ವಾರಾಣಸಿ; ಬಹಿರಂಗ ಪ್ರಚಾರಕ್ಕೆ ಮೇ.10ರಂದು ಶನಿವಾರ ರಾಹುಲ್ ಗಾಂಧಿ ವಾರಾಣಸಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್ ಅವರ ಭಾಷಣಗಳೆಲ್ಲಾ ಮುಗಿದ ಮೇಲೆ ಈಗ ರಾಹುಲ್ ಗಾಂಧಿಯ ಕರಾಮತ್ತು ಈ ಕ್ಷೇತ್ರದಲ್ಲಿ ನಡೆಯುತ್ತಿದೆ.image

ರಾಹುಲ್ ಗಾಂಧಿ ಶನಿವಾರ  ಪ್ರಚಾರ ಮಾಡಲು ನಿರ್ಧರಿಸಿರುವುದಕ್ಕೂ ಕಾರಣವಿದೆ. ಅಮೇಥಿ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗುವ ದಿನ ನರೇಂದ್ರ ಮೋದಿ ಅಲ್ಲಿ ಬೃಹತ್  ರಾ ಲಿ   ನಡೆಸಿ ಎಲ್ಲರನ್ನೂ ದಂಗುಬಡಿಸಿದ್ದರು. ಕಾಂಗ್ರೆಸ್, ಆಮ್ ಆದ್ಮಿ ಪ್ರಚಾರಗಳೆಲ್ಲಾ ಮುಗಿದ ಬಳಿಕ ಮೋದಿ ಸ್ಟಾರ್ ಅಟ್ರ್ಯಾಕ್ಷನ್ ಆಗಿಬಿಟ್ಟಿದ್ದರು. ಈಗ ವಾರಾಣಸಿಯಲ್ಲಿ ರಾಹುಲ್ ಗಾಂಧಿ ತಿರುಮಂತ್ರ ಹಾಕುವ ಇರಾದೆಯೊಂದಿಗೆ ಕೊನೆಯ ದಿನ ಪ್ರಚಾರ ನಡೆಸುತ್ತಿದ್ದಾರೆ.

ಇಂದು ರಾಹುಲ್ ಗಾಂಧಿ ಜೊತೆ ರ್ಯಾಲಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್, ಮಧುಸೂಧನ್ ಮಿಸ್ತ್ರಿ, ಸಿಪಿ ಜೋಶಿ, ರಾಜ್ ಬಬ್ಬರ್ ಮೊದಲಾದವರು ಭಾಗವಹಿಸುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಪರ ಪ್ರಚಾರ ಮಾಡುತ್ತಿದ್ದಾರೆ.
ಗೈ    ಅ ಮೇಥಿಯಲ್ಲಿ ನರೇಂದ್ರ ಮೋದಿ ಮಾಡಿದ ಮೋಡಿಯನ್ನ ವಾರಾಣಸಿಯಲ್ಲಿ ರಾಹುಲ್ ಗಾಂಧಿ ಮಾಡುತ್ತಾರೆಯೇ ಎಂಬುದನ್ನ ಕಾದುನೋಡಬೇಕು.

By suddi9

Leave a Reply

Your email address will not be published. Required fields are marked *