ಸುದ್ದಿ9 ಕೈಕಂಬ: ತನ್ನದಲ್ಲದ ತಪ್ಪಿಗೆ ಸುಮಾರು 12 ವರ್ಷಗಳಿಂದ ಜಿದ್ದಾದ ಜೈಲಿನಲ್ಲಿದ್ದ ಕಣ್ಣೂರಿನ ಆಯ್ಯೂಬ್(35) ಎಂಬವರು ಕೊನೆಗೂ ಬಿಡುಗಡೆಗೊಂಡು ನಿನ್ನೆ ಸೋಮವಾರ ಭಾರತಕ್ಕೆ ಮರಳಿದ್ದಾರೆ. ಇದರಲ್ಲಿ ಉಳಿದ ಏಳು ಮಂದಿ ಬಿಡುಗಡೆಯ ನಿರೀಕ್ಷೆಯಲ್ಲಿದ್ದು ಇನ್ನೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಕುದ್ರೋಳಿಯವರಾದ ಹುಸೈನ್ ಅಹ್ಮದ್, ರಿಯಾಝ್ ಅಹ್ಮದ್, ಉಳ್ಳಾಲದ ನಾಸಿರ್ ಮೊಹಮ್ಮದ್, ಸುರತ್ಕಲಿನ ಮೊಹಮ್ಮದ್ ಅಶ್ರಫ್, ಬಜ್ಪೆಯ ಪಯಾಝ್ ಅಹ್ಮದ್, ಬಿ.ಸಿ.ರೋಡಿನ ಮೊಹಮ್ಮದ್ ಷರೀಫ್ ಹಾಗೂ ಪೈರೋಝ ಸೌದಿಯಲ್ಲಿ ಇನ್ನೂ ಜೈಲು ಹಕ್ಕಿಗಳಾಗಿಯೇ ಕಾಲ ಕಳೆಯುತ್ತಿದ್ದಾರೆ.

ಕಿತ್ತು ತಿನ್ನುವ ಬಡತನವನ್ನು ನಿವಾರಿಸುವ ಸಲುವಾಗಿ ಕೊಲ್ಲಿ ರಾಷ್ಟ್ರಕ್ಕೆ ಉದ್ಯೋಗಕ್ಕೆ ತೆರಳಿ ಮಾಡದ ತಪ್ಪಿಗೆ ಜೈಲುಪಾಲಾಗಿ ಕಾಲಕಳೆಯಬೇಕಾಯ್ತು. ಇವರನ್ನು ಜೈಲಿಗೆ ಹಾಕಲು ಕಾರಣವಾಗಿದ್ದು ಹವಾಲಾ ಪ್ರಕರಣ. ಸೌದಿಯ ಟೆಲಿಕಾಂ ಸಂಸ್ಥೆಯೊಂದು ಇವರ ವಿರುದ್ಧ ದೂರು ನೀಡಿದ್ದು 8 ಮಂದಿ ಜೈಲಿನಲ್ಲಿ ಕಾಲ ಕಳೆಯಬೇಕಾಯ್ತು. ಇನ್ನುಳಿದವರು ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಜಿದ್ದಾದಲ್ಲಿ ಬಾಡಿಗೆಗೆ ಫ್ಲಾಟ್ ಒಂದನ್ನು ಪಡೆದುಕೊಂಡಿದ್ದರು.. ಇದರಲ್ಲಿ ಹವಾಲಾ ಪ್ರಕರಣದಲ್ಲಿ ಭಾಗಿಯಾಗಿದ್ದ ತಂಡವೊಂದು ನೆಲೆಸಿತ್ತು. ಸೌದಿಯ ಪೊಲೀಸರು ಇವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಇದರ ಸುಳಿವರಿತ ಪ್ಲಾಟ್ನಲ್ಲಿ ಮೊದಲೇ ವಾಸವಾಗಿದ್ದ ಆರೋಪಿಗಳು ಪ್ಲಾಟನ್ನು ತೆರವುಗೊಳಿಸಿ ಅದನ್ನು ಇವರಿಗೆ ಬಾಡಿಗೆಗೆಂದು ನೀಡಿ ಅಲ್ಲಿಂದ ಪಲಾಯನಗೈದಿದ್ದರು.
ಆದರೆ ಈ ಬಗ್ಗೆ ಯಾವುದೇ ಪರಿವೇ ಇಲ್ಲದೆ ಖಾಲಿಯಿದ್ದ ಪ್ಲಾಟನ್ನು ಬಾಡಿಗೆಗೆ ಖರೀದಿಸಿದ ತಪ್ಪಿಗೆ ಇವರಂಥಾ ಅಮಾಯಕರು ಖೆಡ್ಡಾಕ್ಕೆ ಬೀಳಬೇಕಾಯ್ತು. ಪೊಲೀಸರು ಇವರನ್ನೇ ಆರೋಪಿಗಳೆಂದು ಭಾವಿಸಿ 8 ಮಂದಿಯನ್ನೂ ಬಂಧಿಸಿ ಕಾರಾಗ್ರಹಕ್ಕೆ ತಳ್ಳಿದರು. ಇದರಂತೆ ಇವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು. ನ್ಯಾಯಲಯವು ಇವರಿ ಎಂಟು ವರ್ಷಗಳ ಕಾರಾಗೃಹ ಮತ್ತು ಹತ್ತು ಕೋಟಿ ದಂಡ ಪಾವತಿಸಬೇಕೆಂದು ತೀಪರ್ು ನೀಡಿತ್ತು. ಆದರೆ ಕಾರಾಗ್ರಹ ಶಿಕ್ಷೆ ಮುಗಿದರೂ ಬೃಹತ್ ಮೊತ್ತವನ್ನು ದಂಡವಾಗಿ ಸಲ್ಲಿಸಲು ಸಾಧ್ಯವಾಗದೆ ಬರೋಬ್ಬರಿ 12 ವರ್ಷಗಳನ್ನು ಕಳೆಯಬೇಕಾಯ್ತು. ಇವರು ಜೈಲಿನಲ್ಲಿ ಕೊಳೆಯುತ್ತಿರುವ ವಿಚಾರ ಊರವರಿಗೂ ತಿಳಿದಿರಲಿಲ್ಲ.
ಆದರೆ ಅನಿವಾಸಿ ಭಾರತೀಯ ಇಂಡಿಯಾ ಫ್ರೆಟನರ್ಿಟಿ ಫೋರಂ ಸಂಘಟನೆ ಕ್ರಿಯಾ ಸಮಿತಿಯೊಂದನ್ನು ರಚಿಸಿ ಕಾನೂನು ಹೋರಾಟಕ್ಕಿಳಿಯಿತು. ಇದರಿಂದ ಕಣ್ಣೂರಿನ ಅಯ್ಯೂಬ್ ಎಂಬವರು ಸೌದಿ ಅರೇಬಿಯಾದ ಜೈಲಿನಿಂದ ಬಿಡುಗಡೆಯಾಗುವಂತಾಗಿದೆ. ಅಶ್ರಫ್ ಬಜ್ಪೆ, ಅಶ್ರಫ್ ಮೊರಯೂರು, ಮುದಸ್ಸರ್ ಅಕ್ಕರಂಗಡಿ, ಅರೀಸ್ ಗೂಡಿನಬಳಿ, ಹುಸೈನ್ ಜೋಕಟ್ಟೆ ಯವರನ್ನೊಳಗೊಂಡ ಕ್ರಿಯಾಸಮಿತಿಯು ಇಂಡಿಯಾ ಪ್ರೆಟನರ್ಿಟಿ ಪೋರಂನ ವತಿಯಿಂದ ಇನ್ನಿತರ ಏಳು ಮಂದಿಯ ಬಿಡುಗಡೆಗೆ ಯತ್ನಿಸಿದೆ
ಜೈಲಿನಲ್ಲಿ ಉತ್ತಮ ಆಹಾರ, ಸಿಗುತ್ತದೆಂದು ಬಿಟ್ಟರೆ ಸ್ವಾತಂತ್ರ್ಯವೆಂಬುದೇ ಇಲ್ಲ. ಏಕಾಂಗಿಯಾಗಿ ಸುಮಾರು 12 ವರ್ಷಗಳನ್ನು ಕಳೆದಿರುವ ಇವರಿಗೆ ಭಾರತದ ಜನರ ಪ್ರೀತಿ ಹಾಗೂ ಕುಟುಂಬ ವರ್ಗವನ್ನು ಕಂಡು ಸಂಪೂರ್ಣವಾಗಿ ಭಾವುಕರಾಗಿದ್ದರು. ಭಾರತದ ವಿದೇಶಾಂಗ ಇಲಾಖೆ ಉಳಿದವರ ಬಿಡುಗಡೆಗಾಗಿ ತಕ್ಷಣ ಮುಂದಾಗಬೇಕು ಎಂದು ಕುಟುಂಬ ವರ್ಗ ಆಗ್ರಹಿಸಿದೆ.
(ಚಿತ್ರ ಇದೆ)

