ಮಂಗಳೂರು: ಧೂಮಪಾನ ಮಾಡುವವರಿಗೆ ಸಂತಸದ ಸುದ್ದಿ. ಧೂಮಪಾನಿಗಳನ್ನು ಗುರುತಿಸಿ ಅವರಿಗೆ ಯೋಗ್ಯ ಬಹುಮಾನವನ್ನು ನೀಡಲು ಬಿಜೈಯ ರಿಕ್ಷಾ ಚಾಲಕರು ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ಕುರಿತ ಬ್ಯಾನರ್ ಬರೆಸಿಹಾಕುವ ಮೂಲಕ ಧೂಮಪಾನ ವಿರೋಧಿ ಅಭಿಯಾನ ನಡೆಸುತ್ತಿರುವ ಬಿಜೈ ರಿಕ್ಷಾ ಚಾಲಕರ ಶ್ರಮ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
`ಧೂಮಪಾನ ಮಾಡುವವರಿಗೆ ಸಂತಸದ ಸುದ್ದಿ. ಪ್ರಥಮ ಬಹುಮಾನ ಮೃತ್ಯ, ಎರಡನೇ ಬಹುಮಾನ ಕ್ಯಾನ್ಸರ್, ಮೂರನೇ ಬಹುಮಾನ ಅಸ್ತಮಾ ಹಾಗೂ ಐದು ಸಮಾಧಾನಕರ ಬಹುಮಾನಗಳು ಕೆಮ್ಮು, ದಮ್ಮು, ನಪುಂಸಕತ್ವ, ನಿಶ್ಶಕ್ತಿ… ಬಹುಮಾನ ವಿತರಕರು ಶ್ರೀ ಶ್ರೀ ಯಮಧರ್ಮರಾಯರು, ಸಮಾರಂಭ ಸ್ಥಳ: ಹರಿಶ್ಚಂದ್ರ ಘಾಟ್ ಹೀಗೆ ಬರೆದಿರುವ ಬ್ಯಾನರ್ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹೊರಭಾಗದಲ್ಲಿರುವ ಪ್ರೀಪೇಡ್ ರಿಕ್ಷಾ ಕೌಂಟರ್ನಲ್ಲಿ ಕೆಲತಿಂಗಳಿಂದ ಕಾಣಿಸಿಕೊಂಡಿದೆ.
ದುಷ್ಚಟಗಳ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೈಯ ರಿಕ್ಷಾ ಚಾಲಕ ಮಿತ್ರರನ್ನು ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ. ಇದೇ ರೀತಿ ನಗರದ ವಿವಿಧೆಡೆಯ ರಿಕ್ಷಾ ಪಾರ್ಕ್ಗಳಲ್ಲಿ ಕಾಣಿಸುವಂತಾಗಲಿ ಎನ್ನುತ್ತಾರೆ ಪ್ರಜ್ಞಾವಂತ
ನಾಗರಿಕರು

