ಬೆಂಗಳೂರು: ಕರ್ನಾಟಕದಲ್ಲಿ ಎಎಪಿ ಖಾತೆ ತೆರೆಯುವುದಿಲ್ಲ. ಬಹುತೇಕ ಎಎಪಿಯ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಏಳು ಕ್ಷೇತ್ರಗಳಲ್ಲಿ ಹಣಾಹಣಿ ಹೋರಾಟ ನಡೆಯಲಿದೆ ಎಂದು ಗುಪ್ತಚರ ಸಂಸ್ಥೆಯ ರಹಸ್ಯ ವರದಿಯಲ್ಲಿ ತಿಳಿಸಲಾಗಿದೆ.

Nalin-Kumar-Kateel-k nilekani

ಏಳು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶವಿದೆ-ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಮತ್ತು ಮಂಗಳೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಜಯಗಳಿಸುವ ಅವಕಾಶವಿದೆ.ಇದಲ್ಲದೇ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರವನ್ನು ಉಳಿಸಿಕೊಳ್ಳುತ್ತದೆ. ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಜಯಗಳಿಸಲಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ನಾರಾಯಣ ಸ್ವಾಮಿ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಅವರಿಗೆ ಪ್ರಬಲ ಹೋರಾಟ ನೀಡಲಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ನಂದನ್ ನಿಲೇಕಣಿ ಅವರು ಮುಂಚೂಣಿಯಲ್ಲಿದ್ದು ಅನಂತಕುಮಾರ್ ಅವರನ್ನು ಸೋಲಿಸಿ ಲೋಕಸಭೆಗೆ ಪ್ರವೇಶಿಸಲಿದ್ದಾರೆ. ಈ ಬಾರಿ ಪ್ರಬಲ ಕಾಂಗ್ರೆಸ್ ಓಟ್ ಬ್ಯಾಂಕ್ ನಿಲೇಕಣಿ ಅವರನ್ನು ಆರಿಸಲಿದ್ದು, ಬ್ರಾಹ್ಮಣರ ಮತಗಳು ಇಬ್ಬರು ಅಭ್ಯರ್ಥಿಗಳ ನಡುವೆ ವಿಭಜನೆಯಾಗುತ್ತದೆ. ಇದು ನಿಲೇಕಣಿ ಅವರಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆ ಎಂದು ಐಬಿ ವರದಿ ಭವಿಷ್ಯ ನುಡಿದಿದೆ.

By Suddi9

Leave a Reply

Your email address will not be published. Required fields are marked *