ನವದೆಹಲಿ: ಫೇಸ್ಬುಕ್ ಮತ್ತು ಟ್ವೀಟ್ ಪ್ರಿಯರೇರಿಗೊಂದು ದುಃಖದ ಸುದ್ದಿಯಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ನಿಮ್ಮ ನೆಚ್ಚಿನ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆಯೆಂಬ ಸುದ್ದಿ ಹರಿದಾಡುತ್ತಿದೆ. ಚುನಾವಣೆ ಆಯೋಗವು ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿ ಮೇ 16ರವರೆಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಬೇಕೆಂದು ಮನವಿ ಸಲ್ಲಿಸಿದೆ.
ಈ ಹಿನ್ನಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಇವುಗಳ ನಿಷೇಧಕ್ಕೆ ನಿರ್ಧರಿಸಿದೆಯೆಂಬ ಊಹಾಪೋಹ ಹರಿದಾಡುತ್ತಿದೆ.ಮೇ 16 ಚುನಾವಣೆ ಫಲಿತಾಂಶದ ದಿನವಾಗಿದೆ. ಈ ಜಾಲತಾಣಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯನ್ನು ಒಡ್ಡಿವೆ. ಇವೆರಡು ಸಾಮಾಜಿಕ ಜಾಲತಾಣಗಳಲ್ಲಿ ಧ್ವೇಷದ ಹೇಳಿಕೆಗಳು ಪರಸ್ಪರ ವಿನಿಯೋಗವಾಗಿ ಕೋಮುದಳ್ಳುರಿಯಂಥ ಘನಟೆಗಳು ನಡೆಯುವ ಸಾಧ್ಯತೆಗಳು ಹೆಚ್ಚಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಇನ್ನೂ ಕೂಡಾ ಖಚಿತ ನಿರ್ಧಾರಕ್ಕೆ ಬಂದಿಲ್ಲವಾದರೂ ಈ ತಾಣಗಳನ್ನು ನಿಷೇಧಿಸುವುದು ಉತ್ತಮ ಎಂದು ಸಾರ್ವತ್ರಿಕ ಅಭಿಪ್ರಾಯ ಕೇಳಿಬರುತ್ತಿದೆ.

