ಕಿನ್ನಿಗೋಳಿ: ಕಿನ್ನಿಗೋಳಿ ಬಳಿಯ ಬೊಳ್ಳೂರು ಮಿತ್ರ ಮಂಡಳಿ ಮತ್ತು ಸ್ಪೋರ್ಟ್ಸ್ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆ ಕೊಕುಡೆಯ ಜಂಟಿ ಸಂಯೋಜನೆಯಲ್ಲಿ ನಿರ್ಮಿಸಿದ ಬೊಳ್ಳೂರು ತುಳು ಲಿಪಿಯ ನಾಮಫಲಕವನ್ನು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು ತುಳು ಬಾಷೆಯನ್ನು ಉಳಿಸಿ ಬೆಳೆಸುವಲ್ಲಿ ಯುವಕರ ಪಾತ್ರ ಅಗತ್ಯವಾಗಿದೆ ಆ ನಿಟ್ಟಿನಲ್ಲಿ ಯುವಕರು ತುಳು ಬಾಷೆಯತ್ತ ಆಕರ್ಷಿತರಾಗಬೇಕು, ತುಳು ಬಾಷೆಯ ಉಳಿವಿಗೆ ಶ್ರಮಿಸಬೇಕು ಎಂದು ಹೇಳಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಸುಧಾಕರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಅಧ್ಯಕ್ಷ ಪ್ರಮೋದ್ ಕುಮಾರ್ ಆಚಾರ್ಯ, ಸ್ಪೋಟ್ಸರ್್ ಸಂಸ್ಥೆಯ ಅಧ್ಯಕ್ಷ ಸತೀಶ್ ಬೊಳ್ಳೂರು, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜೀವನ್ ತೋಕೂರು, ಸಂಯೋಜಕ ಕಿರಣ್ ತುಳುವ ಕೊಕುಡೆ, ರಾಘು ಸುವರ್ಣ ಇನ್ನಿತರರು ಹಾಜರಿದ್ದರು.
