ಸುದ್ದಿ9 ಕೈಕಂಬ; ಪೊಳಲಿ ರಾಮಕೃಷ್ಣ ತಪೋವನದ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ನೂತನವಾಗಿ ನಿರ್ಮಾಣಗೊಂಡ ವಸತಿ ಗ್ರಹವು ಮೇ 14 ಬುಧವಾರ ಪವಿತ್ರ ಬುದ್ಧ ಪೂರ್ಣಿಮೆಯಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲು ತೀರ್ಮಾನಿಸಿರುವ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಇಲ್ಲಿನ ಮಕ್ಕಳಿಗೆ ಶುಭ ಹಾರೈಸಲು ಸಂತೋಷ ವ್ಯಕ್ತಪಡಿಸಿದ್ದಾರೆ.

balakasrama
balakasrama

3

 

4

 

1

 

ಬಾಲಕಾಶ್ರಮದ ವಸತಿಗೃಹದ ಉದ್ಘಾಟನೆಗೆ  ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ  ಪರಮಪೂಜ್ಯ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಆಗಮಿಸಲಿದ್ದಾರೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಪರಮಪೂಜ್ಯ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮೂಡಬಿದೆರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮತ್ತು ಮಂಗಳೂರು ಗಣೇಶ್ ಬೀಡಿ ವರ್ಕ್ ನ ಆಡಳಿತ ಪಾಲುದಾರ ಶ್ರೀ ಎಂ. ಜಗನ್ನಾಥ ಶೆಣೈ ಅಗಮಿಸಲಿದ್ದಾರೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮಿ  ವಿವೇಕಚೈತನ್ಯಾನಂದ ಅವರು ಸುದ್ದಿ9ಗೆ ಮಾಹಿತಿ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *