ಮುಂಬಯಿ ಸಂಸ್ಥೆಯಿಂದ ಸುವರ್ಣ ಮಹೋತ್ಸವ ಸಂಭ್ರಮ
ಮುಂಬಯಿ: ಮುಳೂರು ಸರಕಾರಿ ಮೀನುಗಾರಿಕಾ ಶಾಲಾ ಹಳೆ ವಿದ್ಯಾರ್ಥಿ  ಸಂಘ ಮುಂಬಯಿ ಸಂಸ್ಥೆಯು ತನ್ನ ಸುವರ್ಣ ಮಹೋತ್ಸವವನ್ನು ಇಂದಿಲ್ಲಿ ಆದಿತ್ಯವಾರ ಅಪರಾಹ್ನ ಮಾಟುಂಗ ಪೂರ್ವದ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸಿತು.
Mulur School Golden Jubliee (U-KB)-2

Mulur School Golden Jubliee (U-KB)-3

Mulur School Golden Jubliee (U-KB)-4

Mulur School Golden Jubliee (U-KB)-6

Mulur School Golden Jubliee (U-KB)-7

Mulur School Golden Jubliee-2

Mulur School Golden Jubliee-4

Mulur School Golden Jubliee-5

Mulur School Golden Jubliee-9

Mulur School Golden Jubliee-11

Mulur School Golden Jubliee-16

Mulur School Golden Jubliee-17

Mulur School Golden Jubliee-20ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕ್ ಆಫ್ ಇಂಡಿಯಾ ಮಾಜಿ ಮುಖ್ಯ ವ್ಯವಸ್ಥಾಪಕ ಸಂಜಿವ ಎನ್.ಸಾಲ್ಯಾನ್ ವಹಿಸಿ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಅತಿಥಿsಅಭ್ಯಾಗತರುಗಳಾಗಿ ಉದ್ಯಮಿಗಳಾದ ಶ್ರೀನಿವಾಸ್ ಎನ್.ಕಾಂಚನ್ ಮತ್ತು ರತ್ನಾಕರ ಪಿ.ಪುತ್ರನ್ ಉಪಸ್ಥಿತರಿದ್ದು, ಶುಭಾರೈಸಿದರು. ಈ ಸಂದರ್ಭದಲ್ಲಿ ಮುಳೂರು ಸರಕಾರಿ ಮೀನುಗಾರಿಕಾ ಶಾಲಾ ಹಳೆ ವಿದ್ಯಾಥಿರ್s ಸಂಘ ಮುಂಬಯಿ ಅಧ್ಯಕ್ಷ ಕೃಷ್ಣಪ್ಪ ಕೆ.ಬಂಗೇರ, ಉಪಾಧ್ಯಕ್ಷ ಜಗದೀಶ್ ಆರ್. ಕರ್ಕೇರ, ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ, ಜೊತೆ ಕಾರ್ಯದಶಿ ರಘುವೀರ್ ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಾಂಡುರಂಗ ಆರ್.ಕರ್ಕೇರ, ಸಚಿನ್ ಕುಮಾರ್ ಕೋಟ್ಯಾನ್, ಪ್ರದೀಪ್ ಬಂಗೇರ, ವಸಂತ ಕಾಂಚನ್, ಪ್ರಶಾಂತ್ ಸುವರ್ಣ, ತಿಲಕ್ ಕಾಂಚನ್, ಸುವರ್ಣ ಮಹೋತ್ಸವ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಎನ್.ಕಾಂಚನ್, ಉಪ ಕಾರ್ಯಾಧ್ಯಕ್ಷ ನಾರಾಯಣ ಜಿ.ಪೂಜಾರಿ, ಸದಾನಂದ ಎಸ್.ಬಂಗೇರ, ಕಾರ್ಯದರ್ಶಿ ಸದಾಶಿವ ಕರ್ಕೇರ, ಜೊತೆ ಕಾರ್ಯದರ್ಶಿ ರಾಜೇಶ್ ಎಸ್.ಕೋಟ್ಯಾನ್, ಸದಸ್ಯರುಗಳಾದ ಗೋಪಾಲ ಸಿ. ಕಾಂಚನ್, ಯೋಗೆಶ್ ಜೆ.ಬಂಗೇರ, ರಘುನಾಥ್ ಎಸ್.ಸಾಲ್ಯಾನ್, ಗಿರಿಧಾರ್ ಸಿ.ಸುವರ್ಣ, ಆನಂದ್ ಆರ್.ಕರ್ಕೇರ, ಸತೀಶ್ ಅಂಚನ್, ಎಸ್.ಆರ್.ಕುಮಾರ್ ಸೇರಿದಂತೆ ಶಶಿಕುಮಾರ್ ಸುವರ್ಣ, ರಾಜೇಶ್ ಮೂಳೂರು ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ವಿವಿಧ ನೃತ್ಯ, ಸಂಗೀತ ಸೇರಿದಂತೆ ವಿನೋದಾವಳಿ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಹಾಗೂ ವಿಧಾತ್ರಿ ಕಲಾವಿದರು ಕೈಕಂಬ ಕುಡ್ಲ ತಂಡವು `ನಿಕ್ಕ್ ಗೊತ್ತುಂಡಾ’ ತುಳು ಹಾಸ್ಯಮಯ ನಾಟಕ ಪ್ರದರ್ಶಿಸಿತು. ಜೊತೆ ಕಾರ್ಯದರ್ಶಿ ಪ್ರಫುಲ್‍ಚಂದ್ರ ಬಿ.ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *