ಬೆಂಗಳೂರು: ಮೋದಿ ಅಧಿಕಾರಕ್ಕೆ ಬಂದಿರುವುದು ಈ ದೇಶದ ದುರದೃಷ್ಟ ಎಂದು ಜ್ಞಾನ ಪೀಠ ಸಾಹಿತಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಸುದ್ದಿವಾಹಿನಿಯೊಂದಿಗೆ ಮಾತಾಡಿದ ಮೂರ್ತಿ ಮೋದಿ ಕೈಗೆ ಅಧಿಕಾರ ನೀಡಿ ಈ ದೇಶದ ಜನತೆ ಮೋಸ ಹೋಗಿದ್ದಾರೆ ಎಂದು ಹೇಳಿರುವುದೂ ಸಹ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಮಾತು ಮಾತಿಗೂ ವಿಷಾದ ವ್ಯಕ್ತಪಡಿಸಿದ ಅನಂತ ಮೂರ್ತಿ ನರೇಂದ್ರ ಮೋದಿಯವರ ಆಡಳಿತ ಜನತೆಗೆ ಭ್ರಮನಿರಸನ ಉಂಟು ಮಾಡಲಿದೆ ಎಂದು ಹೇಳಿದ್ದಾರೆ.
ಕಮ್ಯುನಿಸ್ಟರನ್ನು ದೂರ ಮಾಡಿದ್ದಕ್ಕೆ ಕಾಂಗ್ರೆಸ್ ಸೋತಿತು:
ಕಾಂಗ್ರೆಸ್ ಪಕ್ಷ ಕಮ್ಯುನಿಸ್ಟ್ ಪಕ್ಷವನ್ನು ದೂರ ಮಾಡಿತು. ಕಾಂಗ್ರೆಸ್ ಅಮೇರಿಕಾವನ್ನು ಹತ್ತಿರ ಮಾಡಲು ಹೋಗಿ ಕಮ್ಯುನಿಸ್ಟ್ ನಿಂದ ದೂರವಾಯಿತು. ಇದು ಚುನಾವಣೆಯಲ್ಲಿ ಪ್ರಭಾವ ಬೀರಿದ ಕಾರಣ ಯುಪಿಎ ಗೆ ಸೋಲಾಯ್ತು ಎಂದು ವಿಶ್ಲೇಷಣೆ ಮಾಡಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದರೆ ದೇಶ ತೊರೆಯುತ್ತೇನೆ ಎಂದಿದ್ದ ಮೂರ್ತಿಗೆ ಈ ಬಗ್ಗೆ ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ದೇಶದಲ್ಲಿ ಸರ್ವಾಧಿಕಾರ ನಡೆಸಲು ಬಿಡುವುದಿಲ್ಲ, ಅದರ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

