ಎಡಪದವು: ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಎಡಪದವಿನ ಹಳೇ ವಿದ್ಯಾರ್ಥಿ ಸಿರಾಜುದ್ದೀನ್ ಚಾರ್ಟರ್ಡ್ ಎಕೌಂಟೆಂಟ್ ಎಫ್.ಸಿ,ಎ. ಹಾಜಿ ಇಸ್ಮಾಯಿಲ್ ಪದ್ರೆಂಗಿ ಎಡಪದವು ತನ್ನ ಶೈಕ್ಷಣಿಕ ಜೀವನದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಕ್ಲಿಷ್ಟಕರವಾದ ಎಫ್.ಸಿ,ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಜ್ಯಮಟ್ಟದಲ್ಲೂ ರಾಷ್ಟ್ರಮಟ್ಟದಲ್ಲೂ ದಾಖಲೆಯನ್ನು ನಿರ್ಮಿಸಿರುತ್ತಾರೆ. ಪ್ರತಿಮ ಸಾಧನೆಗೋಸ್ಕರ ಅಭಿನಂದನ ಕಾರ್ಯಕ್ರಮವನ್ನು ಫೆ.27ರಂದು ಶನಿವಾರ ಐಡಿಯಲ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರ ಮಾಜಿ ಉನ್ನತ ಶಿಕ್ಷಣ ಸಚಿವ ಸನ್ಮಾನ್ಯ ಹಾಜಿ ಬಿ.ಎ.ಮೊಹಿದೀನ್ ವಹಿಸಿದ್ದರು. ಗೌರವಧ್ಯಕ್ಷ ಮುಸ್ಲಿಂ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ಸ್ ಫೆಡರೇಶನ್ ದ.ಕ ಮತ್ತು ಉಡುಪಿ ಜಿಲ್ಲೆ ಉಪಸ್ಥಿತರಿದ್ದರು.
