ಮುಂಬಯಿ, ಜೂ.15: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಮಾ| ಆದಿತ್ಯ ಆನಂದ್ ಸುವರ್ಣ 92.06% ಅಂಕಗಳನ್ನು ಪಡೆದು ಡಿಸ್ಟಿಂಶನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈತ ಭಾಂಡೂಪ್ ಪಶ್ಚಿಮದ ನೇಶನಲ್ ಹೈಸ್ಕೂಲು ವಿದ್ಯಾರ್ಥಿ ಆಗಿದ್ದು, ಮಂಗಳೂರು ಬಜ್ಪೆ ಬೈಲ್ ಕಲ್ಲಾಪು ಆನಂದ್ ಸುವರ್ಣ ಮತ್ತು ಉಡುಪಿ ಶೋಭಾ ಆನಂದ್ ದಂಪತಿ ಸುಪುತ್ರ ಆಗಿದ್ದಾರೆ.

