ಮುಂಬಯಿ, ಜೂ.08: ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ನಲ್ಲಸೋಫರಾ (ರಿ.) ಸಂಸ್ಥೆಯು ಶೈಕ್ಷಣಿಕವರ್ಷಾರಂಭದಲ್ಲಿ ವಾರ್ಷಿಕವಾಗಿ ಶಾಲಾ ಬಡ ಮಕ್ಕಳಿಗೆ ಕೊಡಮಾಡುವ 2015ನೇ ವಾರ್ಷಿಕ ಸಮವಸ್ತ್ರ ಹಾಗೂ ಪಠ್ಯಚಟುವಟಿಕೆ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಕಳೆದ ಆದಿತ್ಯವಾರ ನಲ್ಲಾ ಸೋಫರಾ ಪೂರ್ವದ ಸೈಂಟ್ ಫ್ರಾನ್ಸಿಸ್ ದೆ’ಸಾಲೆಸ್ ಶಾಲಾ ಸಭಾಗೃಹದಲ್ಲಿ ಕೊಡಮಾಡಿತು. ನಲ್ಲಾಸೋಫರಾ ಸೈಂಟ್ ಫ್ರಾನ್ಸಿಸ್ ದೆ’ಸಾಲೆಸ್ ಇಗರ್ಜಿಯಲ್ಲಿನ ಕರ್ನಾಟಕ ಕರಾವಳಿ ಪ್ರದೇಶದ ಜನತೆಯ ಸಾಮಾಜಿಕ ಸಂಘಟನೆಯಲ್ಲೊಂದಾದ ಕೆಸಿಎ ಅಧ್ಯಕ್ಷ ಹಾಗೂ ಸ್ಥಾನೀಯ ಪ್ರಸಿದ್ಧಯುವ ಮುಂದಾಳು ಹ್ಯಾರಿ ಬಿ.ಕುಟಿನ್ಹೋ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಥಳಿಯ ಸಮಾಜ ಸೇವಕ ಜಯರಾಮ ಕಾಸರ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಚಟುವಟಿಕೆಗಳ ಸಾಮಾಗ್ರಿಗಳನ್ನು ವಿತರಿಸಿ ಶುಭ ಕೋರಿದರು.

ಕೆಸಿಎ ನಲ್ಲಸೋಫರಾ ಸಂಸ್ಥೆಯಿಂದ ವಾರ್ಷಿಕ ಶೈಕ್ಷಣಿಕ ಸಾಮಾಗ್ರಿಗಳ ವಿತರಣೆ.

K.C.A.Nalsopra (Book Dstrbt-2015)-A1
K.C.A.Nalsopra (Book Dstrbt-2015)-1

K.C.A.Nalsopra (Book Dstrbt-2015)-2

K.C.A.Nalsopra (Book Dstrbt-2015)-3

 

K.C.A.Nalsopra (Book Dstrbt-2015)-A2

K.C.A.Nalsopra (Book Dstrbt-2015)-B2

K.C.A.Nalsopra (Book Dstrbt-2015)-B3

K.C.A.Nalsopra (Book Dstrbt-2015)-C
ಜಯರಾಮ ಕಾಸರ್ ಮಾತನಾಡಿ ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಮಕ್ಕಳ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಮಾನವೀಯತೆ ಚಿಂತನಾ ವಿಚಾರಧಾರೆಗೈಯುವ ಕೆಲಸ ಆಗಬೇಕಾಗಿದೆಎಂದರು. ರಾಷ್ಟ್ರದ ಭವಿಷ್ಯವಾಗಿರುವ ಮಕ್ಕಳಲ್ಲಿ ರಾಷ್ಟ್ರೀಯ ಪ್ರೇಮ ಮತ್ತು ಮಾನವೀಯ ಸಂಬಂಧಗಳನ್ನು ಮೈಗೂಡಿಸಿದ್ದಲ್ಲಿ ಮಾತ್ರ ಸಾಮರಸ್ಯದ ಬದುಕು ನಿರ್ಮಾಣ ಸಾಧ್ಯವಾಗುವುದು. ಶಿಕ್ಷಣದೊಂದಿಗೆ ಸಂಸ್ಕಾರಗಳನ್ನು ರೂಪಿಸಿದ್ದಲ್ಲಿ ಮಾತ್ರ ಮಕ್ಕಳು ನೆಮ್ಮದಿಯಿಂದ ಬಾಳಲು ಸಾಧ್ಯವಾಗುವುದು.ಆದುದರಿಂದ ಮಕ್ಕಳಲ್ಲಿ ಆಶೆಕ್ಕಿಂತ ಸಂಸ್ಕೃತಿ ಭಾಷೆ
ಬೆಳೆಸಿರಿ ಎಂದು ಹ್ಯಾರಿ ಕುಟಿನ್ಹೋ ತಿಳಿಸಿದರು. ಕಾರ್ಯಕ್ರಮದಲ್ಲಿ ಕೆಸಿಎ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀಮತಿ ಹಿಲ್ಡಾ ಡಿ’ಸೋಜಾ, ರಿಚಾರ್ಡ್
ಪಿಂಟೋ, ಲಿಲ್ಲಿ ಕ್ವಾಡ್ರಸ್, ಜೋನ್ ಆಳ್ವಾ, ಲೂಸಿ ನೊರೋನ್ಹಾ, ರೊಮಿಯೋ ಡಿ’ಸೋಜಾ, ಲವಿನಾ ಡಯಾಸ್, ರೋನಿ ಪಾಯ್ಸ್, ಡೈನಾ ಮೋರಾಯಸ್ ಮುಂತಾದವರು ಉಪಸ್ಥಿತರಿದ್ದು, ಕೆಸಿಎ ಉಪಾಧ್ಯಕ್ಷೆ ಗ್ರೇಸಿ ಪಿಂಟೋ ಸ್ವಾಗತಿಸಿದರು. ಖಜಾಂಜಿ ಆಲ್ವಿನ್ ಫ್ರಾನ್ಸಿಸ್ ಡಿ’ಸೋಜಾ ಮುದರಂಗಡಿ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.

By suddi9

Leave a Reply

Your email address will not be published. Required fields are marked *