ಮುಂಬೈ,:ಭಾರತ ಸಂವಿಧಾನದಿಂದ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಒಂದಾದ ಮೈಥಿಲಿ ಭಾಷೆಯ 12ನೆಯ ಅಂತಾರಾಷ್ಟ್ರೀಯ ಮೈಥಿಲಿ ಸಮ್ಮೇಲನವು ಈ ವರ್ಷ ಮುಂಬಯಿಯಲ್ಲಿ ಆಯೋಜಿಸಲಾಗಿದ್ದು, ಡಿಸೆಂಬರ್ 22 ಹಾಗೂ 23ರಂದು ಉಪನಗರ ವಿರಾರ್‍ನಲ್ಲಿರುವ ಎಚ್.ಬಿ.ಐ.ಎನ್. ಗ್ರೌಂಡ್ ಚಂದನ್‍ಪಾರ್ಕನಲ್ಲಿ ನಡೆಯಲಿದೆ. ಇದರ ಉದ್ಘಾಟನೆಯನ್ನು ಶ್ರೀ ಪ್ರಭಾತ ಝಾ( ಬಿಜೆಪಿ ರಾಷ್ಟ್ರೀಯ ಸಚಿವ) ಮಾಡಲಿದ್ದಾರೆ. ಆಹ್ವಾನಿತ ಅತಿಥಿಗಳಲ್ಲಿ ಶ್ರೀ ಪ್ರಣವ ಪಾಂಡ್ಯ (ಅಧ್ಯಕ್ಷರು ಅಖಿಲ ವಿಶ್ವ ಗಾಯತ್ರಿ ಪರಿವಾರ), ಬಿಹಾರ ರಾಜ್ಯದ ಸಚಿವರಾದ ಶ್ರೀ ಮಹೇಶ್ವರ ಪ್ರಸಾದ, ಶ್ರೀ ಅಶೋಕಕುಮಾರ ಮೆಹತಾ ಮತ್ತೂ ಹಲವಾರು ಪ್ರತಿಷ್ಠಿತರು ಇದ್ದಾರೆ.

24-12

 

ಭಾರತ ಸರಕಾರದಿಂದ ಮಾನ್ಯತೆ ಪಡೆದ ಎಲ್ಲ ಭಾರತೀಯ ಭಾಷೆಯ ಗಣ್ಯ ಲೇಖಕರನ್ನು ಸನ್ಮಾನಿಸಿ `ಮಿಥಿಲಾರತ್ನ’ ಎಂಬ ಪ್ರಶಸ್ತಿಯನ್ನು ಮಂಗಳವಾರ ಮಧ್ಯಾಹ್ನ ನಾಲ್ಕು ಗಂಟೆಗೆ ನೀಡಲಾಗುವುದು. ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು, ನಾಟಕಕಾರರು, ವಿಮರ್ಶಕರು, ಅಂಕಣಕಾರರು ಆದ ಡಾ| `ಜೀವಿ’ ಕುಲಕರ್ಣಿಯವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ   ಮಾಡಲಾಗಿದೆ. ದೇಶವಿದೇಶಗಳಿಂದ ಸುಮಾರು 25 ಸಾವಿರ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಮಹಾರಾಷ್ಟ್ರ ಮೈಥಿಲಿ ಸಮಾಜದ ಅಧ್ಯಕ್ಷರಾದ ಶ್ರೀ ರಬೀಂದ್ರ ಝಾ ತಿಳಿಸುತ್ತಾರೆ.

By Suddi9

Leave a Reply

Your email address will not be published. Required fields are marked *