ಮುಂಬಯಿ, ನ.15: ರಾಷ್ಟ್ರದ ಭವಿಷ್ಯ ಯುವ ಪೀಳಿಗೆಯಲ್ಲಿದ್ದು ತಮ್ಮ ತಮ್ಮ ಯುವ ಜನತೆ ಸಮಾಜವನ್ನು ಯುವ ಜನತೆ ಮುನ್ನಡೆಸಿದಾಗ ರಾಷ್ಟ್ರದ ಒಟ್ಟು ಏಳಿಗೆ ಸಾಧ್ಯವಾಗುವುದು. ಆದುದರಿಂದ ಯುವ ಜನತೆ ಸಮಾಜ ಮುನ್ನಡೆಸುವ ನಿರ್ಣಾಯಕ ಪಾತ್ರ ವಹಿಸಬೇಕು. ಇಂತಹ ಉದ್ದೇಶವನ್ನಿರಿಸಿ ಯುವಜನತೆಯನ್ನು ಪ್ರೇರೆಪಿಸುವ ಇಂತಹ ಕಾರ್ಯಕ್ರಮಗಳು ಫಲಪ್ರದವಾಗಬೇಕು. ಈ ಬಿಲ್ಲವರ ಅಸೋಸಿಯೇಶನ್ ಲಕ್ಷಲಕ್ಷಾಂತರ ಜನತೆಯ ಪಾಲಿಗೆ ವರವಾಗಿ ಯುವ ಜನತೆಗೆ ದಾರಿದೀಪವಾಗಿದೆ. ನಮ್ಮಲ್ಲಿನ ದಾಮೋದರ ಬಂಗೇರಾ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಸ್ವತಂತ್ರ ರಾಷ್ಟ್ರಕ್ಕಾಗಿ ಶ್ರಮಿಸಿದ್ದಾರೆ.
ಯುವ ಜನತೆ ಸಮಾಜ ಮುನ್ನಡೆಸಬೇಕು : ಜಯ ಸುವರ್ಣ
ಮುಂಬಯಿ ಹೈಕೋರ್ಟ್ನ ಮೇಲೆ ರಾಷ್ಟ್ರಧ್ವಜ ಹಾರಿಸಿದ ಇವರು ಜೈಲುವಾಸ ಸೇರಿ ಹುತಾತ್ಮರೆಣಿಸಿದ್ದಾರೆ. ಮಹಾತ್ಮ ಗಾಂಧೀಜಿ ಅವರೇ ದಾಮೋದರ ಬಂಗೇರಾ ಅವರನ್ನು ಬಹದ್ಧೂರು ಎಂದು ಬಣ್ಣಿಸಿ ಬರೆ ಪತ್ರವೇ ಇದಕ್ಕೆ ಸಾಕ್ಷಿಯಾಗಿದೆ. ಇವರಂತಹ ಮೇಧಾವಿಗಳ ಪ್ರೇರಣೆ ನಮ್ಮ ಯುವ ಜನತೆ ಪಡೆಯಬೇಕು. ನಾವು ಪರರಿಗಾಗಿ ಬದುಕಿದಾಗಲೇ ನಮ್ಮ ಜೀವನ ಹಸನಾಗುವುದು ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಕರೆಯಿತ್ತರು.
ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಗುರುನಾರಾಯಣ ಮಾರ್ಗದಲ್ಲಿನ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯುವಾಭ್ಯುದಯ ಉಪಸಮಿತಿಯು ಆಯೋಜಿಸಿದ್ದ `ಬಿಲ್ಲವರ ಯುವೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಜಯ ಸುವರ್ಣರು ಯುವ ಜನತೆಗೆ ಕರೆಯಿತ್ತರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾರತ್ ಬ್ಯಾಂಕ್ನ ನಿರ್ದೇಶಕರುಗಳಾದ ಕೆ.ಎನ್ ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ ಮತ್ತು ಹಾಗೂ ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ. ಪೂಜಾರಿ ಮತ್ತು ಡಾ| ಯು. ಧನಂಜಯ ಕುಮಾರ್, ಗೌ| ಕೋಶಾಧಿಕಾರಿ ಮಹೇಶ್ ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ ಶ್ರೀಮತಿ ಶಕುಂತಳಾ ಕೆ.ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯರ ತ್ಯಾಗಮಯ ಜೀವನ ಯುವಪೀಳೀಗೆಯು ಕೈಗನ್ನಡಿಯಾಗಿಸಬೇಕು. ಪಾಲಕರ ಮತ್ತು ಹಿರಿಯ ನಾಗರಿಕರ ಮಾದರಿ ಜೀವನವನ್ನು ಮೈಗೂಡಿಸಿದಾಗಲೇ ನಮ್ಮ ಬದುಕು ಕೂಡಾ ಇತರರಿಗೆ ಮಾದರಿಯಾಗಬಲ್ಲದು. ಸಜ್ಜನರ ಆದರ್ಶಗಳನ್ನು ಪರಿಪಾಲಿಸಿ ಸಾಮರಸ್ಯದ ಬದುಕಿಗೆ ಮಹತ್ವ ನೀಡಿದಾಗಲೇ ಎಲ್ಲರ ಜೀವನ ಪಾವನವಾಗಬಲ್ಲದು ಕೆ.ಎನ್ ಸುವರ್ಣ ತಿಳಿಸಿದರು.
ಯುವ ವಿಭಾಗದ ಸದಸ್ಯರುಗಳಾದ ಹರೀಶ್ ಜಿ. ಸಾಲ್ಯಾನ್, ಸದಾಶಿವ ಎ.ಕರ್ಕೇರ, ರವೀಂದ್ರ ಎ.ಅಮೀನ್, ನಾಗೇಶ್ ಎಂ.ಕೋಟ್ಯಾನ್, ರಜಿತ್ ಎಲ್.ಸುವರ್ಣ, ದೀಪಕ್ ಸುವರ್ಣ, ಲತೇಶ್ ಎಂ. ಪೂಜಾರಿ, ಯಶವಂತ್ ಪೂಜಾರಿ ಪಲಿಮಾರು, ಗೋಪಾಲ್ ಕೆ.ಸಾಲ್ಯಾನ್ ಸೇರಿದಂತೆ ಅಸೋಸಿಯೇಶನ್ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಯುವ ವಿಭಾಗೀಯ ಮುಖ್ಯಸ್ಥರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯುವ ವಿಭಾಗದ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು ಸ್ವಾಗತಿಸಿದರು. ಧನಂಜಯ ಎಸ್. ಕೋಟ್ಯಾನ್ ಪ್ರಸ್ತಾವಿಕ ನುಡಿಗಳನ್ನಾಡಿ ಪ್ರಾರ್ಥನೆಗೈದು ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಶನ್ ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ರವಿ ಎ.ಸನೀಲ್, ಅಕ್ಷಯ್ ಪೂಜಾರಿ, ಕು| ಅನುಷಾ ಮೋಹನ್ ಪೂಜಾರಿ ಮತ್ತು ಆಶೀಶ್ ಬಿಲ್ಲವ ಮತ್ತಿತರರು ಯುವೋತ್ಸವ ಸ್ಪರ್ಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಯುವ ವಿಭಾಗದ ಗೌರವ ಕಾರ್ಯದರ್ಶಿ ಉಮೇಶ್ ಎನ್.ಕೋಟ್ಯಾನ್ ವಂದಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್












