ಸುದ್ದಿ9 ಕೈಕಂಬ: ಜನಾರ್ದನ ಪೂಜಾರಿಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಶಾಪ. ಆದ್ದರಿಂದಲೇ ಅವರು ಸೋತಿದ್ದಾರೆ… ಹೀಗೆಂದು ಕರಿಯಂಗಳದ ಆಸುಪಾಸಿನ ಜನತೆ ಮಾತಾಡಿಕೊಳ್ಳುತ್ತಿದ್ದಾರೆ. ಫಲಿತಾಂಶದ ಮುನ್ನವೇ ಈ ಬಗ್ಗೆ ಆಡಿಕೊಳ್ಳುತ್ತಿದ್ದ ಜನರು ಪೂಜಾರಿ ಖಂಡಿತಾ ಸೋಲುತ್ತಾರೆ ಎಂದು ಹೇಳಿಕೊಳ್ಳುತ್ತಿದ್ದರು.
ಅಷ್ಡಕ್ಕೂ ಅಲ್ಲಿ ಏನಾಗಿತ್ತು:
ಚುನಾವಣೆಯ ಪ್ರಚಾರ ಕಾರ್ಯಕ್ಕೆಂದು ಜನಾರ್ದನ ಪೂಜಾರಿ ಪೊಳಲಗೆ ಆಗಮಿಸಿದ್ದರು. ಕಾರ್ಯಕರ್ತರೊಂದಿಗೆ ಸೇರಿ ರೋಡ್ ಶೋ ನಡೆಸಿದ್ದ ಪೂಜಾರಿ ಪೊಳಲಿ ದೇವಸ್ಥಾನದ ಹತ್ತಿರದವರೆಗೂ ಬಂದಿದ್ದರು. ಆದರೆ ದೇವಸ್ಥಾನದ ಒಳಗೆ ಪ್ರವೇಶಿಸದೆ ದೇವರಿಗೆ ಕೈ ಮುಗಿಯದೆ ನಿರ್ಲಕ್ಷಿಸಿ ತೆರಳಿದ್ದರು. ಇದರಿಂದಾಗಿಯೇ ಪೂಜಾರಿ ಸೋತಿದ್ದಾರೆ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ. ಜನರ ನಂಬಿಕೆಯ ಪ್ರಕಾರ ಪೂಜಾರಿ ಸೋಲಲು ಪೊಳಲಿ ದೇವಿಯ ಶಾಪವೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ.
