ಬಂಟ್ವಾಳ ಎಕ್ಸೆಲ್ ಕೋಚಿಂಗ್ ಸಂಸ್ಥೆ ವತಿಯಿಂದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಈಚೆಗೆ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಶಿಬಿರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಪ್ರೊ. ರೊನಾಲ್ಡ್ ಪಿಂಟೊ ಮಾಹಿತಿ ನೀಡಿದರು. ಸಂಸ್ಥೆ ಮುಖ್ಯಸ್ಥ ರೋಹನ್ ಕ್ರಾಸ್ತ, ಪ್ರಾಧ್ಯಾಪಕ ಉದಯ ಕುಮಾರ್, ಸೌಭಾಗ್ಯ ಎ. ಮತ್ತಿತರರು ಇದ್ದರು.

