ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ದೇಶದ ಅಧಿಕಾರದ ಚುಕ್ಕಾಣಿಯನ್ನು ಯಾವ ಪಕ್ಷ ಹಿಡಿಯಬಹುದು ಎಂಬ ಕುತೂಹಲ ಮತದಾರರಲ್ಲಿ ತೀವ್ರಗೊಂಡಿದೆ. ಈ ಕುರಿತು ಎನ್‌ಡಿಟಿವಿ ಸಮೀಕ್ಷೆ ನಡೆಸಿದ್ದು, ತತ್’ಕ್ಷಣ ಚುನಾವಣೆ ನಡೆಸಿದರೆ, ಎಲ್ಲೆಡೆ ಬಿಜೆಪಿಯದ್ದೇ ಪಾರುಪತ್ಯ ಸಾಧಿಸಲಿದೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಮತ್ತು ದೆಹಲಿಯಲ್ಲಿ ಎನ್‌’ಡಿಎ ಅಂಗಪಕ್ಷಗಳೇ ಮುಂಚೂಣಿಯಲ್ಲಿವೆ.

NDTV_India

ಎನ್’ಡಿಟಿವಿ ಸಮೀಕ್ಷೆ ನಡೆಸಿದ ದೇಶದ 283 ಕ್ಷೇತ್ರಗಳ ಪೈಕಿ ಬಿಜೆಪಿ ಮಿತ್ರಪಕ್ಷಗಳು 160 ಸ್ಥಾನಗಳನ್ನ ಗೆಲ್ಲುವ ಸಾಧ್ಯತೆ ಇದೆ. ಯುಪಿಎ 54 ಹಾಗೂ ಇತರರು 69 ಸೀಟುಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರವಿದೆ.

ರಾಜ್ಯವಾರು ವಿವರ:
ಕರ್ನಾಟಕ
ಒಟ್ಟು ಸ್ಥಾನ: 28
ಬಿಜೆಪಿ: 16
ಕಾಂಗ್ರೆಸ್: 10
ಜೆಡಿಎಸ್: 2

ಸೀಮಾಂಧ್ರ
ಒಟ್ಟು ಸ್ಥಾನ: 25
ಟಿಡಿಪಿ: 14
ವೈಎಸ್‌ಆರ್ ಕಾಂಗ್ರೆಸ್: 10
ಕಾಂಗ್ರೆಸ್: 01

ತೆಲಂಗಾಣ
ಒಟ್ಟು ಸ್ಥಾನ: 17
ಟಿಆರ್ ಎಸ್: 07
ಕಾಂಗ್ರೆಸ್: 07
ಟಿಡಿಪಿ: 02
ಇತರೆ: 01

ರಾಜಸ್ಥಾನ
ಒಟ್ಟು ಸ್ಥಾನ: 25
ಬಿಜೆಪಿ: 21
ಕಾಂಗ್ರೆಸ್: 3
ಇತರೆ: –

ದೆಹಲಿ
ಒಟ್ಟು ಸ್ಥಾನ: 07
ಬಿಜೆಪಿ: 04
ಕಾಂಗ್ರೆಸ್: 01
ಇತರೆ: 02

ಬಿಹಾರ
ಒಟ್ಟು ಸ್ಥಾನ: 40
ಬಿಜೆಪಿ: 21
ಕಾಂಗ್ರೆಸ್: 11
ಇತರೆ: 08

ಛತ್ತೀಸ್’ಗಢ
ಒಟ್ಟು ಸ್ಥಾನ: 11
ಬಿಜೆಪಿ: 08
ಕಾಂಗ್ರೆಸ್: 03
ಇತರೆ: –

ಜಾರ್ಖಂಡ್
ಒಟ್ಟು ಸ್ಥಾನ: 14
ಬಿಜೆಪಿ: 10
ಕಾಂಗ್ರೆಸ್: 04
ಇತರೆ: –

ಮಧ್ಯಪ್ರದೇಶ
ಒಟ್ಟು ಸ್ಥಾನ: 29
ಬಿಜೆಪಿ: 25
ಕಾಂಗ್ರೆಸ್: 04
ಇತರೆ: –

ಮಹಾರಾಷ್ಟ್ರ
ಒಟ್ಟು ಸ್ಥಾನ: 48
ಬಿಜೆಪಿ: 36
ಕಾಂಗ್ರೆಸ್: 10
ಇತರೆ: 02

ತಮಿಳುನಾಡು
ಒಟ್ಟು ಸ್ಥಾನ: 39
ಬಿಜೆಪಿ: 03
ಕಾಂಗ್ರೆಸ್: 0
ಇತರೆ: 36

By suddi9

Leave a Reply

Your email address will not be published. Required fields are marked *