ಹುಟ್ಟಿಬೆಳೆದ ಸಮಾಜದ ಅಭಿಮಾನ ಶೂನ್ಯವಾಗದಿರಲಿ: ನಿರ್ಮಲಾನಂದನಾಥಶ್ರೀ
ಮುಂಬಯಿ: ಇತ್ತೀಚಿನ ಯುವ ಸಮುದಾಯಕ್ಕೆ ತಮ್ಮ ಪೂರ್ವಜರು, ಹಿರಿಯರನ್ನು ಅರ್ಥೈಸಿಕೊಳ್ಳುವುದೇ ಕಷ್ಟಕರ ಆಗುತ್ತಿದೆ. ಸಮಾಜ ಮತ್ತು ಮನೆಯನ್ನು ಕಟ್ಟಿದವರಿಗೆ ಅವರದ್ದೇ ಆದ ಅನುಭವವಿದೆ. ಆದುದರಿಂದ ಇಂದು ಮನೆಯಲ್ಲಿರುವ ಅಜ್ಜಅಜ್ಜಿ ಹಾಗೂ ಹಿರಿಯರ ಅನುಭದ ಮಾತುಗಳನ್ನು ಯುವ ಪೀಳಿಗೆ ಕೇಳುವ ಅಗತ್ಯವಿದೆ. ಸಮಾಜದ ಪ್ರತೀಯೋರ್ವರೂ ನಾವು ಹುಟ್ಟು ಪಡೆದ ಸಮುದಾಯದ ಎಂದು ಹೇಳಲು ನಾವೇಕೆ ನಾಚಿಕೆ ಪಟ್ಟುಕೊಳ್ಳಬೇಕು..? ಯಾವೋತ್ತೂ ಹುಟ್ಟಿಬೆಳೆದ ಸಮುದಾಯದ ಹೆಸರನ್ನು ಹೇಳಿಕೊಳ್ಳಲು ನಾಚಿಗೆ ಪಡಬಾರದು. ನೀವು ಯಾವತ್ತೂ ಅಭಿಮಾನ ಶೂನ್ಯವಾಗಬಾರದು ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸಿದ್ಧ ಸಿಂಹಾಸನ ಪೀಠಾಧೀಶ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಕಳೆದ ಶನಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ
ಸಭಾಗೃಹದಲ್ಲಿ ಒಕ್ಕಲಿಗ ಸಂಘ ಮಹಾರಾಷ್ಟ್ರ ಮುಂಬಯಿ ಆಯೋಜಿಸಲಾಗಿದ್ದ ಗುರುವಂದನೆ ಮತ್ತು ಪಾದಪೂಜೆ ಧಾರ್ಮಿಕ ಕಾರ್ಯಕ್ರಮ, ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನಾ
`ಒಕ್ಕಲಿಗ ಮಹೋತ್ಸವ’ ಉದ್ಘಾಟಿಸಿ ನಿರ್ಮಲಾನಂದನಾಥಶ್ರೀಗಳು ನೆರದ ಸದ್ಭಕ್ತರನ್ನು ಅನುಗ್ರಹಿಸಿದರು. ಸಮುದಾಯವನ್ನು ತಿರಸ್ಕಾರ ಮಾಡಿದರೆ ಮುಂದೊಮ್ಮೆ ಪಾಶ್ಚತ್ತಾಪ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.
ಸಮುದಾಯದ ಸಂಘಟಕರಿಗೆ ನಾವು ಟೀಕೆ ಮಾಡದೆ ಅವರಿಗೆ ಸಾಂಘಿಕ ಸ್ಪೂರ್ತಿ ತುಂಬಿದರೆ ಮಾತ್ರ ಸಂಸ್ಥೆಯು ಶಕ್ತಿಯುತವಾಗಿ ಬೆಳೆಯುವುದು. ಮಾನವನು ಜ್ಞಾನಸಂಪತ್ತು ಮತ್ತು ಬೌಧಿಕ ಸಂಪತ್ತು ಗಳಿಸಿದರೆ
ಮಾತ್ರ ಎಲ್ಲರೊಂದಿಗೆ ಗೌರವ ಸಂಪಾದಿಸಲು ಸಾಧ್ಯ. ಆವಾಗಲೇ ಅಂತರಂಗ ಶುದ್ಧವಾಗಿರುತ್ತದೆ. ಅಂತಃಕರಣ ಶುದ್ಧವಾಗದಿದ್ದಲ್ಲಿ ದೇವರೇ ಸಾಕ್ಷತ್ ಕಾಣಿಸುವನು. ಮುಂಬಯಿ ಅಲ್ಲಿನ ಒಕ್ಕಲಿಗರ ಸಂಘಟನಾ
ಸಾಂಗತ್ಯ ಅಭಿನಂದನೀಯ. ತಮ್ಮೆಲ್ಲರ ಹಾಗೂ ಬಂಧು-ಭಕ್ತರ, ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ ಮುಂಬಯಿಯಲ್ಲೂ ಆದಿಚುಂಚನಗಿರಿ ಶೈಕ್ಷಣಿಕ ಸಂಸ್ಥೆಯ ಶಾಖೆ ಶೀಘ್ರವೇ ಪ್ರಾರಂಭವಾಗಲಿ ಎಂದು ನಿರ್ಮಲಾನಂದನಾಥಶ್ರೀಗಳು ಆಶಯ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ರಂಗಪ್ಪ ಸಿ.ಗೌಡರ ಅಧ್ಯಕ್ಷತೆಯಲ್ಲಿ ಜರುಗಿದ ಅಭೂತಪೂರ್ವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತ ರಾಷ್ಟ್ರದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಗೌರವ ಅತಿಥಿsಯಾಗಿ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಶಾಸಕ, ಒಕ್ಕಲಿಗ ಸಂಘ ಮಹಾರಾಷ್ಟ್ರ ಮುಂಬಯಿ ಸ್ಥಾಪಕಾಧ್ಯಕ್ಷ ಡಾ| ನಾರಾಯಣ ಆರ್.ಗೌಡ ಹಾಗೂ ಗೌರವ ಅತಿಥಿsಯಾಗಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಅತಿಥಿsಗಳಾಗಿ ಆದಿಚುಂಚನಗಿರಿ ಟ್ರಸ್ಟ್ನ ಡಾ| ಸುನೀಲ್ ಮಲ್ಲೇಶ್, ಉಪಸ್ಥಿತರಿದ್ದು, ವಿಶ್ವ ಒಕ್ಕಲಿಗ ಡೈರೆಕ್ಟರಿ ಸಂಪಾದಕ ಕೆ.ಟಿ ಚಂದ್ರು, ಕಸ್ಟಮ್ಸ್ನ ಉಪ ಆಯುಕ್ತ ಆರ್.ಸಿ ಚೇತನ್ ಹಾಗೂ ಗೌರವ ಡಾಕ್ಟರೇಟ್ ಪುರಸ್ಕೃತ ಡಾ| ಶಿವ ಎಂ.ಮೂಡಿಗೆರೆ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಹೆಚ್.ಡಿ ದೇವೇಗೌಡ ಮಾತನಾಡಿ ಅತ್ಯಂತ ಬಡತನ ರೇಖೆಯಿಂದ ಬಾಳುತ್ತಿದ್ದ ನಮ್ಮ ಸಮಾಜ ಅಂದಿನ ದಿನಗಳಲ್ಲಿ ಮುಂಬಯಿಗೆ ಕೂಲಿ ಮಾಡುವ ಟಾಂಗ ಹೊಡೆಯುವ ಇತ್ಯಾದಿ ಕೆಲಸಮಾಡಿ ಉದರ ಪೋಷಣೆಗಾಗಿ ಬಂದವರು. ಹೀಗಾಗಿ ನಮ್ಮ ಹಿರಿಯರು ರಾಷ್ಟ್ರವ್ಯಾಪಿ ಪಸರಿದ್ದಾರೆ. ಶ್ರಮಜೀವಿಗಳಾದ ಅವರ ತ್ಯಾಗಮಯ ಪರಿಶ್ರಮದಿಂದ ನೀವು ಪ್ರಸ್ತುತ ಸ್ವಲ್ಪಮಟ್ಟಿಗೆ ಸುಧಾರಿಸಿ ಕೊಂಡಿದ್ದೀರಿ. ಒಕ್ಕಲಿಗ ಎಂದರೆ ಭೂಮಿಪುತ್ರ. ಒಂದುಸ್ವಲ್ಪ ಜಾಗವಿದ್ದರೂ ಶ್ರಮಿಕರಾಗಿ ಬೆಳೆದವರಾಗಿದ್ದಾರೆ. ಆದರೆ ಒಗ್ಗಟ್ಟಿನ ಕೊರತೆಯಿಂದ ನಮ್ಮ ಸಮುದಾಯ ಶಕ್ತಿಯು ಕ್ಷಿಣಿಸುತ್ತಿರುವುದು ಶೋಚನೀಯ. ಗೌಡ ಒಂದು ಜಾತಿಯಲ್ಲ ಅದೊಂದು ವೃತ್ತಿಯಾಗಿದೆ. ಭೂಮಿಯನ್ನು ಉತ್ತು ಮೇಲೆಬರುವ ಸಮಾಜವಾಗಿದೆ. ಬಂಟರು ಮತ್ತು ಒಕ್ಕಲಿಗರು ಬೇರೆಯಲ್ಲ. ಘಟ್ಟದಿಂದ ಕೆಳಬಂದವರು ಬಂಟರಾದರೆ ಮೇಲೆ ಉಳಿದವರು ಒಕ್ಕಲಿಗರಾಗಿದ್ದರೆ. ನಮ್ಮೆಲ್ಲರನ್ನೂ ಒಗ್ಗೂಡಿಸುವಲ್ಲಿ ಪ್ರಸಕ್ತ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರಮಿಸುತ್ತಿರುವುದು ಶ್ಲಾಘನೀಯ. ಮುಂಬಯಿಯಲ್ಲಿನ ಒಕ್ಕಲಿಗರ ಬಂಟರ ಸಾಮರಸ್ಯತ್ವ ನಮ್ಮೆಲ್ಲರಿಗೂ ಮಾದರಿಯಾಗಿದ್ದು ಮುಂಬಯಿಯಲ್ಲಿನ ನಿಮ್ಮ ಸಾಧನೆ ಪ್ರಶಂಸನೀಯ. ಪದ್ಮಭೂಷಣ ಜಗದ್ಗುರು ಶ್ರೀ ಬಾಲಗಂಗಾಧರನಾಥೇಶ್ವರ ಮಹಾಗುರುಗಳ ಗುರುವಂದನಾ ಕಾರ್ಯಕ್ರಮ ಹಾಗೂ ಶ್ರೀಗಳ ಪಾದಪೂಜೆ ಕಾರ್ಯಕ್ರಮ ಅನುಕರಣೀಯ. ಇಂತಹ ಸದ್ಗುಣತೆವುಳ್ಳ ಒಕ್ಕಲಿಗರು ಅಂತರಿಕ ವೈಮನಸ್ಸು ಬಿಟ್ಟು ಒಗ್ಗಟ್ಟಿನೊಂದಿಗೆ ಬಾಳುವುದನ್ನು ಮೈಗೂಡಿಸಬೇಕು ಎಂದರು ಒಕ್ಕಲಿಗರು ಹಾಗೂ ಬಂಟರು ಒಂದೇ ಸಮುದಾಯಕ್ಕೆ ಸೇರಿದವರು. ಉಭಯ ಸಮುದಾಯಗಳು ಕರ್ನಾಟಕದಲ್ಲಿ ಬಲಿಷ್ಠವಾಗಿ ಬೆಳೆದಿವೆ ಎಂದು ಕರ್ನಿರೆ ವಿಶ್ವನಾಥ್ ತಿಳಿಸಿದರು. ಮುಂಬಯಿಯಲ್ಲಿನ ಸುಮಾರು 25ಲಕ್ಷ ಕನ್ನಡಿಗರಲ್ಲಿ ಬಹಳಷ್ಟುಮಂದಿ ಹೊಟ್ಟೆಪಾಡಿಗಾಗಿ ಬಂದವರು. ಮಾನ್ಯ ದೇವೆಗೌಡರು ಅಂದು ಪ್ರಧಾನಮಂತ್ರಿ ಆಗಿದ್ದರಿಂದ ಇಂದು ಕನ್ನಡಿಗರು ಮುಂಬಯಿಯಲ್ಲಿ ಉತ್ತಮಸ್ಥಿತಿಗೆ ಬಂದಿರುವರು. ಒಂದು ಮನೆಗೆ ಮೂರು ಬಾಗಿಲು ಮಾಡಬಾರದು. ಇದರಿಂದ ಯಾವನೊಬ್ಬನ ಉದ್ಧಾರ ಅಸಾಧ್ಯ. ನಮ್ಮಲ್ಲಿ ಜಾತಿಭೇದs ಕೂಡದು. ಬದಲಾಗಿ ನಾವು ಕನ್ನಡಿಗರಾಗಿ ಬಾಳಬೇಕು ಎಂದು ಶಾಸಕ ಡಾ| ನಾರಾಯಣ ಗೌಡ ಕರೆಯಿತ್ತರು. ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥಶ್ರೀಗಳು ಶ್ರೀ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮೀ ಮತ್ತು ದೈವಕ್ಯ ಯುಗಯೋಗಿ ಜಗದ್ಗುರು ಶ್ರೀ ಬಾಲಗಂಗಾಧರನಾಥೇಶ್ವರ ಮಹಾಗುರುಗಳಿಗೆ ಪೂಜೆ ನೆರವೇರಿಸಿ ಗುರುವಂದನೆಗೈದರು. ರಂಗಪ್ಪ ಸಿ.ಗೌಡರು ಪದಾಧಿಕಾರಿಗಳನ್ನು ಒಳಗೊಂಡು ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಾದಪೂಜೆ ನೆರವೇರಿಸಿ ಗುರುವಂದನೆ ಗೈದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಪುಟ್ಟಸ್ವಾಮಿ ಎನ್.ಗೌಡ, ಮೋಹನ್ಕುಮಾರ್ ಜೆ.ಗೌಡ, ಗೌ| ಕೋಶಾಧಿಕಾರಿ ರವೀಂದ್ರ ಎನ್.ಗೌಡ, ಜೊತೆ ಕಾರ್ಯದರ್ಶಿ ಮಂಜುನಾಥ ಕೆ.ಗೌಡ, ಜೊತೆ ಕೋಶಾಧಿಕಾರಿ ಮಂಜುನಾಥ ಸಿ.ಗೌಡ, ಆಡಳಿತ ಸಮಿತಿ ಸದಸ್ಯರುಗಳಾದ ಡಿ.ಎಸ್ ಮುತ್ತೇ ಗೌಡ, ಉಮೇಶ್ ಆರ್.ಗೌಡ, ವಿವಿಧ ಸ್ಥಳಿಯ ಸಮಿತಿ, ಮಹಿಳಾ ಮತ್ತು ಯುವ ವಿಭಾಗಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಡಾ| ಶಮಿತಾ ಮಲ್ನಾಡ್ ಅವರ ರೈತಗೀತೆಯೊಂದಿಗೆ ಸಮಾರಂಭ ಆದಿಗೊಂಡಿತು. ಶ್ರೀನಿವಾಸ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿ ಅತಿಥಿüಗಳನ್ನು ಪರಿಚಯಿಸಿದರು. ಗೌ| ಪ್ರ| ಕಾರ್ಯದರ್ಶಿ ಕೆ.ರಾಜೇ ಗೌಡ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ರಂಗಪ್ಪ ಸಿ.ಗೌಡವಂದನಾರ್ಪಣೆಗೈದರು. ಉತ್ಸವದಲ್ಲಿ ಹೆಸರಾಂತ ಚಲನಚಿತ್ರ ಹಿನ್ನೆಲೆ ಗಾಯಕಿ ಡಾ| ಶಮಿತಾ ಮಲ್ನಾಡ್, ಹಾಸ್ಯ ಕಲಾವಿದ ಬ್ಯಾಂಕ್ ಜನಾರ್ದನ್, ಹೊನ್ನಾವಳ್ಳಿ ಕೃಷ್ಣ, ಚಾ..ಚಾ.. ಬಿರಿಯಾನಿ ಮತ್ತು ತಂಡವು ವಿವಿಧ ಮನೋರಂಜನಾ ಕಾರ್ಯಕ್ರಮವನ್ನೂ ಹಾಗೂ ಒಕ್ಕಲಿಗ ಸಮಾಜದ ಮಕ್ಕಳು, ಮಹಿಳೆಯರು ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಬಹುರೂಪಿ ಕಲಾವಿದ ಎಸ್.ಪ್ರತಾಪ್ ಅವರು ಕ್ಷಣಾರ್ಧದಲ್ಲಿ ರಚಿಸಿದ ಹೆಚ್.ಡಿ ದೇವೇಗೌಡರ ಚಿತ್ರವನ್ನು ಅವರಿಗೆ ಅರ್ಪಿಸಿ ಶ್ಲಾಘನೆಗೆ ಪಾತ್ರರಾದರು.

























