ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ವೈದಿಕ ಪರಂಪರೆಯಲ್ಲಿ ಎಲ್ಲಾ ತರಹದ ಪೂಜೆಗಳಲ್ಲಿ ಜಲತತ್ತ್ವದ ಪೂಜೆಯು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಲಶಾರಾಧನೆಯ ಬಗ್ಗೆ ಕಿರು ಲೇಖನವನ್ನು ತಮ್ಮಲ್ಲರ ಮುಂದಿಡುತ್ತೇನೆ.

ಭಗವಂತನು ನಮ್ಮ ಜೀವನದ ಉದ್ದಾರಕ್ಕೋಸ್ಕರ ಅನೇಕ ರೀತಿಯ ಸವಲತ್ತುಗಳನ್ನು ಮನುಷ್ಯರಿಗಲ್ಲದೆ ಸಮಸ್ತ ಜೀವರಾಶಿಗಳಿಗೂ ಅನುಗ್ರಹಿಸಿರುತ್ತಾನೆ. ಅದರಲ್ಲಿ ಭೂಮಿ, ನೀತು, ಅಗ್ನಿ, ವಾಯು, ಆಕಾಶಗಳೆಂಬ ಪಂಚತತ್ತ್ವಗಳು ಅತೀ ಮಹತ್ತವನ್ನು ಹೊಂದಿರುತ್ತದೆ. ಎಲ್ಲಾ ಪೂಜಾ ವಿಧಿ ವಿಧಾನಗಳಲ್ಲಿ ಮುಖ್ಯವಾಗಿ ಉಪಯೋಗಿಸಲ್ಪಡುವುದೇ ಜಲತತ್ವ. ವೈದಿಕ ವಿಧಿಗಳಲ್ಲಿ ಕಲಶಾರಾಧನಾ ಪೂರ್ವಕವಾಗಿ ಮಾಡತಕ್ಕ ಕಲ್ಫೋಕ್ತ ಪೂಜೆಯು ಬಹಳವಾಗಿ ಪ್ರಚಲಿತದಲ್ಲಿದೆ. ಶ್ರೀ ಸತ್ಯ ನಾರಾಯಣ ವೃತ್ತ, ನಾಗಪಂಚಮಿ, ವಿನಾಯಕ, ವರಮ ಮಹಾಲಕ್ಷ್ಮಿ, ಸೋಮವಾರ ವೃತ್ತ, ಸ್ವರ್ಣ ಗೌರಿ, ಮಂಗಳ ಗೌರಿ, ಅನಂತಪದ್ಮನಾಭ ವೃತ್ತ, ಋಷಿಪಂಚಮಿ ವೃತ ಇತ್ಯಾದಿ ಎಲ್ಲಾ ಪೂಜೆಯಲ್ಲಿಯೂ ಕಲಶವೇ ಪ್ರಧಾನ ಪಾತ್ರ ವಹಿಸುತ್ತದೆ.

Kalasha Aaraadhane-2 Kalasha Aaraadhane-1
ಕಲಶದ ಮುಖ ಭಾಗದಲ್ಲಿ ವಿಷ್ಣುವಿನ ಸನ್ನಿಧಾನ ಕುತ್ತಿಗೆ ಭಾಗದಲ್ಲಿ ರುದ್ರ ದೇವರು ಮೂಲ ಭಾಗದಲ್ಲಿ ಬ್ರಹ್ಮ ದೇವರು. ಮಧ್ಯ ಭಾಗದಲ್ಲಿ ಮಾತೃಕಾ ದೇವತೆಗಳು, ಹೊಟ್ಟೆಯ ಭಾಗದಲ್ಲಿ ಸಮಸ್ತ ಸಾಗರಗಳೂ ಸಪ್ತದ್ವೀಪಗಳು ಭೂದೇವೀ ಸಾನ್ನಿಧ್ಯವೂ ನೆಲೆಸಿರುತ್ತದೆ. ಶಾಂತಿ ದೇವತೆಗಳು ಗಾಯತ್ರೀ, ಸಾವಿತ್ರೀ, ಸರಸ್ಮತೀ ನಿರುಏದಾದಿ ದೇವತೆಗಳೂ ಅಲ್ಲದೆ ಗಂಗಾದಿ ಸರ್ಚ ದೇವತಾ ಸನ್ನಿಧಾನವು ಕಲಶದಲ್ಲಿ ನೆಲೆಸಿರುತ್ತದೆ.

ಕಲಶಾರಾಧನ ಸಮಯದಲ್ಲಿ ಗಂಗಾದಿ ಸರ್ವತೀರ್ಥಗಳನ್ನು ಋಷಿವಂದೊಧ್ಯಾನ ಮೂಲಮಂತ್ರಾಭಿಮಂತ್ರಣ ಸಹಿತವಾಗಿ ಆರಾಧಿಸಬೇಕು. ಕಲಶದ ಬುಡದಲ್ಲಿ ಇರಿಸತಕ್ಕ ಭತ್ತವು ಪಾದದ ಸಂಕೇತ. ನಂತರ ಅಕ್ಕಿಯು ಮೊಣಕಾಲು ಹಾಗೂ ಮಂಡಿಯ ಸಂಕೇತ. ಅಕ್ಕಿಯ ಮೇಲೆ ಇರಿಸತಕ್ಕ ಅಡಿಕೆಗಳು ಇಂದ್ರಾದಿ ದಿಕ್ಪಾಲಕರ ಸಂಕೇತ. ಕಲಶಕ್ಕೆ ಸುತ್ತುವ ನೂಲು ನಾಡೀ ಸಂಕೇತ. ಕಲಶದೊಳಗೆ ಪಂಚವ್ಯವನ್ನು ಸೇರಿಸುವ ಪದ್ದತಿಯೂ ಇದೆ. ಪಂಚಗವ್ಯವೆಂದರೆ ಗೋಮೂತ್ರ, ಗೋಮಯ, ಹಾಲು, ಮೊಸರು, ಆಕಳ ತುಪ್ಪ ಹಾಗೂ ಕುಶೋದಕ. ಎಲ್ಲಾ ದ್ರವ್ಯಗಳಿಗೆ ಸಂಬಧಿಸಿದ ಮಂತ್ರಗಳ ಮೂಲಕ ಆಯಾಯ ದೇವತೆಗಳನ್ನು ಆವಾಹಿಸಿ ಪೂಜಿಸಬೇಕು. ಕಲಶದ ಪಾತ್ರೆಯು ತಾಮ್ರದ್ದು ಆಗಿದ್ದಲ್ಲಿ ಪಂಚಗವ್ಯವನ್ನು ಸೇರಿಸುವುದು ಸಮಂಜಸವಲ್ಲ.

ಕಲಶದಲ್ಲಿ ಇರಿಸತಕ್ಕ ಪಂಚಪಲ್ಲವಗಳು ನಮ್ಮ ಶರೀರದೊಳಗಿರುವ ನಾಡಿಗಳ ಸಂಕೇತ. ಪಂಚಪಲ್ಲವಗಳೆಂದರೆ ಅಶ್ವತ್ಥ, ಅತ್ತಿ, ಕಿರ್ಗೋಳಿ, ಮಾವು, ಹಲಸು ಈ ವೃಕ್ಷಗಳ ತುದಿಗಳು. ವಿಶೇಷವಾದ ತಂಧೋದಕ ಹಾಗೂ ಕೆಲವು ಕ್ಷೀರ ವೃಕ್ಷದ ತೊಗಟೆಯ ಕಷಾಯದೊಂದಿಗೆ ಶತೌಷಧಿಯನ್ನೂ ಸೇರಿಸಬೇಕು. ಅದು ರಕ್ತದ ಸಂಕೇತ. ಕಲಶದಲ್ಲಿ ಇರಿಸತಕ್ಕ ಬಂಗಾರ ಪ್ರಾಣ ಹಾಗೂ ಪಂಚರತ್ನವು ಅಸ್ಥಿಯ ಸಂಕೇತ. ಕಲಶದೊಳಗಿರತಕ್ಕ ಕೂರ್ಚವು ನಾಲಿಗೆ. ನಂತರ ಮೇಲೆ ಇರಿಸತಕ್ಕ ತೆಂಗಿನಕಾಯಿ ತಲೆ ಹಾಗೂ ಅದರಲ್ಲಿ ಆವರಿಸಿರೆತಕ್ಕ ಸಿಪ್ಪೆ ಕೂದಲಿನ ಸಂಕೇತ. ಕಲಶದ ಮೇಲೆ ಹೊದಿಸಿರುವ ವಸ್ತುವು ಚರ್ಮ ಹಾಗೂ ತೆಂಗಿನಕಾಯಿಯ ಎರಡು ಕಣ್ಣುಗಳು ನೇತ್ರ ಸಂಕೇತ. ನೇತ್ರದ ಕೆಳಗೆ ಇರುವ ಚಿಹ್ನೆಯೇ ಬಾಯಿ. ನಂತರ ಕಲಶದ ಮೇಲೆ ಇರಿಸತಕ್ಕ ಕೂರ್ಚ ಭಗವಂತನ ಕಿರೀಟ. ಭಗವಂತನ ಶರೀರದ ಕಲ್ಪನೆಯೇ ಕಲಶಾರಾಧನೆ. ಬ್ರಹ್ಮಕಲಢೋತ್ಸವದಲ್ಲಿ ಕಲಾವಾಹನೆ ಹಾಗೂ ನ್ಯಾಸಾದಿಗಳಿಂದ ಅರ್ಚಿಸಲ್ಪಡುವ ವಿಶೇಷವಾದ ಕಲಶವು ಜಪ, ಅರ್ಚನಾದಿಗಳಿಂದ ಕೂಡಿರುತ್ತದೆ. ಅಂತಹ ಪವಿತ್ರವಾದ ಕಲಶವನ್ನು ಬಿಂಬಕ್ಕೆ ಅಭಿಪೇಕ್ಷಿಸಿದಾಗ ಬಿಂಬದಲ್ಲಿ ಸ್ಥಿರವಾದ ಸಾನ್ನಿಧ್ಯ ವೃದ್ಧಿಗೊಂಡು ನಮಗೆಲ್ಲರಿಗೆ ಇಷ್ಟಾರ್ಥಗಳನ್ನು ಕೊಡುವಂತಹ ಶಕ್ತಿ ಪ್ರಾಪ್ತಿಯಾಗುತ್ತದೆ.

ಮೃತ್ಯುಂಜಯ ಯಾಗ, ನವಗ್ರಹ ಹಾಗೂ 50ನೇ ವರ್ಷದಿಂದ 100ನೇ ವರ್ಷದವರೆಗೆ ಪ್ರತೀ ಐದೈದು ವರ್ಷಗಳಿಗೊಮ್ಮೆ, ಬೇರೆ ಬೇರೆ ಹೆಸರಿನ ಶಾಂತಿಗಳನ್ನು ನಡೆಸುವ ವಿಧಿ ವಿಧಾನಗಳೂ ಇವೆ. ಎಲ್ಲಾ ಶಾಂತಿ ಹಾಗೂ ಕರ್ಮಗಳಲ್ಲಿ ಕಲಶ ಪೂಜೆಯ ನಂತರ ಕತೃ ಗಳಿಗೆ ಅಭಿಷೇಕಿಸಿ ಕಲಶತೀರ್ಥ ಪ್ರಾಶನೆಯನ್ನು ಮಾಡುವ ಪದ್ಧತಿಯು ಈಗಲೂ ಇದೆ. ಈ ಕಲಶಾರಾಧನೆಯಿಂದ ಕೀರ್ತಿ ಲಾಭ, ಆಯುಷ್ಯ ವೃದ್ಧಿ, ಪ್ರಜ್ಞಾ ಶಕ್ತಿ ಹಾಗೂ ಮೇಧಾ ಶಕ್ತಿಗಳು ವೃದ್ಧಿಸುತ್ತದೆ. ಸಂಪತ್ತು ಅಭಿವೃದ್ಧಿ, ಬಲ ಉತ್ತಮವಾದ ಯೋಗ್ಯತೆ, ಪಾಪಗಳ ಪರಿಹಾರ ಹಾಗೂ ಪುಣ್ಯ ವೃದ್ಧಿ ಇತ್ಯಾದಿ ಉತ್ತಮ ಫಲಗಳನ್ನು ನಮ್ಮ ಜೀವನದಲ್ಲಿ ಅನುಭವಿಸಬಹುದು.

ಕಲಶ: ಕೀರ್ತಿ  ಮಾಯುಶ್ಚ ಪಜ್ಷಾಂ ಮೇಧಾಂ ಶ್ರಿಯಂ ಬಲಂ! ಯೋಗ್ಯತಾಂ ಪ್ರಾಪಹಾನಿಂ ಚಪುಣ್ಯ ವೃದ್ಧಿಂಚ ಸಾಧಯೇತ್|| ಸವರ್ೇ ಜನಾಃ ಸುಖಿನೋ ಭವಂತು| ಸಮಸ್ತ ಸನ್ಮಂಗ ಲಾನಿ ಭವಂತು|| ತಮ್ಮೆಲರ ಹಿತಚಿಂತಕ.
ಬಿ.ಶಂಕರನಾರಾಯಣ ತಂತ್ರಿ
ಡೊಂಬಿವಿಲಿ ಪಶ್ಚಿಮ, ಮುಂಬಯಿ.

By suddi9

Leave a Reply

Your email address will not be published. Required fields are marked *