ಮುಂಬಯಿ: ಮರಣದ ನಂತರ ಕಣ್ಣು ಮತ್ತು ದೇಹದಾನಕ್ಕೆ ಸಹಿ ಮಾಡಿರುವ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಉಪಾಧ್ಯಕ್ಷೆ ಎಚ್. ಕೃಷ್ಣಾಬಾಯಿಯವರ ಅಭಿನಂದನಾ ಸಭೆ ಜ. 31ರಂದು ಜರಗಿತು.
ಸಂಘದ ಅಧ್ಯಕ್ಷ ಎಂ.ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ಜರಗಿದ ಸಭೆಯಲ್ಲಿ ಮರಣದ ನಂತರ ದೇಹವನ್ನು ದಹನ ಅಥವಾ ದಫನ ಮಾಡುವುದು ಸರ್ವೇಸಾಮಾನ್ಯ.ಆದರೆ ದೇಹವನ್ನು ವಿದ್ಯಾಸಂಸ್ಥೆಗೆ ದಾನಮಾಡುವುದರಿಂದ ವಿದ್ಯಾರ್ಥಿಗಳಿಗೆ ಅದರ ಸದುಪಯೋಗವಾಗುವುದೆಂಬ ಪ್ರೇರಣೆ ನನಗುಂಟಾಯಿತು.ಮಗಳು, ಹತ್ತಿರದ ಬಂಧುಗಳು ನನ್ನ ಇಚ್ಚೆಗೆ ಸಹಮತ ವ್ಯಕ್ತಪಡಿಸಿದರು.ಮಗಳು, ಹತ್ತಿರದ ಬಂಧುಗಳು ನನ್ನ ಇಚ್ಚೆಗೆ ಸಹಮತ ವ್ಯಕ್ತಪಡಿಸಿದರು.ಅದರಿಂದಾಗಿ ಮಣಿಪಾಲದಕಸ್ತೂರ್ಬಾ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆದೇಹವನ್ನು ಮಣಿಪಾಲದಕಣ್ಣು ಬ್ಯಾಂಕಿನ ಸಂಸ್ಥೆಗೆ ಕಣ್ಣುಗಳ ದಾನದಕರಾರು ಪತ್ರಗಳಿಗೆ ಸಹಿ ಮಾಡುವಂತಾಯಿತೆಂಬ ಸಂಘದ ಉಪಾಧ್ಯಕ್ಷೆ ಅಭಿನಂದನೆ ಧನ್ಯವಾದ ಸಲ್ಲಿಸಿದರು.
ಪ್ರಾಥಮಿಕ ಶಾಲಾ, ಪ್ರೌಢಶಾಲಾ ಶಿಕ್ಷಕಿಯಾಗಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿ ನಿವೃತ್ತಿಯ ನಂತರ ಸಂಘದ ಉಪಾಧ್ಯಕ್ಷೆಯಾಗಿರುವ ಹಿರಿಯಡ್ಕಕೃಷ್ಣಾಬಾಯಿಯವರದೇಹ, ಕಣ್ಣುದಾನದ ನಿರ್ಧಾರ ಶ್ಲಾಘನೀಯಎನ್ನುವುದರೊಂದಿಗೆ ಸಭಾಧ್ಯಕ್ಷರು ಅಭಿನಂದಿಸಿದರು.
ಕಾರ್ಯದರ್ಶಿ ಎಸ್.ಎಸ್.ತೋನ್ಸೆ, ಜೊತೆ ಕಾರ್ಯದರ್ಶಿ ಪಾಂಡು ಎಂ.ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಿ.ರವಿನಾಥ ಶೆಟ್ಟಿ, ಕೆ. ಪುಷ್ಪಾ, ಪೀಟರ್‍ರಾಫೆಯಲ್‍ಅರನ್ನಾ ಅಭಿನಂದನಾ ಮಾತುಗಳಲ್ಲಾಡಿದರು.
