ಮೂಡುಬಿದರೆ: ಹತ್ಯೆಗೀಡಾಗಿರುವ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಗೋವಾ ತುಳುಕೂಟದ ಪಣಜಿ ಶಾಖೆಯಿಂದ 1,15,500 ರೂ.ಗಳನ್ನು ಮಂಗಳವಾರ ಹಸ್ತಾಂತರಿಸಲಾಯಿತು.

ತುಳುಕೂಟದ ಪದಾಧಿಕಾರಿಗಳಾದ ರಾಮಕೃಷ್ಣ ಶೆಟ್ಟಿ ಬೆಳುವಾಯಿ, ವಿಜಯ ಶೆಟ್ಟಿ, ಸೂರಜ್ ರೈ ಉಡುಪಿ, ಭವಾನಿ ಶಂಕರ್, ರಾಜಕೀಯ ಮುಖಂಡರಾದ ಕೆ.ಪಿ ಜಗದೀಶ್ ಅಧಿಕಾರಿ, ಲಕ್ಷ್ಮಣ್ ಪೂಜಾರಿ, ಭಾಸ್ಕರ ಆಚಾರ್ಯ ಬೆಳುವಾಯಿ, ಭರತ್ ಕುಮಾರ್ ಶೆಟ್ಟಿ, ಸುನೀಲ್ ಇರುವೈಲ್ ಉಪಸ್ಥಿತರಿದ್ದರು.

