ಮಧ್ಯಪ್ರದೇಶ: ಬಿಜೆಪಿಯ ಮಹಿಳಾ ನಾಯಕಿ ಸುಷ್ಮಾ ಸ್ವರಾಜ್ ಮಧ್ಯಪ್ರದೇಶದ ವಿಧಿಸಾದಿಂದ ನಾಮಪತ್ರ ಸಲ್ಲಿಸಿದರು. 2009 ರ ಲೋಕಸಭೆಯಲ್ಲಿ ಹಿರಿಯ ನಾಯಕ ಆಡ್ವಾಣಿ ಪ್ರತಿಪಕ್ಷ ನಾಯಕ ಹುದ್ದೆಯನ್ನು ತೆರವುಗೊಳಿಸಿದ್ದ ಸ್ಥಾನದಲ್ಲಿ ಸುಷ್ಮಾ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಸಂಸದೆಯ ವಿರುದ್ಧ ಕಾಂಗ್ರೆಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸಹೋದರ ಲಕ್ಷ್ಮಣ ಸಿಂಗ್‌ರನ್ನು ಕಣಕ್ಕಿಳಿಸಿದೆ.ಪ್ರಧಾನಿಯಂತಹ ಉನ್ನತ ಹುದ್ದೆಗೆ ನರೇಂದ್ರ ಮೋದಿಗಿಂತ ಸ್ವರಾಜ್ ಉತ್ತಮ ಅಭ್ಯರ್ಥಿ ಎಂದು ಕಳೆದ ತಿಂಗಳ ದಿಗ್ವಿಜಯ್ ಹೇಳಿಕೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನಾಮಪತ್ರ ಸಲ್ಲಿಸುವ ಮುನ್ನ ಸುಷ್ಮಾ ಹೋಮಹವನಾದಿಗಳಲ್ಲಿ ಪಾಲ್ಗೊಂಡರು. ಅನೇಕ ಹಿರಿಯ ನಾಯಕರು ಈ ಸಂದರ್ಭದಲ್ಲಿ ಸುಷ್ಮಾ ಜೊತೆಗಿದ್ದರು.

