“ ಸರ್ವ ಪ್ರಗತಿ ಪಥದ ಮೂಲ ಆದಿ ಮತೃಭಾಷೆ” – ಶ್ರೀ ರಮೇಶ್ ಶೆಣೈ
ಶಾಲಾ ವಾರ್ಷಿಕೋತ್ಸವದಕನ್ನಡ ಹಬ್ಬದಲ್ಲಿ ಪಾಲುದಾರನಾಗಿರುವುದು ತುಂಬ ಸಂತೋಷವನ್ನುಂಟು ಮಾಡಿದೆ. ಅನ್ಯ ಭಾಷೆಗಳ ವ್ಯಾಮೋಹವಿಲ್ಲದೆ ಕೇವಲ ಮಾತೃ ಭಾಷೆಯಿಂದಲೇ ಅಭಿವೃದ್ಧಿ ಹೊಂದಿದ ಚೀನಾ ಮತ್ತು ಜಪಾನ ರಾಷ್ಟ್ರಗಳನ್ನು ನೋಡಿದರೆ ನಮಗೆ ಬೇಸರದ ಸಂಗತಿಯಾಗಬಹುದು, ಏಕೆಂದರೆ ಭಾರತೀಯರಾದ ನಾವು ಮಾತೃಭಾಷೆಯ ವೈವಿಧ್ಯತೆಯಜೊತೆಗೆಅನ್ಯ ಭಾಷೆಗಳಲ್ಲೂ ಪ್ರಬುದ್ಧತೆ ಹೊಂದಿದ್ದರೂಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರದಲ್ಲಿದ್ದೇವೆ. ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಅನಾವರಣಗೊಳಿಸಿದ ಸುಪ್ತ ಪ್ರತಿಭೆಯನ್ನು ಗುರುತಿಸುವುದು. ವಿದ್ಯೆಏಕಮುಖಿಯಾಗಿರದೇ-ಬಹುಮುಖಿಯಾಗಿರಬೇಕು. “ವಿದ್ಯಾಹೀನಂ ಪಶುಸಮಾನಂ” “ವಿದ್ಯೆಇಲ್ಲದವನು ಹದ್ದಿಗಿಂತ ಕೀಳು” ಎಂಬ ಗಾದೆಯಂತೆ ವಿದ್ಯೆಯಿಂದಲೇ ಸುಸಂಸ್ಕøತತೆ, ಮಾನವೀಯತೆ, ಮನುಷ್ಯತ್ವ, ಭಾವೈಕ್ಯತೆ, ಏಕತೆ, ರಾಷ್ಟ್ರೀಯ ಐಕ್ಯತೆ ಬೆಳೆಯುವುದು.ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠ, ಅನ್ನಒಬ್ಬ ವ್ಯಕ್ತಿಯನ್ನು ಕೇವಲ ಕೆಲವು ಸಮಯ ಮಾತ್ರ ಸಂತೃಪ್ತಿಗೊಳಿಸಿದರೆ, ವಿದ್ಯೆಯು ಹರಿಯುವ ನೀರಿನಂತೆ ಕುಲಗೋತ್ರಗಳೆನ್ನದೇ ಸರ್ವರನ್ನು ಸಂಪನ್ನಗೊಳಿಸುತ್ತದೆ.ಯಾವುದೇ ಭಾಷೆಯ ಮಾಧ್ಯಮವಿರಲಿ ಸಂಕುಚಿತ ಮನೋಭಾವನೆಯನ್ನು ತಾಳದೆ, ವಿಶಾಲ ದೃಷ್ಟಿಕೋನದಿಂದ, ಪ್ರಯತ್ನ, ಪ್ರಾಮಾಣಿಕತೆ, ಶಿಸ್ತಿನಿಂದ ಕಾರ್ಯ ಪ್ರವೃತ್ತಿಯಲ್ಲಿ ಮಗ್ನರಾಗಿರಬೇಕು. ಕಲಿಕೆಯು ಸಕಾರಾತ್ಮಕ, ಕ್ರಿಯಾತ್ಮಕ ಮತ್ತುಅಭಿರುಚಿಯಿಂದಕೂಡಿರಬೇಕು. ಮನಸಿದ್ದರೆ ಮಾರ್ಗ ಮಾತೃ ಭಾಷೆಕನ್ನಡದ ಬಗ್ಗೆ ಕೀಳಿರಿಮೆ ಬೇಡ. ಕನ್ನಡ ಮಾಧ್ಯಮದ ಪ್ರತಿಭೆಗಳು ಅತ್ಯಂತಉನ್ನತ ಮಟ್ಟದಅಧಿಕಾರ,ಅಂತಸ್ತು-ಸಂಪತ್ತನ್ನು ಪಡೆದು ಶ್ರೇಷ್ಠರೆನಿಸಿಕೊಂಡಿದ್ದಾರೆ.. ವಿದ್ಯೆಯನ್ನು, ಶಿಕ್ಷಣದ ಮೌಲ್ಯ ಮತ್ತು ಮಹತ್ವವನ್ನು ತಿಳಿದುಕೊಂಡ ವಿದ್ಯಾ ಪ್ರಸಾರಕ ಮಂಡಳವು ಸುಂದರ-ಸಮರ್ಥ-ಪ್ರಜಾರಾಜ್ಯ-ಸರ್ವೋದಯದರಾಷ್ಟ್ರಕ್ಕೆಬೇಕಾಗುವ ಆದರ್ಶಭರಿತ ನಾಗರಿಕರನ್ನುತಯಾರಿಸುವ ಸಮಾಜ, ದೇಶ ಸೇವೆಯಕಾರ್ಯವೈಖರಿಯನ್ನು ಪ್ರಶಂಸಿಸಿದ ಶಾಲಾ ವಾರ್ಷಿಕೋತ್ಸವದ ಸಮಾರಂಭಕ್ಕೆ ಮುಖ್ಯಅತಿಥಿ ಸ್ಥಾನದಿಂದ ದೀಪ ಪ್ರಜ್ವಲಿಸಿ, ಬಹುಮಾನ ವಿತರಿಸುತ್ತಾ, ಉಪದೇಶಿಸುತ್ತಾ ಶ್ರೀಯುತ ರಮೇಶ್ ಶೆಣೈಯವರು ಶುಭ ಹಾರೈಸಿದರು!

ಈ ಕಾರ್ಯಕ್ರಮದಅಧ್ಯಕ್ಷರು, ಮಂಡಳದ ಗೌರವ ಪ್ರಧಾನಕಾರ್ಯದರ್ಶಿಗಳಾದ ಡಾ|| ಪಿ. ಎಮ್. ಕಾಮತ್ರುದೀವಿಗೆಯನ್ನು ಹೊತ್ತಿಸಿ, ಅತಿಥಿಗಳಿಗೆ ಗೌರವಿಸುತ್ತಾ, ಬಹುಮಾನಗಳನ್ನು ವಿತರಿಸುತ್ತಾ, ವ್ಯವಸಾಯ, ಉದ್ಯೋಗವನ್ನು ಬದಿಗಿಟ್ಟು ಆಗಮಿಸಿದ ಪಾಲಕ ಬಂಧುಗಳಿಗೆ ವಂದಿಸುತ್ತಾಇಂದು ಮುಂಬಯಿಯಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗಣನೀಯವಾಗಿಕಡಿಮೆಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಮಾಧ್ಯಮಯಾವುದೇ
ಇರಲಿ ಉದ್ಯೋಗಕ್ಕೆಅಡ್ಡಿಯಾಗುವುದಿಲ.್ಲ ಕನ್ನಡ ಪಾಲಕ ಬಂಧುಗಳು ಇದರಕುರಿತುಕಟ್ಟೆಚ್ಚರವಹಿಸಬೇಕು. ಶಿಕ್ಷಣ ವ್ಯವಹಾರಿಕವಗಿರದೇ ಸಮಗ್ರ ಬದಲಾವಣೆಯಕಡೆಗುರುತಿಸುವಂತಿರಬೇಕು. ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಮಾತೃಭಾಷೆಯನ್ನು ನಿರ್ಲಕ್ಷಿಸಬಾರದು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವವಿದ್ಯಾರ್ಥಿಗಳು ಅಪಾರ ಮತ್ತುಅದ್ವಿತೀಯ ಪ್ರತಿಭಾವಂತರಾಗಿದ್ದಾರೆ. ಸದೃಡವಾದದೇಹದಲ್ಲಿ ಸದೃಡವಾದ ಮನಸ್ಸಿರುತ್ತದೆ. ಆರೋಗ್ಯವೇ ಭಾಗ್ಯಅದನ್ನುಕಾಪಾಡಿಕೊಂಡರೆ ಶಿಕ್ಷಣ ಕ್ಷೇತ್ರವಲ್ಲದೆಇತರ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಅಭಿವೃದ್ಧಿಗಾಗಿ 25000/- ದಾನ ಮಾಡಿದ ಶ್ರೀಮತಿ ಪ್ರಮೀಳಾ ಚಾರ್ರನ್ನು, ಉಚಿತವಾಗಿಕನ್ನಡ ಮಕ್ಕಳಿಗೆ ಚಿಕಿತ್ಸೆಯನ್ನು ಹಮ್ಮಿಕೊಳ್ಳುವ ಮೋಹನರ ಹೃದಯ ಶ್ರೀಮಂತಿಕೆಯನ್ನು ಶ್ಲ್ಯಾಘಿಸಿದರು.ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯದಲ್ಲಿ ಪಾಲಕರುಜಾಗೃತರಾಗಬೇಕಿದೆ. ತಮ್ಮ ಪರಿಸರದಲ್ಲಿರುವಕನ್ನಡದ ಮಕ್ಕಳನ್ನು ಶಾಲೆಗೆ ಕರೆತಂದರೆಅವರನ್ನು ಸಂಸ್ಥೆಯ ಸ್ಥಾಪನಾಚರಣೆಯ ಸಂದರ್ಭದಲ್ಲಿ ಮಾನ-ಸನ್ಮಾನ ಮಾಡಿ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸದಾ ಸೇವೆಗೆ ಸಿದ್ದವೆಂದು ಶುಭ ಹಾರೈಸಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವೇದಿಕೆಯ ಮೇಲೆ ಶ್ರೀಯುತ ರಮೇಶ್ ಶೆಣೈ,ಡಾ|| ಪಿ. ಎಮ್, ಕಾಮತ್, ಡಾ|| ಆರ್. ಕೆ. ಮೋಹನ್, ಪ್ರೋ|| ಸಿ. ಜೆ. ಪೈ , ಪ್ರಾಂಶುಪಾಲರಾದ ಶ್ರೀಮತಿ ನಿರುಪಾಜೊರಾಪರ, ಇದ್ದರೆ, ಪ್ರಾಂಶುಪಾಲೆ ಶ್ರೀಮತಿ ನಿರುಪಾಜೊರಾಪುರ, ಮುಖ್ಯೋಪಾಧ್ಯಾಯಿನಿ ಅರುಣಾ ಭಟ್ ವಿರಾಜಮಾನರಾಗಿದ್ದರೆ, ಸಮ್ಮೇಳನದಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಕ್ಷರಿಗೆ, ಸಂಸ್ಥೆಯ ಸಹ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಚಿತ್ರಾಕ್ಷಿ ಶೆಟ್ಟಿಯವರಿಗೆ ಹಾಗೂ ವ್ಹಿ. ಪಿ. ಎಮ್ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಕವಿತಾ ಶರ್ಮಾರವರಿಗೆ ಪ್ರಾಂಶುಪಾಲರಾದ ನಿರುಪಾಜೊರಾಪುರವರು ಪುಷ್ಪಗುಚ್ಛಕೊಟ್ಟು ಗೌರವಿಸಿ ವಾರ್ಷಿಕ ವರದಿಯನ್ನು ವಾಚಿಸಿದರು, ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಅರುಣಾ ಭಟ್ರು ಶ್ರೀಮತಿ ಪ್ರಮೀಳಾ ಚಾರ್ರಿಗೆ ಹೂಗೂಚ್ಛ ನೀಡಿ ವಂದಿಸಿ ವಾರ್ಷಿಕ ವರದಿ ಓದಿದರು.
ಅತಿಥಿ-ಅಧ್ಯಕ್ಷರ ಪರಿಚಯವನ್ನು ಶಿಕ್ಷಕಿ ಜಯಂತಿ ಐಲ್ ಮತ್ತುರಮೇಶಚಾನಕೋಟೆಯವರು ಮಾಡಿಕೊಟ್ಟರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಶೈಕ್ಷಣಿಕ ಮತ್ತುದತ್ತಿ ಬಹುಮಾನ ವಿಜೇತ ವಿದ್ಯಾರ್ಥಿಗಳ ಯಾದಿಯನ್ನು ಶಿಕ್ಷಕಿಯರಾದ ಲಕ್ಷ್ಮೀ ಕೆಂಗನಾಳ, ಸುನಿತಾ ಮಠ ಮತ್ತುಜಯಂತಿಐಲ್ಓದಿದರು.ಕಾರ್ಯಕ್ರಮದ ನಿರ್ವಹಣೆ ಮತ್ತು ಸ್ವಾಗತವನ್ನು ಶಿಕ್ಷಕಿ ಅಶ್ವಿನಿ ಬಂಗೆರಾರವರು ನಿರ್ವಹಿಸಿದರು.ಧನ್ಯವಾದವನ್ನು ಶಾಲೆಯ ಪರಿವೀಕ್ಷಕಿರತ್ನಾಕುಲಕರ್ಣಿಯವರುಗೈದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಸಮಾರೋಪಗೊಂಡಿತು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕøತಿಕಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಮನವನ್ನು ರಂಜಿಸಿದರು.

