ಜನತೆಯ ಭದ್ರತೆಯೇ ಪೋಲಿಸರ ಆದ್ಯತೆ: ಐಪಿಎಸ್ ಅತುಲ್ಚಂದ್ರ
ಮುಂಬಯಿ: ಮೋಡೆಲ್ ಬ್ಯಾಂಕ್ನ ನೂರರ ಸಂಭ್ರಮ ಅಮರವಾದದ್ದು. ಇಷ್ಟೊಂದು ಸುದೀರ್ಘವಾದ ಕಾಲಾವಧಿಯಲ್ಲಿ ನೂರಾರು ಶಾಖೆಗಳನ್ನು ತೆರೆಯನ್ನು ತೆರೆಯದೆ ಆಯ್ದ ಗ್ರಾಹಕರ ವಿಶ್ವಾಸದ ಖಾತೆಗಳನ್ನು ಭದ್ರಪಡಿಸಿ ಗುರುತರವಾದ ಶುದ್ಧಾಂಗ ಸೇವೆ ನೀಡಿರುವುದು ಶ್ಲಾಘನೀಯ. ಆರ್ಥಿಕ ಕಾಲದ ಸಂಕಷ್ಟವಧಿಯಲ್ಲೂ ಜನಸೇವೆಯಲ್ಲಿ ತೊಡಗಿಸಿ ಅಮೂಲ್ಯವಾದ ಸೇವೆ ನೀಡಿರುವುದೇ ಈ ಸಂಸ್ಥೆಯ ಮೈಲುಗಲ್ಲು ಆಗಿದೆ. ವಿಶ್ವಾಸ, ಸೇವೆ ಮತ್ತು ವೇಗದಾಯಕ ಸೇವೆ ಸದ್ಯದ ಜನತೆಯ ಅಗತ್ಯವಾಗಿದೆ. ಪ್ರಸಕ್ತ ಜನತೆಯಲ್ಲಿ ಸಹನಶೀಲತೆಯ ಕೊರತೆಯಿದ್ದು ಇದನ್ನರಿತು ವಿಧೇಯಕ ಸೇವೆಗೆ ಬದ್ಧರಾದಲ್ಲಿ ಮಾತ್ರ ಸಂಸ್ಥೆಗಳನ್ನು ಸಲೀಸಾಗಿ ಮುನ್ನಡೆಸಬಹುದು. ಇದು ಸಮನ್ವತೆಯಿಂದ ಸಾಧ್ಯವಾಗುವುದು. ತಾವೆಲ್ಲರೂ ಪ್ರಾಮಾಣಿಕತೆಯನ್ನು ರೂಪಿಸಿ ಬದುಕನ್ನು ಮುನ್ನಡೆಸಿರಿ. ಇದು ಕಾಲಕ್ರಮೇಣ ಸತ್ಯತೆಯನ್ನೊಂದಿ ನೆಮ್ಮದಿಯ ಬದುಕನ್ನು ಪ್ರಾಪ್ತಿಸುತ್ತದೆ. ನಿಷ್ಠಾವಂತರಾಗಿದ್ದು ನಮ್ಮೊಂದಿಗೆ ಸಹಕರಿಸಿದ್ದಲ್ಲಿ ನಿಮ್ಮ ನಿಷ್ಠೆಗೆ ನಾವು ಬದ್ಧರಾಗಿದ್ದೇವೆ. ಜನತೆಯ ಭದ್ರತೆಯೇ ಪೋಲಿಸರ ಆದ್ಯತೆ ಎಂದು ಬೃಹನ್ಮುಂಬಯಿ ಪೊಲಿಸ್ ಕಮೇಶನರೇಟ್ನ ಅಪರಾಧ ವಿಭಾಗೀಯ ಜಂಟಿ ಪೋಲಿಸ್ ಆಯುಕ್ತ ಅತುಲ್ಚಂದ್ರ ಕುಲ್ಕರ್ಣಿ (ಐಪಿಎಸ್) ತಿಳಿಸಿದರು.
ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಅಂಧೇರಿ ಪಶ್ಚಿಮದ ಸೀಸ್ಹರ್ ರಸ್ತೆಯಲ್ಲಿನ ಸುವಿಧಾ ಸ್ಕ್ವಾ ್ಯರ್ ಕಟ್ಟಡದಲ್ಲಿ ಮಾಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ 14ನೇ ಶಾಖೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಅತುಲ್ಚಂದ್ರ ಮಾತನಾಡಿದರು.
ಮಾಡೇಲ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು.ಡಿ’ಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಲ್ಲಿ ಅಂಧೇರಿ ಪಶ್ಚಿಮದ ಅಂಭೋಲಿ ಅಲ್ಲಿನ ಸೈಂಟ್ ಬ್ಲೈಸ್ ಚರ್ಚ್ನ ಪ್ರಧಾನ ಧರ್ಮಗುರು ರೆ| ಫಾ| ಫ್ರಾಂಕ್ಲಿನ್ ಮಥಾಯಸ್ ದೀಪ ಪ್ರಜ್ವಲಿಸಿ ಆಶೀರ್ವಚನಗೈದು ನೂತನ ಶಾಖೆಯನ್ನು ವಿಧುಕ್ತವಾಗಿ ಸೇವಾರ್ಪಣೆಗೈದರು.
ಗ್ರಾಹಕರ ಸೇವೆಯನ್ನು ಅತ್ತ್ಯುನ್ನತವಾಗಿ ಪರಿಗಣಿಸಿದ ಸಾಂಪ್ರಾದಾಯಿಕ ಬ್ಯಾಂಕ್ ಎಂಬುವುದನ್ನು ಅರಿತಿದ್ದೇನೆ. ನೂತನ ಹಣಕಾಸು ವ್ಯವಸ್ಥೆಗೆ ಸ್ಪಂದಿಸಬಲ್ಲ ಈ ಸಹಕಾರಿ ಬ್ಯಾಂಕ್ ನಮ್ಮ ಈ ಪ್ರದೇಶದ ಜನತೆಯ ಸೇವೆಗೆ ಸಿದ್ಧವಾಗಿರುವುದು ಅಭಿನಂದನೀಯ. ಪರಿಸರಸಯ್ಯ ಯೋಜನೆಗಳಿಗೆ ಸ್ಪಂದಿಸಿ ಜನಪರ ಸೇವೆಯೊಂದಿಗೆ ಬ್ಯಾಂಕ್ ಸರ್ವೋನ್ನತಿ ಪಡೆಯಲಿ ಎಂದು ಫಾ| ಮಥಾಯಸ್ ಹಾರೈಸಿದರು.
ಆಲ್ಬರ್ಟ್ ಡಿ’ಸೋಜಾ ಅಧ್ಯಕ್ಷೀಯ ನುಡಿಗಳನ್ನಾಡಿ ಮೋಡೆಲ್ ಬ್ಯಾಂಕ್ ಯುವ ಉದ್ಯಮಿಗಳ ಪೆÇ್ರೀತ್ಸಾಹಕ ಬ್ಯಾಂಕು ಆಗಿದ್ದು, ಜನಸಾಮಾನ್ಯರನ್ನು ಶ್ರೀಮಂತರನ್ನಾಗಿಸುವ ಸುಲಭ ವ್ಯವಸ್ಥೆಯ ಆಥಿರ್üಕ ನೆರವು ಸಂಸ್ಥೆಯಾಗಿದೆ. ಜಗತೀಕರಣ ಮತ್ತು ಉದಾರೀತಣದ ನೀತಿಯು ರಾಷ್ಟ್ರದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿತ್ತೀಯ ಮಾರುಕಟ್ಟೆಗಳನ್ನು ಏಕತ್ರೀಕರಣ ಗೊಳಿಸಲು ಸಹಕಾರಿ ಆಗಿರುವುದರಿಂದ ಹಣಕಾಸು ರಂಗದಲ್ಲಿ ಸ್ಪರ್ಧಾತ್ಮಕತೆಯೊಂದಿಗೆ ವ್ಯವಹಾರ ವೆಚ್ಚ ಕಡಿಮೆ ಮಾಡಿಸಲು ಉಪಕಾರಿಯಾಗಿದೆ. ಬ್ಯಾಂಕ್ ಸದಾ ಸಮತೋಲನವುಳ್ಳ ವ್ಯವಹಾರಕ್ಕೆ ಸ್ಪಂದಿಸುತ್ತಿದ್ದು, ಆರ್ಬಿಐ ಮಾರ್ಗದರ್ಶನದ ಅನ್ವಯ ಬ್ಯಾಂಕ್ ಸೇವೆಯು ಸರಣಿ ಸೇವೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿದೆ ಎಂದರು.
ಬ್ಯಾಂಕ್ನ ಮಾಜಿ ಉಪ ಕಾರ್ಯಾಧ್ಯಕ್ಷ ಹಾಗೂ ಸ್ಥಾನೀಯ ಉಸ್ತುವರಿ ನಿರ್ದೇಶಕ ವಿನ್ಸೆಂಟ್ ಮಥಾಯಸ್ ಮಾತನಾಡಿ ಸಹಕಾರಿ ಬ್ಯಾಂಕ್ಗಳಲ್ಲಿ ವಿಶಿಷ್ಠ ಸ್ಥಾನಮಾನ ಹೊಂದಿದ ಏಕೈಕ ಸಹಕಾರಿ ಬ್ಯಾಂಕ್ ಹೇಳಲೂ ಅಭಿಮಾನ ಆಗುತ್ತಿದ್ದು ಸದ್ಯ ಯುವೋದ್ಯಮಿಗಳ ಉನ್ನತೀಕರಣವೇ ಬ್ಯಾಂಕ್ನ ಆಶಯವಾಗಿದೆ. ಬ್ಯಾಂಕ್ನ್ನು ಸಹಕಾರಿ ರಂಗದಲ್ಲಿ ಸರ್ವೋನ್ನತ ಬ್ಯಾಂಕ್ ಆಗಿಸುವ ಸಾಧನೆಯಲಿದ್ದು, ಆಥಿರ್üಕ ವ್ಯವಸ್ಥೆಯ ಭವಿಷ್ಯತ್ತಿನ ಸ್ಫೂರ್ತಿಯನ್ನು ಮೈಗೂಡಿಸಿಕೊಂಡು ಬ್ಯಾಂಕಿಂಗ್ ಸೇವಾ ಕ್ಷೇತ್ರದ ರೂವಾರಿಯಾಗಿಸುವ ಕನಸು ಈ ಸಂಸ್ಥೆ ಹೊಂದಿದೆ. ಎಲ್ಲಾ ಜನತೆಯ ವಿಶ್ವಾಸವನ್ನು ತನ್ನ ಕಾರ್ಯವ್ಯಾಪ್ತಿಗೆ ಪಡೆದುಕೊಂಡು ಅದ್ಭುತವಾಗಿ ಕಾರ್ಯನಿರ್ವಾಹಿಸುತ್ತಾ ಜಾಗತೀಕರಣದ ಸ್ಪರ್ಧೆಗೂ ಸಿದ್ಧವಾಗಿಸುವ ಪ್ರಯತ್ನ ನಾವು ಹೊಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮೂದಾಯದ ಮುಂದಾಳುಗಳು ಒಂದು ಶತಮಾನದ ಹಿಂದೆ ದಿ| ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಎಂದಾಗಿಸಿ ಸ್ಥಾಪಿಸಿ ಪ್ರಸ್ತುತ ಮಾಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪರಿವರ್ತಿತ ಮೋಡೆಲ್ ಬ್ಯಾಂಕ್ನ ನಿರ್ದೇಶಕರುಗಳಾದ ಪ್ರೊ| ಎ.ಪಿ.ಡಿ’ಸೋಜಾ, ಲಾಜರಸ್ ಮಿನೇಜಸ್, ಕ್ಲೇಮೆಂಟ್ ಲೊಬೋ, ಲಾರೇನ್ಸ್ ರೋನಿ ಡಿ’ಸೋಜಾ, ಥೋಮಸ್ ಡಿ.ಲೋಬೊ, ಪೌಲ್ ನಝರೆತ್, ಫಿಲಿಪ್ ಎಲ್.ಎಸ್ ಪಿಂಟೋ, ಸಂಜಯ್ ಶಿಂಧೆ, ಬೆನೆಡಿಕ್ಟಾ ರೆಬೆಲ್ಲೋ, ಮಾರಿಯೆಟ್ ಡಿ’ಮೆಲ್ಲೋ ವಸಾಯಿ, ನ್ಯಾ| ಪಿಯುಸ್ ವಾಸ್, ಮಾಲೀಕರುಗಳಾದ ವಿಶ್ವನಾಥ್ ಶೆಟ್ಟಿ, ಗಿರಿಜಾ ಶೆಟ್ಟಿ, ಆರ್ಕಿಟೆಕ್ ರಫಾಯಲ್ ಕಾರ್ಡೋಜಾ, ರಫಾಯಲ್ ಕಾಸ್ತೆಲಿನೋ, ಕಟ್ಟಡದ ಸಮಾಜ ಸೇವಕ ಆನಂದ್ ಪಿ.ಶೆಟ್ಟಿ, ಬೆನಡಿಕ್ಟಾ ರೆಬೆಲ್ಲೋ, ಸಿಸಿಸಿಐ ನಿರ್ಗಮನಾಧ್ಯಕ್ಷ ಹೆನ್ರಿ ಲೋಬೊ, ಎಲ್ವೀನಾ ಎ. ಡಿ’ಸೋಜಾ ಗ್ಲಾಡಿಸ್ ಜೆ. ಡಿ’ಸಿಲ್ವಾ, ಪ್ರೆಮಿಳಾ ವಿ.ಮಥಾಯಸ್, ಲ್ಯಾನ್ಸಿ ಬರ್ಬೋಜಾ, ವಿಕ್ಟರ್ ಡಿ’ಕುನ್ಹಾ, ನ್ಯಾ| ಜೆನೆವ್ಹೀವ್ ವಾಜ್, ಬ್ಯಾಂಕ್ನ ಹಿರಿಯ ಪ್ರಬಂಧಕರುಗಳಾದ ಝೆನೆರ್ ಡಿ’ಕ್ರೂಜ್ ಹಾಗೂ ಹಿಲರಿ ಮೆಂಡೊನ್ಸಾ ಬ್ಯಾಂಕ್ನ ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು, ಗ್ರಾಹಕರು, ಷೇರುದಾರರು, ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಉನ್ನತಿಗೆ ಶುಭಕೋರಿದರು.
ಬ್ಯಾಂಕ್ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿ’ಸೋಜಾ ಸುಖಾಗಮನ ಬಯಸಿ ಅತಿಥಿüಗಳನ್ನು ಪರಿಚಯಿಸಿದರು. ಬ್ಯಾಂಕ್ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಮತ್ತು ಹೆಚ್ಚುವರಿ ಪ್ರಧಾನ ಪ್ರಬಂಧಕ ಹರೋಲ್ಡ್ ಎಂ.ಸೆರಾವೋ ಅತಿಥಿüಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು. ಪ್ರಬಂಧಕ ಎಡ್ವರ್ಡ್ ರಾಸ್ಕಿನ್ಹಾ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಪ್ರಬಂಧಕಿ ಸಬಿತಾ ಪೌಲ್ ಧನ್ಯವಾದ ಸಮರ್ಪಿಸಿದರು.





















