ಮುಂಬಯಿ: ಬೊಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಾಯನ್ ಮುಂಬಯಿ ಸಂಸ್ಥೆಯು ನ.29ನೇ ಭಾನುವಾರ ಸಂಜೆ ಸಯಾನ್ ಪೂರ್ವದ ಕಿಂಗ್‍ಸರ್ಕಲ್ ಅಲ್ಲಿನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ಶ್ರೀ ಶ್ರಿನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನೆರವೇರಿಸಲಾಗುವುದು. ಇದೇ ಶುಭಾವಸರದಲ್ಲಿ ಗಣ್ಯರ ಅಭಯ ಹಸ್ತದಲ್ಲಿ `ಗೋಕುಲ್ ಪೆÇ್ರಜೆಕ್ಟ್‍ಸ್ ವಿಜನ್-2020’ಗೆ ಚಾಲನೆ ನೀಡಲಾಗುವುದು ಎಂದು ಬಿಎಸ್‍ಕೆಬಿಎ ಅಧ್ಯಕ್ಷಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದ್ದಾರೆ.
Gokula Krishna-Balajiಓಂ ನಮೋ ವೆಂಕಟೇಶಯ: ತಿರುಮಲ ತಿರುಪತಿ ದೇವಸ್ಥಾನದ ಆರ್ಚಕರು ಈ ಪುಣ್ಯಾಧಿ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ ಶ್ರೀ ತಿರುಮಲ ತಿರುಪತಿ ಬಾಲಜಿ ದೇವರ ದರ್ಶನ ಮತ್ತು ಪೂಜಾಧಿಗಳೊಂದಿಗೆ ಮಹಾಪ್ರಸಾದವನ್ನೀಡಿ ಸದ್ಭಕ್ತರನ್ನು ಹರಸಲಿದ್ದಾರೆ. ಭಕ್ತಾಭಿಮಾನಿಗಳು ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಶ್ರೀ ತಿರುಪತಿ ಬಾಲಜಿ ದೇವರನ್ನು ಆರಾಧಿಸಿ ಪೂಜಿಸಿ ಧನ್ಯರೆಣಿಸಲು ಬಿಎಸ್‍ಕೆಬಿಎ ಪದಾಧಿಕಾರಿಗಳು ಹಾಗೂ ಕಾರ್ಯಕ್ರಮದ ಸಂಘಟಕರು ಈ ಮೂಲಕ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *