ಕೈಕಂಬ: ತಳಮಟ್ಟದಲ್ಲಿ ಅಧಿಕಾರ ನಡೆಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕೆಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು ರೂಪಿಸಲಾಗಿದೆ. ಚುನಾವಣೆಯಲ್ಲಿ ಗೆದ್ದವರು ತನ್ನ ಹುದ್ದೆಯ ಸಾಮಥ್ರ್ಯಕ್ಕೆ ಅನುಸಾರ ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಗುರುಪುರ ಕೈಕಂಬದ ಪ್ರೀಮಿಯರ್ ಹಾಲ್ನಲ್ಲಿ ನಡೆದ ಮಂಗಳೂರು ನಗರ ಉತ್ತರ ವಿಭಾಗ ಗ್ರಾ.ಪಂ. ಗೆದ್ದ ಬಿಜೆಪಿ ಅಭ್ಯರ್ಥಿಗಳ ಕಾರ್ಯ ಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

_DSC6803

_DSC6808
_DSC6806

 

 

_DSC6804
ಪಂಚಯತ್ ಸದಸ್ಯರ ಜವಾಬ್ದಾರಿ ಏನು, ಅವರು ಯಾವ ಕಾರ್ಯ ಮಾಡ್ಬೇಕು ಎಂದು ತಿಳಿದುಕೊಳ್ಳಲು ಸಾಮಾನ್ಯ ಅಭಿವೃದ್ಧಿ ಮಂಡಳಿಗಳ ಮುಖಾಂತರ ಮೂರು ತಿಂಗಳ ಅವಧಿಗೆ ಸಭೆ ನಡೆಸಿ ತಿಳಿಹೇಳುವ ಮಾಹಿತಿ ನೀಡಲಾಗುವುದು ಸದಸ್ಯರು ಇದರ ಪ್ರಯೋಜನ ಪಡೆಯಬೇಕು. ತನ್ನ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿಕೊಳ್ಳಬೇಕೇ ವಿನಹ ಪಿಡಿಓಗಳ ಕೈಗೊಂಬೆ ಆಗಬಾರದು ಎಂದು ಕಿವಿ ಮಾತು ಹೇಳಿದರು.
ಇಂದು ಅನೇಕ ಮಂದಿ ಪಂಚಾಯತ್ ಮೆಟ್ಟಿಲನ್ನು ಹತ್ತದವರೇ ಗ್ರಾ.ಪಂ.ಚುನಾವಣೆ ಗೆದ್ದಿದ್ದಾರೆ. ಕೆಲವು ಕಡೆ ಅಭ್ಯರ್ಥಿಗಳು ಇಲ್ಲದಕ್ಕೆ ಒತ್ತಾಯಪೂರ್ವಕವಾಗಿ ಚುನಾವಣೆಯಲ್ಲಿ ನಿಲ್ಲಿಸಲಾಗಿದೆ. ಆ ರೀತಿ ಗೆದ್ದ ಅಭ್ಯರ್ಥಿಗಳಿದ್ದರೆ ಸೂಕ್ತ ತರಬೇತಿ ಪಡೆದು ಗ್ರಾಮವನ್ನು ಅಭಿವೃದ್ದಿಪಡಿಸಿ ಎಂದು ಹೇಳಿದ್ದಾರೆ.
ಗ್ರಾ.ಪಂ. ಸದಸ್ಯರ ಗೌರವಧನವನ್ನು ತಿಂಗಳಿಗೆ 1000 ರೂ.ವಿಗೆ ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಕೃಷ್ಣ ಜೆ ಪಾಲೆಮಾರ್ ,ರುಕ್ಮಯ ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *