ಸುದ್ದಿ9 ಕೈಕಂಬ: ತನ್ನ ನಾಲಗೆಯನ್ನು ಸಿಕ್ಕಾಪಟ್ಟೆ ಎಳೆದಾಡುತ್ತಾ ಕರ್ಣಗಳಿಗೆ ಕೈ ಇಡುವಂತೆ ಮಾಡುತ್ತಿದ್ದ ಹರಕು ನಾಲಗೆಯ ಜನಾರ್ದನ ಪೂಜಾರಿಯವರು ಸೋಲುವ ಮೂಲಕ ಅವರ ರಾಜಕೀಯ ಭವಿಷ್ಯ ಖತಂ ಆಗಿದೆ ಎಂದು ಮತದಾರರು ಹೇಳಿಕೊಳ್ಳುತ್ತಿದ್ದಾರೆ. ಬಿಲ್ಲವರ ಮತಗಳನ್ನೇ ನಂಬಿಕೊಂಡಿದ್ದ ಪೂಜಾರಿಗೆ ಬಿಲ್ಲವರೇ ಕೈಕೊಟ್ಟಿದ್ದಾರೆ. ಅಲ್ಲದೆ ಸಾಂಪ್ರದಾಯಿಕ ಮತಗಳಾದ ಮುಸ್ಲಿಂ ಹಾಗೂ ಕ್ರೈಸ್ತರೂ ಕೂಡಾ ಪೂಜಾರಿಗೆ ಸರಿಯಗಿ ಕೈಕೊಟ್ಟಿದ್ದಾರೆ.

ನನ್ನ ಸ್ಪ ದ್ಧ ಎಂದು ಹೇಳಿಕೊಂಡು ಅಲ್ಲಲ್ಲಿ ಭಾಷಣ ಮಾಡುತ್ತಿದ್ದ ಜನಾರ್ದನ ಪೂಜಾರಿಗೆ ಆರಂಭದಿಂದಲೇ ಬಹಳ ಟೀಕೆ ವ್ಯಕ್ತವಾಗುತ್ತಿತ್ತು. ಅಲ್ಲದೆ ಕಾಂಗ್ರೆಸ್ನ ಮುಖಂಡರೂ ಸಹ ವ್ಯಕ್ತಿಗತವಾಗಿ ಮಾತಾಡದಂತೆ ಎಚ್ಚರಿಕೆ ನೀಡಿದ್ದರು. ತನ್ನ ಭಾಷಣದಲ್ಲಿ ಹಿಂದೂವಿರೋಧಿಯಂತೆ ಮಾತಾಡುತ್ತಿದ್ದ ಪೂಜಾರಿಯವರನ್ನು ಕಂಡು ಬಹಸಂಖ್ಯಾತ ಹಿಂದೂಗಳು `ಪೂಜಾರಿಲು ದಾಯೆ ಇಂಚ ಪಾತೆರುವೆರ್?’ ಎಂದು ಮಂಡೆಬಿಸಿ ಮಾಡುತ್ತಿದ್ದರೂ ಕ್ಯಾರ್ ಎನ್ನದ ಪೂಜಾರಿ ತನ್ನ ನಾಲಗೆಯನ್ನು ಉದ್ದಕ್ಕೆ ಹರಿಯಬಿಡುತ್ತಿದ್ದರು.
ಕೇಸರಿ ಮುಂಡುದಕ್ಲೆಗ್ ಗೆಟೌಟ್ ಎಂದಿದ್ದ ಪೂಜಾರಿ:
ಅಬ್ಬೆಟ್ಟು ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೇಸರಿ ಮುಂಡು ಉಟ್ಟುಕೊಂಡು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಗೆಟೌಟ್ ಎಂದಿದ್ದ ಪೂಜಾರಿ ವಿರುದ್ಧ ಇಂಟೆರ್ನಟ್ಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಪತ್ರಿಕೆಗಳಲ್ಲಿ ಬಂದಿರುವ ಬರದಿಗಳನ್ನು ತಿರುಚಿ ಪೂಜಾರಿ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು. ಇದೆಲ್ಲಾ ಪೂಜಾರಿಗೆ ಸೋಲಾಗಿ ಪರಿಣಮಿಸಿದ್ದವು.
ವಿವಾದ ಸೃಷ್ಟಿಸಿದ್ದ ರೈ ಅರೆಬ್ಯಾರಿ ಹೇಳಿಕೆ
ಬಂಟ್ವಾಳದಲ್ಲಿ ನಡೆದ ಭಾಷಣವೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಆಡಿಕೊಂಡಿದ್ದಾರೆನಲಾದ ಅರೆಬ್ಯಾರಿ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಭಾರೀ ಮುನಿಸಿಕೊಂಡಿದ್ದರು. ಇದೆಲ್ಲಾ ಪೂಜರಿಗೆ ತಿರುಗುಬಾಣವಾಗಿ ಪರಿಣಮಿಸಿದೆ.
ಸುಳ್ಳಾದ ಸಮೀಕ್ಷೆಗಳು:
ಚುನಾವಣೋತ್ತರ ಸಮೀಕ್ಷೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಗೆಲುವು ಸಾಧಿಸುತ್ತಾರೆ ಎಂದು ಅನೇಕ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಇದೆಲ್ಲಾ ಸುಳ್ಳಾಗಿದೆ.
