*ಗೌರವನೀಯವಾಗಿರುವುದು ಸ್ತುತ್ಯಾರ್ಹ*- ಕುರಿಯ ಗಣಪತಿ ಶಾಸ್ತ್ರಿ
ಬಜಪೆ: *ಆಧುನಿಕ ತಂತ್ರಜ್ಞಾನದ ವೇಗದ ಅಭಿವೃದ್ಧಿ ನಡುವೆಯೂ ಯಕ್ಷಗಾನದ ಬಗೆಗೆ ಗೌರವನೀಯ ಸ್ಥಾನಮಾನ ಪ್ರಾಪ್ತಿಯಾಗಿರುವುದು ನಿಜಕ್ಕೂ ಸ್ತುತ್ಯಾರ್ಹ ಎಂದು ಹಿರಿಯ ಯಕ್ಷಗಾನ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥ ಬೀದಿಯಲ್ಲಿ ಸೋಮವಾರ ಯಕ್ಷಮಿತ್ರ ನಮ್ಮ ವೇದಿಕೆ ಆಶ್ರಯದಲ್ಲಿ ಜರಗಿದ *ರಂಗನಾಯಕ ಕುರಿಯ*, *ಯಕ್ಷ ಸತ್ಸಂಗ-2* ಸನ್ಮಾನ, ಯಕ್ಷಗಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
*ನನ್ನನ್ನು ಯಕ್ಷಲೋಕಕ್ಕೆ ಪರಿಚಯಿಸಿದ್ದು ಕಲ್ಲಾಡಿ ವಿಠಲ ಶೆಟ್ರು ಬೆಳೆಸಿದ್ಧು ಕಟೀಲು ಮಾತೆ. ಅದೆಷ್ಟೋ ಸಮ್ಮಾನಗಳು ಬಂದಿವೆ. ಕಟೀಲು ಮಾತೆಯ ವರಪ್ರಸಾದವಾಗಿ ಸಿಕ್ಕಿದ ಸನ್ಮಾನ ಸಂತೃಪ್ತಿ ನೀಡಿದೆ.* ಎಂದು ಭಾವುಕರಾಗಿ ನುಡಿದರು.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ ಅವರು ಶುಭಾಶಂಸನೆಗೈದರು.
ಕಟೀಲು: *ರಂಗನಯಕ ಕುರಿಯ*, *ಯಕ್ಷಸತ್ಸಂಗ* ಕರ್ಯಕ್ರಮ, ಸನ್ಮಾನ, ಯಕ್ಷಗಾನ
ಡಾ|ಮೋಹನ ಕುಂಟಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ಧರು. ಕಟೀಲು ದೇವಳದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಕಾರ್ಯಕ್ರಮದ ಜೀ ಚಿತ್ರದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಕಲಾರಂಗ ಉಡುಪಿಯ ತಲ್ಲೂರು ಶಿವರಾಮ ಶೆಟ್ಟಿ ಪ್ರಸಂಗ ಕೃತಿ ಅನಾವರಣಗೊಳಿಸಿದರು. ನಾ.ಕಾರಂತ ಪೆರಾಜೆ ಕುರಿಯ ಗಣಪತಿ ಶಾಸ್ತ್ರಿಗಳ ಅಭಿನಂದನಾ ಭಾಷಣಗೈದರು. ಯಕ್ಷಗಾನದ ವಿದ್ವಾಂಸ ಗಣೇಶ್ ಕೊಲಕಾಡಿ ರಚಿಸಿದ ಕುರಿಯ ಗಣಪತಿ ಶಾಸ್ತ್ರಿಗಳ ಸಮ್ಮಾನಪ್ತರವನ್ನು ಯಕ್ಷಗಾನ ಹಾಡುಗಾರಿಕೆಯಲ್ಲಿ ಲೀಲಾವತಿ ಬೈಪಡಿತ್ತಾಯ ಅವರು ಪ್ರಸ್ತುತ ಪಡಿಸಿದರು.
ಕಾರ್ಪೋರೇಶನ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಕಾರಿ ವಿ.ಕೆ ಶ್ರೀವಾಸ್ತವ, ಕುರಿಯ ಗಣಪತಿ ಶಾಸ್ತ್ರಿ ಅವರ ಪತ್ನಿ ಶ್ಯಾಮಲಮ್ಮ ಯಕ್ಷಮಿತ್ರ ನಮ್ಮ ವೇದಿಕೆಯ ಕಾರ್ಯಾಧ್ಯಕ್ಷ ಡಾ|ಪದ್ಮನಾಭ ಕಮತ್ ಮತ್ತಿತರರು ಉಪಸ್ಥಿತರಿದ್ಧರು.
ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅತಿಥಿ ಕಲಾವಿದರು ಹಾಗೂ ನಿಡ್ಡೆ ಶ್ರೀ ಮಹಾಗಣಪತಿ ಮೇಳದ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು.

