ಬಂಟ್ವಾಳ : ತಾಲೂಕು ಪಿಂಚಣಿದಾರರ ಸಂಘದ ಸಭೆಯು ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ ಜರಗಿತು. ಎತ್ತಿನಹೊಳೆ ಯೋಜನೆ ವಿರೋಧ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಎತ್ತಿನಹೊಳೆ ಯೋಜನೆಯಿಂದಾಗಿ ನೇತ್ರಾವತಿ ತೀರ ಪ್ರದೇಶವು ಬರಡಾಗಿ ಹೋಗುವ ಕಾರಣ ಕರಾವಳಿಯ ಫ ಲಾನುಭ ವಿಗಳು ಸರ್ವಸಮ್ಮತದಿಂದ ಖಂಡನೆಯನ್ನು ಮಾಡಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ನಿರ್ಣಯದ ಒಂದು ಪ್ರತಿಯನ್ನು ಮಾನ್ಯ ತಹಶೀಲ್ದಾರರ ಮೂಲಕ ಸರಕಾರಕ್ಕೆ ಸಲ್ಲಿಸುವುದಾಗಿ ತೀಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಎ.ಲಿಂಗಪ್ಪ ಕೈಕುಂಜೆ , ನಾಟಿ ಕೃಷ್ಣರಾಜ ಶೆಟ್ಟಿ , ಕಾರ್ಯದರ್ಶಿ ಕೆ.ನೀಲೋಜಿರಾವ್ , ವಿ.ಸೋಮಪ್ಪ , ಎಮ್.ದಿನಕರ , ಜಲಜಾಕ್ಷಿ ಕುಲಾಲ್ , ಶಾರದಾ ಬಾಯಿ , ಎ.ದಾಮೋದರ , ಶಂಕರ ಪೂಜಾರಿ , ಶ್ರೀಧರ ಗೌಡ , ಲೋಕನಾಥ ಶೆಟ್ಟಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *