ಭಾರತ್ ಬ್ಯಾಂಕ್‍ಗೆ ಪ್ರಪ್ರಥಮ ಸ್ಥಾನ-ಸೇವಾ ಮುಕುಟಕ್ಕೆ
ಮುಂಬಯಿ:ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯು ವಾರ್ಷಿಕವಾಗಿ ಪ್ರದಾನಿಸುವ`ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ಈ ಬಾರಿಯೂ ತುಳು ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಸಂಸ್ಥೆಯ ಪಾಲಾಗಿದೆ ಎಂದು ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ. ಅಸೋಸಿಯೇಶನ್ ಈ ಬಾರಿ ಇಪ್ಪತ್ತನೇ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ಆಯೋಜಿಸಿದ್ದು, ವರ್ಷಂಪ್ರತಿ ಆಯ್ಕೆಗೊಳಿಸುವ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್‍ಗಳ ಸ್ಪರ್ಧೆಯಲ್ಲಿ 2014-2015ರ ಹಣಕಾಸು ಸಾಲಿನ 14,500 (ಹದಿನಾಲ್ಕುಸಾವಿರದ ಐನೂರು ಕೋಟಿ) ಮೊತ್ತಕ್ಕಿಂತ ಅಧಿಕ ಠೇವಣಿ ಹೊಂದಿದ ಸಹಕಾರಿ ಬ್ಯಾಂಕುಗಳ ಪೈಕಿ ನಿರ್ಣಾಯಕರ ಆಯ್ಕೆ ಪ್ರಕ್ರಿಯೆಯಂತೆ ಭಾರತ್ ಬ್ಯಾಂಕ್‍ಗೆ ಪ್ರಪ್ರಥಮ ಸ್ಥಾನ ಪ್ರಾಪ್ತಿಸಿದೆ. ಭಾರತ್ ಬ್ಯಾಂಕ್‍ನ ಸರ್ವೋತ್ಕೃಷ್ಟ ಗ್ರಾಹಕ ಸೇವೆ, ಸಮಗ್ರ ವ್ಯವಹಾರ ಮತ್ತು ಗ್ರಾಹಕಸ್ನೇಹಿ ವಾರ್ಷಿಕ ವರದಿಗಾಗಿ ಪ್ರಥಮ ಸ್ಥಾನದೊಂದಿಗೆ ಗೌರವಿಸಲ್ಪಡಲಿದೆ ಎಂದು ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವಾತಿ ಪಾಂಡೆತಿಳಿಸಿದ್ದಾರೆ.

ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಕೇಂದ್ರವಾಗಿಸಿ ಆಯ್ಕೆ ಗೊಳಿಸುವ ಪ್ರತಿಷ್ಠಿತ ಮತ್ತು ಗುಣಮಟ್ಟದ ಸಹಕಾರಿ ಬ್ಯಾಂಕ್‍ಗಳ ಸ್ಪರ್ಧೆಯಲ್ಲಿ ಸರ್ವ ವಿಭಾಗಗಳಿಂದ ನಮ್ಮೆಲ್ಲರ ಭಾರತ್ ಬ್ಯಾಂಕ್‍ಗೆ ಈ ಬಾರಿ ಪ್ರಪ್ರಥಮ ಸ್ಥಾನಕ್ಕೆ ಆಯ್ಕೆಗೊಂಡಿರುವುದು ಅತೀವ ಸಂತಸ ತಂದಿದೆ ಎಂದು ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಹರ್ಷವ್ಯಕ್ತ ಪಡಿಸಿದ್ದಾರೆ. ಇದು ಬ್ಯಾಂಕ್‍ನ ಎಲ್ಲಾ ಗ್ರಾಹಕ ಬಂಧುಗಳ ಮತ್ತು ಕರ್ಮಚಾರಿಗಳ ತ್ವರಿತ ಸೇವೆಗೆ ಸಂದ ಗೌರವವಾಗಿದೆ ಎಂದು ಉಪ ಕಾರ್ಯಾಧ್ಯಕ್ಷೆ ನ್ಯಾ|ರೋಹಿಣಿ ಜೆ.ಸಾಲ್ಯಾನ್ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಅಭಿಮಾನ ವ್ಯಕ್ತ ಪಡಿಸಿದ್ದಾರೆ.ಇದೇ ಫೆ.18ನೇ ಗುರುವಾರ ದಾದರ್ ಪಶ್ಚಿಮದ ಶಿವಾರ್ಜಿ ಪಾರ್ಕ್ ಇಲ್ಲಿನ ಸ್ವತಂತ್ರ್ಯ ವೀರ್ ಸಾವರ್ಕರ್ ರಾಷ್ಟ್ರೀಯ ಸ್ಮಾರಕ ಸಭಾಗೃಹದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನೇರವೇರಲಿದ್ದು, ಭವ್ಯ ಸಮಾರಂಭದಲ್ಲಿ ಪ್ರಶಸ್ತಿಯನ್ನು ಬ್ಯಾಂಕ್ ಮಂಡಳಿ ಸ್ವೀಕರಿಸಲಿದೆ ಎಂದು ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ತಿಳಿಸಿದ್ದಾರೆ.
