ಮುಂಬಯಿ: ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಮಠಾಧೀಶರಾದ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ ನೂತನವಾಗಿ ನಿರ್ಮಿಸಲಾಗುವ ಶಿಲಾಮಯ ಮಂದಿರಕ್ಕೆ ಇಂದಿಲ್ಲಿ ಭಾನುವಾರ ಸಂಜೆ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ನೀಡಿ ಮಂದಿರದ ಕಾಮಗಾರಿ ಪರಿಶೀಲಿಸಿದರು.

ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ರಾಮದಾಸ ಉಪಾಧ್ಯಾಯ ಮತ್ತು ಸಂಗಡಿಗರು ಪೇಜಾವರಶ್ರೀ ಅವರ ಪಾದಪೂಜೆ ನೆರವೇರಿಸಿ ಬರಮಾಡಿಕೊಂಡು ನೂತನವಾಗಿ ನಿರ್ಮಿಸಲಾಗು ತ್ತಿರುವ ಶಿಲಾಮಯ ಮಂದಿರದ ಕಾಮಗಾರಿಗಳ ಮಾಹಿತಿಯನ್ನಿತ್ತರು.
ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಸ್ಥಾನೀಯ ಸಮಿತಿ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಗೌರವ ಕಾರ್ಯದರ್ಶಿ ಅವಿನಾಶ್ ಶಾಸ್ತ್ರಿ, ಮಠದ ಶಾಖಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ನಿರಂಜನ್ ಗೋಗ್ಟೆ, ಶ್ರೀಹರಿ ಭಟ್, ಆಶಾ ಎ.ರಾವ್, ಆರ್ಕಿಟೆಕ್ ವಿನಯರಾಜ್ ಸುವರ್ಣ, ಧನರಾಜ್ ಪುತ್ರನ್, ಶೇಖರ್ ಸಾಲ್ಯಾನ್ ಸಾಂತಕ್ರೂಜ್ ಮತ್ತಿತರರು ಉಪಸ್ಥಿತರಿದ್ದರು.
2016ನೇ ಜನವರಿ 04ರಂದು ನೂತನ ಮಂದಿರದಲ್ಲಿ ಪೇಜಾವರಶ್ರೀಗಳು ಅಂದು ಪಟ್ಟದ ದೇವರನ್ನೊಳಗೊಂಡು ಪೂಜಾಧಿಗಳನ್ನು ನೆರವೇರಿಸಿ ಶ್ರೀಕೃಷ್ಣ ದೇವರನ್ನು ಪ್ರತಿಷ್ಠಾಪಿಸಿ ಬ್ರಹ್ಮಕಲಶ ನಡೆಸಿ ಮುಂಬಯಿ ನಗರದಲ್ಲಿನ ಉಪಸ್ಥಿತ ಭಕ್ತರನ್ನು ಆಶೀರ್ವಚಿಸಲಿದ್ದಾರೆ. ಆ ಪ್ರಯುಕ್ತ ಭಕ್ತಾಭಿಮಾನಿಗಳಿಗೆ ಬೆಳ್ಳಿ ಮತ್ತು ತಾಮ್ರದ ಕಲಶವನ್ನಿತ್ತು ಶ್ರೀದೇವರ ಸೇವೆಗೈಯಲು ಅನುಕೂಲ ಕಲ್ಪಿಸಲಾಗುತ್ತಿದ್ದು ಶ್ರೀಗಳು ಅವರನ್ನು ಹರಸಲಿದ್ದಾರೆ.ಅದೇ ದಿನ ಸಂಜೆ 4.00 ಗಂಟೆಗೆ ಉಡುಪಿಯಲ್ಲಿ ಪರ್ಯಾಯಪೂರ್ವಭಾವಿ ಸಾಂಪ್ರದಾಯಿಕ ಪುರಪ್ರವೇಶಗೈದು ತಮ್ಮ ಐತಿಹಾಸಿಕ ಐದನೇ ಪರ್ಯಾಯ ಸರ್ವಜ್ಞ ಪೀಠಾರೋಹಣಕ್ಕೆ ಪೂರ್ವಭಾವಿ ಸಿದ್ಧತೆ ನಡೆಸುವರು ಎಂದು ರಾಮದಾಸ ಉಪಾಧ್ಯಾಯ ತಿಳಿಸಿದ್ದಾರೆ.
ಕೆ.ವಿ ಮೂರ್ತಿ ಯೆರ್ಕಡಿತ್ತಾಯ, ಪೆರ್ಣಂಕಿಲ ಹರಿದಾಸ ಭಟ್, ಕೃಷ್ಣ ಯಾದವ ಆಚಾರ್ಯ, ಬಿ.ಶ್ರೀಪತಿ ರಾವ್, ಅರುಣಾ ನಾಗೇಂದ್ರ ಆಚಾರ್ಯ, ಟಿ.ಬಿ ಹುಣ್ಣೂರು, ಕೆ.ಕೃಷ್ಣರಾಜ ತಂತ್ರಿ, ಕೈರಬೆಟ್ಟು ವಿಶ್ವನಾಥ ಭಟ್, ಆರ್.ವಿ ಕಲ್ಲೂರಾಯ, ಭಾರ್ಗವ ಆಚಾರ್ಯ

