ಮುಂಬಯಿ, ಅ.24: ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮೂದಾಯದ ಮುಂದಾಳುಗಳು ದಿ. ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ನಾಮಕರಣದಲ್ಲಿ 1916ರಲ್ಲಿ ಸ್ಥಾಪಿಸಿ ಪ್ರಸ್ತುತ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಎಂದು ಹೆಸರಿಸಲ್ಪಟ್ಟು ಶತಮಾನದ ಸೇವೆಯಲ್ಲಿ ಕಾರ್ಯನಿರತ ಮೊಡೇಲ್ ಬ್ಯಾಂಕ್‍ನ 13ನೇ ಶಾಖೆ ಇಂದು (ಅ.25ನೇ) ಆದಿತ್ಯವಾರ ಪೂರ್ವಾಹ್ನ11.00 ಗಂಟೆಗೆ ದಹಿಸರ್ ಪಶ್ಚಿಮದ ಕಂದರ್‍ಪಾಡ ನ್ಯೂಲಿಂಕ್ ರಸ್ತೆಯಲ್ಲಿನ ರೋಕ್ ಗಾರ್ಡನ್ ಕಟ್ಟಡದಲ್ಲಿ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಉದ್ಘಾಟಿಸಲಿದ್ದಾರೆ. ಅವರ್ ಲೇಡಿ ಆಫ್ ಇಮ್ಮಾಕುಲೇಟ್ ಕನ್ಶೆಪ್ಶನ್ ಚರ್ಚ್ ಬೋರಿವಿಲಿ ಪಶ್ಚಿಮದ ಇದರ ಪ್ರಧಾನ ಧರ್ಮಗುರು ರೆ| ಫಾ| ಬರ್ಥೊಲ್ ಬಾರೆಟ್ಟೋ ಆಶೀರ್ವಚನಗೈದು ನೂತನ ಶಾಖೆ ಆಶೀರ್ವದಿಸಿ ಸೇವಾರ್ಪಣೆಗೈಯಲಿದ್ದಾರೆ.

ವಿಲಿಯಂ  ಎಲ್ ಡಿ ಸೋಜ,                                                                                             ಅಲ್ಬರ್ಟ್ ಡಬ್ಲ್ಯೊ ಡಿ ಸೋಜ,                                                                                             .ವಿಲಿಯಂ  ಸಿಕ್ವೇರಾ

Untitled-1 copy

ನ.01ನೇ ಆದಿತ್ಯವಾರ ಪೂರ್ವಾಹ್ನ ಅಂಧೇರಿ ಪಶ್ಚಿಮದ ಸೀಸ್ಹರ್ ರಸ್ತೆಯಲ್ಲಿನ ಸುವಿಧಾ ಸ್ಕ್ವಾಂರ್ ಕಟ್ಟಡದಲ್ಲಿ ಮೊಡೇಲ್ ಬ್ಯಾಂಕ್‍ನ 14ನೇ ಶಾಖೆಯನ್ನು ಬೃಹನ್ಮುಂಬಯಿ ಪೆÇೀಲಿಸ್ ಕಮೇಶನರೇಟ್‍ನ ಅಪರಾಧ ವಿಭಾಗೀಯ ಜಂಟಿ ಪೆಲಿಸ್ ಆಯುಕ್ತ ಅತುಲ್‍ಚಂದ್ರ ಕುಲ್ಕರ್ಣಿ (ಐಪಿಎಸ್) ಉದ್ಘಾಟಿಸಲಿದ್ದು, ಅಂಧೇರಿ ಪಶ್ಚಿಮದ ಅಂಭೋಲಿ ಅಲ್ಲಿನ ಸೈಂಟ್ ಬ್ಲೈಸ್ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ಫ್ರಾಂಕ್ಲಿನ್ ಮಥಾಯಸ್ ಆಶೀರ್ವಚನ ನೀಡಲಿರುವರು.

ನ.03ನೇ ಮಂಗಳವಾರ ಪೂರ್ವಾಹ್ನ ನವಿಮುಂಬಯಿ ಸಿಬಿಡಿ ಬೇಲಾಪುರ ಅಲ್ಲಿನ ಸೆಕ್ಟರ್11ರ ಪೆÇ್ಲಟ್ ಸಂಖ್ಯೆ 59 ರಲ್ಲಿನ ಶ್ರೀ ನಂದ್‍ಧಾಮ್ ಕಟ್ಟಡದಲ್ಲಿ ಮೊಡೇಲ್ ಬ್ಯಾಂಕ್‍ನ 15ನೇ ಶಾಖೆ ನವಿಮುಂಬಯಿ ಪೆÇೀಲಿಸ್ ಆಯುಕ್ತ ಪ್ರಭತ್ ರಂಜನ್ ಉದ್ಘಾಟಿಸಲಿರುವರು. ಸೈಂಟ್ ಜೋಸೆಫ್’ಸ್ ಚರ್ಚ್ ಬೇಲಾಪುರ ಇದರ ಧರ್ಮಗುರು ರೆ| ಫಾ| ಜೋ ಡಿ’ಮೆಲ್ಲೋ ಆಶೀರ್ವಚನ ನೀಡಲಿರುವರು.

ಮೊಡೇಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು.ಡಿ’ಸೋಜಾ ಅಧ್ಯಕ್ಷತೆಯಲ್ಲಿ ಮೂರೂ ಶಾಖೆಗಳ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳಲ್ಲೂ ಬ್ಯಾಂಕ್‍ನ ಸರ್ವ ಗ್ರಾಹಕರು, ಷೆÉೀರುದಾರರು ಮತ್ತು ಹಿತೈಷಿಗಳು ಆಗಮಿಸಿ ಸಮಾರಂಭವನ್ನು ಯಶಸ್ವೀ ಗೊಳಿಸುವಂತೆ ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್. ಡಿ’ಸೋಜಾ ತಿಳಿಸಿದ್ದಾರೆ. ದಹಿಸರ್ ಪಶ್ಚಿಮ ಶಾಖೆಯ ಪ್ರಬಂಧಕಿ ಲುಯೆಲ್ಲಾ ನೊರೋನ್ಹಾ, ಅಂಧೇರಿ ಪಶ್ಚಿಮ ಶಾಖೆಯ ಪ್ರಬಂಧಕಿ ಸಬಿತ ಪೌಲ್ ಬೇಲಾಪುರ ಶಾಖೆಯ ಪ್ರಬಂಧಕ ಎನ್.ಎಸ್ ಕಾಮತ್ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.

By suddi9

Leave a Reply

Your email address will not be published. Required fields are marked *