ಮುಂಬಯಿ: ಭಾರತವು ಸುಸಂಸ್ಕೃತರ ಬೀಡು ಆಗಿದ್ದು ಇಲ್ಲಿನ ಸಂಸ್ಕೃತಿಯೇ ಭಕ್ತರ ಜೀವನಾಡಿಯಾಗಿದೆ. ಪುಣ್ಯಾಧಿ ಶ್ರಿನಿವಾಸ ಕಲ್ಯಾಣೋತ್ಸವದಂತಹ ಕಾರ್ಯಕ್ರಮಗಳು ಧಾರ್ಮಿಕ ಸಂಪತ್ತನ್ನು ಹೆಚ್ಚಿಸುತ್ತದೆ. ಆದುದರಿಂದ ಅಜ್ಞಾನನದ ತಿಮಿರವನ್ನು ಹೋಗಲಾಡಿಸಿ ಸುಸ್ಕೃಂತರ ನಾಗರೀಕರನಾಗಿಸಲು ಇಂತಹ ಪುಣ್ಯಾಧಿ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅನುಗ್ರಹಿಸಿದರು.
BSKBA Shrinivasa Kalyanotsava-13

BSKB Assn Srinivasa Kalyanosrava Inau-1

BSKB Assn Srinivasa Kalyanosrava Inau-A1

BSKB Assn Srinivasa Kalyanosrava Inau-A3

BSKB Assn Srinivasa Kalyanosrava Inau-A4

BSKB Assn Srinivasa Kalyanosrava Inau-B5

BSKB Assn Srinivasa Kalyanosrava Inau-B6

BSKB AssnShrinivasa God's Procession-3

BSKB AssnShrinivasa God's Procession-4

BSKBA Shrinivasa Kalyanotsava-2

BSKBA Shrinivasa Kalyanotsava-5

BSKBA Shrinivasa Kalyanotsava-8

BSKBA Shrinivasa Kalyanotsava-10

BSKBA Shrinivasa Kalyanotsava-11

ಬಿಎಸ್ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ಸಂಸ್ಥೆಯು ತಿರುಮಲ ತಿರುಪತಿ ದೇವಸ್ಥಾನಂ ಸಹಯೋಗದಲ್ಲಿ ಕಳೆದ ಭಾನುವಾರ ಸಂಜೆ ಸಯಾನ್ ಪೂರ್ವದ ಕಿಂಗ್ಸರ್ಕಲ್ನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ನೆರವೇರಿಸಿದ ಪುಣ್ಯಾಧಿ ಶ್ರೀಶ್ರಿನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬಿಎಸ್ಕೆಬಿಎ ಸಂಸ್ಥೆಯ ಬೃಹತ್ ಯೋಜನೆಗಳ `ಗೋಕುಲ್ ಪ್ರೊಜೆಕ್ಟ್ಸ್ ವ್ಹಿಜನ್ 2020’ನ್ನು ಚಾಲನೆ ನೀಡಿ ಮಾತನಾಡಿದರು.

ಇದು ಮುಂಬಯಿ ಜನತೆಯ ಕಲ್ಯಾಣ ಸಾರುವ ಕಾರ್ಯಕ್ರಮವೂ ಹೌದು. ಕಾರ್ಯಕ್ರಮದಲ್ಲಿ ಸಹಭಾಗಿಗಳಾದ ಸರ್ವರೂ ಭಾಗ್ಯಶಾಲಿಗಳು. ಭಕ್ತರ ಉದ್ಧಾರಕ್ಕಾಗಿನ ಇಂತಹ ಕಾರ್ಯಕ್ರಮಗಳು ಅಭಿನಂದನೀಯ. ಹಿಂದೂ ಸಮಾಜದ ಐಕ್ಯತೆಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಭಾರತದಲ್ಲಿ ಅವತರಿಸಿದ ವೆಂಕಟೇಶ್ವರನು ಸರ್ವರ ರಕ್ಷನಾಗಿದ್ದು, ಜೀವನದ ಧನ್ಯತೆಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಿದೆ. ಇದು ಆಧ್ಯಾತ್ಮದ ಐಶ್ವರ್ಯವನ್ನು ಹೆಚ್ಚಿಸುತ್ತದೆ. ಇದರಿಂದ ರಾಷ್ಟ್ರದಲ್ಲಿನ ಅನಾಚಾರಗಳ, ದುಷ್ಟರ ನಿರ್ಣಾಮಗೊಂಡು ಸರ್ವರಲ್ಲಿ ನೆಮ್ಮದಿಯ ಬದುಕು ತಲೆದೋರಲಿ. ಬ್ರಾಹ್ಮಣರಲ್ಲಿನ ವೈಧಿಕತೆಯಿಂದ ಸಮಾಜದ ಐಕ್ಯತೆ ಸಾಧ್ಯವಾಗಿದ್ದು, ಭಕ್ತರಲ್ಲಿ ವಿಶ್ವಾಸ ಮೂಡಿಸುವಲ್ಲಿ ಬ್ರಾಹ್ಮಣರ ಪಾತ್ರವು ಮಹತ್ತರವಾಗಿದೆ. ಧಾರ್ಮಿಕ ಮತ್ತು ಅಧ್ಯಾತ್ಮಿಕ ಸೇವೆಯಿಂದ ಮುನ್ನಡೆಯುತ್ತಿರುವ ಮುಂಬಯಿಯಲ್ಲಿನ ಗೋಕುಲವು ಭಕ್ತರ ಪುಣ್ಯಧಾಮವಾಗಿದೆ. ಆದುದರಿಂದ ಸರ್ವರ ಪರಿಶ್ರಮ ಫಲದಾಯಕ ಆಗುತ್ತಾ ಗೋಕುಲ ಯೋಜನೆಗಳು ಫಲಪ್ರದವಾಗಲಿ. ಗೋಕುಲವು ಧರ್ಮ ಸಂಸ್ಕೃತಿಯ ನೆಲೆಯಾಗಿದ್ದು, ಲೋಕದ ಜನರೆಲ್ಲರ ಉದ್ಧಾರ ಬಯಸುವ ಈ ಸಂಸ್ಥೆಯ ಸರ್ವ ಯೋಜನೆಗಳು ಕ್ರಿಯಾತ್ಮಕವಾಗಿ ಬೆಳೆದು ಶೀಘ್ರವೇ ಕಾರ್ಯಸಿದ್ಧಿಗೊಳ್ಳಲಿ ಎಂದೂ ಪೇಜಾವರಶ್ರೀಗಳು ಅನುಗ್ರಹಿಸಿದರು.

ತಿರುಮಲ ತಿರುಪತಿ ದೇವಸ್ಥಾನದ ಆರ್ಚಕರಾದ ವೇಣುಗೋಪಾಲ ದಿಕ್ಷಿತರ್, ಬಿ.ಆರ್ ಗುರುರಾಜ ರಾವ್, ಆನಂತ್ ಆಚಾರ್ಯ ಪುಣ್ಯಾಧಿ ಧಾರ್ಮಿಕ ಕಾರ್ಯಕ್ರಮವನ್ನು ನಾದ, ವೇದ, ಗೀತಾ ಸಂಭ್ರಮಗಳೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿಸಿ ಮಹಾಪ್ರಸಾದ ವಿತರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು. ಬಿಎಸ್ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್, ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪೆರ್ಣಂಕಿಲ ಹರಿದಾಸ್ ಭಟ್ ಮತ್ತು ಪೂರ್ಣಿಮಾ ಹರಿದಾಸ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಸದಸ್ಯ ಬಿ.ರಮಾನಂದ ರಾವ್ ಮತ್ತು ಲಕ್ಷ್ಮೀ ರಮಾನಂದ್ ದಂಪತಿಗಳು ಪೂಜಾಧಿಗಳ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸರ್ವೊಚ್ಚ ನ್ಯಾಯಲಯದ ನಿವೃತ್ತ ನ್ಯಾಯಧೀಶ ಜಸ್ಟಿಸ್ ಬಿ.ಎನ್ ಶ್ರೀಕೃಷ್ಣ, ಶ್ರೀ ಷಣ್ಮುಖಾನಂದ ಟ್ರಸ್ಟ್ನ ಅಧ್ಯಕ್ಷ ವಿ.ಶಂಕರ್, ತಿರುಪತಿ ಶ್ರೀಶ್ರಿನಿವಾಸ ಕಲ್ಯಾಣೋತ್ಸವ ಯೋಜನಾ ಮುಖ್ಯಸ್ಥ ಅಶೋಕ್ ಕುಮಾರ್, ಉದ್ಯಮಿಗಳಾದ ಮಹೇಶ್ ವಾದ್ವಾ, ಎಲ್.ವಿ ಅಮೀನ್, ಜಯಕೃಷ್ಣ ಶೆಟ್ಟಿ, ರವೀಂದ್ರನಾಥ ಎಂ.ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬಿಎಸ್ಕೆಬಿಎ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಪಿ.ಉಮೇಶ್ ರಾವ್, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜೊತೆ ಕಾರ್ಯದರ್ಶಿ ಗಳಾದ ಚಂದ್ರಶೇಖರ್ ಭಟ್ ಮತ್ತು ಪ್ರಶಾಂತ್ , ಜೊತೆ ಕೋಶಾಧಿಕಾರಿಗಳಾದ ಕುಸುಮಾ ಶ್ರೀನಿವಾಸ್ ಮತ್ತು ಅವಿನಾಶ್ ಶಾಸ್ತ್ರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಿನಿ ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಸದಸ್ಯರುಗಳಾದ ಎ.ಎಸ್ ರಾವ್, ಆರ್.ಎಲ್ ಭಟ್, ಕೃಷ್ಣ ಆಚಾರ್ಯ, ಡಾ| ವ್ಯಾಸರಾಯ ನಿಂಜೂರು ಸೇರಿದಂತೆ ಇತರೇ ಪದಾಧಿಕಾರಿಗಳು, ಸದಸ್ಯರು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಿರುಪತಿಯಿಂದ ಬರಮಾಡಿಕೊಂಡ ಶ್ರೀವೆಂಕಟೇಶ್ವರ, ಶ್ರೀದೇವಿ, ಶ್ರೀಭೂದೇವಿಯರನ್ನು ಚೆಂಡೆವಾದ್ಯಗಳ ನೀನಾದದೊಂದಿಗೆ ಸಾಂಪ್ರದಾಯಿಕ ಕುಂಭಸ್ವಾಗತದೊಂದಿಗೆ ಭವ್ಯ ವೈಭವೋಪೇತ ಮೆರವಣಿಗೆಯಲ್ಲಿ ಷಣ್ಮುಖಾನಂದ ಸಭಾಗೃಹಕ್ಕೆ ತಂದು ಪೂಜಿಸಲಾಯಿತು. ತಿರುಪತಿ ದೇವಸ್ಥಾನದ ಪುರೋಹಿತರು ಪ್ರಸಾದವಾಗಿ ತಿರುಪತಿಲಡ್ಡು ವಿತರಿಸಿದರು. ನೆರೆದ ಭಕ್ತರು ತಿರುಪತಿ ವೆಂಕಟೇಶ್ವರ ದೇವರ ಸಾಕ್ಷತ್ ದಿವ್ಯದರ್ಶನ ಪಡೆದು ಶ್ರೀನಿವಾಸರ ಕೃಪೆಗೆ ಪಾತ್ರರಾದರು.

ಬಿಎಸ್ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಸ್ವಾಗತಿಸಿ ಯೋಜನೆಗಳ ಫಲಾನುಭವ ಸಮಾಜದ ಜನತೆಗೆ ವರವಾಗಲಿದೆ ಎಂದರು. ಕಲ್ಯಾಣೋತ್ಸವ ಸಮಿತಿ ಕಾಯರ್ಾಧ್ಯಕ್ಷ ಪೆರ್ಣಂಕಿಲ ಹರಿದಾಸ್ ಭಟ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಮೈತ್ರಿನಿ ರಾವ್ ಉಡುಪಿ ಹಾಗೂ ಜಿ.ಮುನಿಲಕ್ಷಿ ್ಮ ಮತ್ತು ಸಂಗಡಿಗರು ಭಕ್ತಿಲಹರಿ ಪ್ರಸ್ತುತ ಪಡಿಸಿದರು. ಎಸ್.ಮುರಳೀಧರ್ ಕಲ್ಯಾಣೋತ್ಸವ ಕಾರ್ಯಕ್ರಮ ನಿರೂಪಿಸಿದರು. ಗೋಕುಲ ಮಂದಿರದ ಪ್ರಧಾನ ಅರ್ಚಕ ಮುಚ್ಚೂರು ಹರಿ ಭಟ್ ಪೂಜೆ ನೆರವೇರಿಸಿದರು. ಬಿಎಸ್ಕೆಬಿಎ ಗೌ| ಪ್ರ| ಕಾರ್ಯದಶರ್ಿ ಪಿ.ಸಿ.ಎನ್ ರಾವ್ ವಂದನಾರ್ಪಣೆಗೈದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *