• ಲಕ್ನೋ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಗುರುವಾರ ತಡರಾತ್ರಿ ಪ್ರತಿಕೂಲ ಹವಾಮಾನದ ಕಾರಣ ಆಗ್ರಾದಲ್ಲಿ ತುರ್ತಾಗಿ ಇಳಿಯಬೇಕಾಯಿತು.

    ಉತ್ತರ ಪ್ರದೇಶದಲ್ಲಿ ಸರಣಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂತಿಮವಾಗಿ ಗೋರಖ್‌ಪುರದಲ್ಲಿನ ಕಾರ್ಯಕ್ರಮ ಮುಗಿಸಿ ಸೋನಿಯಾ ಅವರು ಹೊಸದಿಲ್ಲಿಗೆ ಮರಳುತ್ತಿದ್ದರು. ಆದರೆ ದಿಲ್ಲಿಯಲ್ಲಿನ ಪ್ರತಿಕೂಲ ಹವಾಮಾನ, ಬಲವಾದ ಗಾಳಿಯಿಂದಾಗಿ ಸೋನಿಯಾ ಅವರ ವಿಮಾನಕ್ಕೆ ದಿಲ್ಲಿಯಲ್ಲಿ ಇಳಿಯಲು ಸಾಧ್ಯವಾಗಲಿಲ್ಲ.

    ಹಾಗಾಗಿ ವಿಮಾನವನ್ನು ಬಲವಂತಾಗಿ ತುರ್ತು ಅವತರಣ ನಿಯಮಗಳ ಬದ್ಧತೆಯೊಂದಿಗೆ ಆಗ್ರಾದ ಖೇರಿಯಾ ವಿಮಾನ  ನಿಲ್ದಾಣದಲ್ಲಿ ಇಳಿಸಲಾಯಿತು.

    ವಿಮಾನದ ತುರ್ತು ಅವತರಣದ ಬಳಿಕ ಸೋನಿಯಾ ಅವರು ಸುಮಾರ ಒಂದು ತಾಸು ಕಾಲ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ವಿಶ್ರಾಂತಿ ಪಡೆದು ಬಳಿಕ ದಿಲ್ಲಿಯಲ್ಲಿ ಅನುಕೂಲಕರ ಹವಾಮಾನ ಏರ್ಪಟ್ಟದ್ದನ್ನು ಅನುಸರಿಸಿ ಮತ್ತೆ ತಮ್ಮ ವಿಮಾನಯಾನವನ್ನು ಕೈಗೊಂಡರು.

    ಕಳೆದ ವಾರವಷ್ಟೇ  ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಲಕ್ನೊ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಯಬೇಕಾದ ಸ್ಥಿತಿ ಒದಗಿತ್ತು

By suddi9

Leave a Reply

Your email address will not be published. Required fields are marked *