು ಖಂಡಿತ ಎಂದು ತಿಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಅವರ ತವರೂರಲ್ಲಿ ಗೆಲ್ಲಬೇಕಿತ್ತು. ಅವರು ವಿಶ್ವನಾಥ್ ಪರ ಸಾಕಷ್ಟು ಪ್ರಚಾರವನ್ನೂ ನಡೆಸಿದ್ದರು. ಆದರೆ, ಸ್ಥಳೀಯ ನಾಯಕ ವಿಜಯಶಂಕರ್ ಬದಲಿಗೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಪ್ರತಾಪ್ ಮುಂದೆ ವಿಶ್ವನಾಥ್ ಅವರ ಪ್ರತಾಪ ನಡೆಯಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ನರೇಂದ್ರ ಮೋದಿ ಅವರೇ ಮೈಸೂರಿಗೆ ಆಗಮಿಸಿ ಪ್ರತಾಪ್ ಸಿಂಹ ಅವರಿಗೆ ಬೆನ್ನುತಟ್ಟಿ, ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮೈಸೂರಿನಲ್ಲಿ ನಡೆದ ಬಹಿರಂಗ ಸಭೆ ಮತದಾರರನ್ನು ಕೋರಿದ್ದರು.

