ಬಂಟ್ವಾಳ: ಗ್ರಾಮಕರಣಿಕರ ಸಂಘದ ವತಿಯಿಂದ ಬಿ.ಮೂಡ ಗ್ರಾಮದಲ್ಲಿ ಗ್ರಾಮಕರಣಿಕರಾಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿಗೊಂಡು ವರ್ಗಾವಣೆಗೊಂಡ ರಾಜ್ಕುಮಾರ್ ರವರನ್ನು ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.
ಕಂದಾಯ ಅಧಿಕಾರಿ ನಾರಾಯಣ ಪೂಜಾರಿ, ಕಂದಾಯ ನಿರೀಕ್ಷಕರಾದ ಆಸಿಫ್ ಇಕ್ಬಾಲ್ , ದಿವಾಕರ ಮುಗುಳ್ಯ , ಗೌರಾವಾಧ್ಯಕ್ಷ ಶಶಿಕುಮಾರ್ , ಗ್ರಾಮಕರಣಿಕರ ಸಂಘದ ಉಪಾಧ್ಯಕ್ಷೆ ದಾಕ್ಷಾಯಿಣಿ , ಕಾರ್ಯದರ್ಶಿ ಕುಮಾರ್ , ಗೌರವ ಸಲಹೆಗಾರ ಎ.ಪಿ.ಭಟ್ , ಸರಕಾರಿ ನೌಕರರ ಸಂಘದ ಕೋಶಾಧಿಕಾರಿ ಜನಾರ್ಧನ್ ಹಾಗೂ ಎಲ್ಲಾ ಗ್ರಾಮ ಕರಣಿಕರು ಉಪಸ್ಥಿತರಿದ್ದರು.


