ಮೂಲ್ಕಿ: ಪ್ರಾಚೀನ ಕಾಲದಿಂzಲೂ ಭಾರತದಲ್ಲಿ ಯೋಗವು ಪ್ರಚಲಿತವಾಗಿದ್ದು ಯೋಗದಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಿದ್ದು ಜೊತೆಗೆ ಏಕಾಗ್ರತೆಯ ಮೂಲಕ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಿದೆ.ವಿಶ್ವ ಯೋಗ ದಿನಾಚರಣೆಯಿಂದಾಗಿ ಭಾರತವು ವಿಶ್ವಕ್ಕೆ ಯೋಗ ಗುರುವಾಗಿ ಗೌರವಿಸಲ್ಪಟ್ಟಿದೆಯೆಂದು ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ,ಆಧ್ಯಾತ್ಮಿಕ ಗುರು,ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು..

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೂಲ್ಕಿಯ ವಿಜಯ ಕಾಲೇಜು ಮತ್ತು ಪತಂಜಲಿ ಯೋಗ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿಯ ವಿಜಯ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಜರಗಿದ ವಿಶ್ವ ಯೋಗ ದಿನಾಚರಣೆ ಮತ್ತು ಸಾಮೂಹಿಕ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆಯನ್ನು ಮೂಲ್ಕಿಯ ವಿಜಯ ಕಾಲೇಜಿನ ಪ್ರಾಚಾರ್ಯ ಕೆ ಆರ್ ಶಂಕರ್ ವಹಿಸಿದ್ದು ಪತಂಜಲಿ ಯೋಗ ಸಮಿತಿಯ ನಿರ್ದೇಶಕ ಎನ್ ಪಿ ಶೆಟ್ಟಿ,ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,ಮಧು ಆಚಾರ್ಯ,ಯೋಗ ಶಿಕ್ಷಕ,ಕೆಂಚನಕೆರೆಯ ಯೋಗೋಪಾಸನದ ಜಯ ಮುದ್ದು ಶೆಟ್ಟಿ,ಮೂಲ್ಕಿಯ ಮಾತಾ ಅಮಲೋಧ್ಭವ ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಕ್ಲೇವಿಯರ್ ಗೋಮ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
