ಮುಂಬಯಿ, ಜೂ.06 : ಗ್ರಾಹಕರ ಹಾಣಕಾಸು ಭದ್ರತೆಗೆ ಭಾರತ್ ಬ್ಯಾಂಕ್ ಪ್ರಧಾನ ಆದ್ಯತೆ ನೀಡುತ್ತಿದೆ. ಲೆಕ್ಕಶೋಧನಾ ಶ್ರೇಣೀಕರಣ ಪ್ರಕಾರ ಈ ಸಲವೂ ಭಾರತ್ ಬ್ಯಾಂಕ್ (ಆಡಿಟ್ ಕ್ಲಾಸಿಫೀಕೇಶನ್) `ಎ’ ದರ್ಜೆ ಸ್ಥಾನದಿಂದ ಧೃಡೀಕೃತಗೊಂಡು ಸಮರ್ಥ ಬ್ಯಾಂಕ್ ಆಗಿ ಗ್ರಾಹಕರ ವಿಶ್ವಾಸನೀ ಯ ಬ್ಯಾಂಕ್ ಎಂದೆಣಿಸಿದೆ. ಸಾಧನೆಯ ಹೆಜ್ಜೆಗಳ ಭರವಸೆಯಿಂದ ಮುನ್ನಡೆಯುತ್ತಿರುವ ಈ ಬ್ಯಾಂಕ್ ಷೇರುದಾರರಿಗೆಈ ಬಾರಿಯೂ 15% ಡಿವಿಡೆಂಟ್ ನೀಡುತ್ತಿದೆ ಎಂದು ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದರು. ಇಂದಿಲ್ಲಿ ಶನಿವಾರ ಸಂಜೆ ಗೋರೆಗಾಂವ್ ಪೂರ್ವದ ಸೋನಾವಣೆ ರಸ್ತೆಯಲ್ಲಿನ ಬ್ರಿಜ್ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಭಾರತ್ ಬ್ಯಾಂಕ್ನ 39ನೇ ವಾರ್ಷಿಕ ಮಹಾಸಭೆಯನ್ನು ತಮ್ಮ ಘನಾಧ್ಯಕ್ಷತೆಯಲ್ಲಿ ನಡೆಸಿ ಬ್ಯಾಂಕ್ನ ಸದಸ್ಯರನ್ನುದ್ದೇಶಿಸಿ ಸುವರ್ಣರು ಮಾತನಾಡಿದರು.

ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ (ಬ್ಯಾಂಕ್ನ ಮಹಾಪ್ರಬಂಧಕ) ಅವರು ದೀಪ ಬೆಳಗಿಸಿ ಸಾಂಕೇತಿಕವಾಗಿ ಮಹಾಸಭೆಗೆ ಚಾಲನೆಯನ್ನು ನೀಡಿ ಶುಭಾರೈಸಿದರು. ಬ್ಯಾಂಕ್ ನ ವಾರ್ಷಿಕ ಕಾರ್ಯವೈಖರಿಯನ್ನು ಪ್ರಸ್ತಾಪಿಸಿದ ಸುವರ್ಣರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶನ ಮತ್ತು ಮಾರ್ಗಸೂಚಿಯಂತೆ ಸೇವಾನಿರತ ಭಾರತ್ ಬ್ಯಾಂಕ್ ಗತ ಕ್ಯಾಲೆಂಡರ್ ಸಾಲಿನಲ್ಲಿ ಅತ್ತ್ಯುತ್ತಮ ಸಾಧನೆ ನಿರ್ವಹಿಸಿದೆ. ಈ ಹಣಕಾಸು ಸಾಲಿನಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ 10, ಕನರ್ಾಟಕದ ಹುಬ್ಬಳ್ಳಿ ಮತ್ತು ಬೆಳಗಾವಿ, ಗುಜರಾತ್ ರಾಜ್ಯದ ಅಹ್ಮದಾಬಾದ್ ಮತ್ತು ಅಂಕ್ಲೇಶ್ವರ್ ನಗರಗಳಲ್ಲಿ ಸೇರಿದಂತೆ ಒಟ್ಟು ನೂತನ ಶಾಖೆಗಳನ್ನು ತೆರೆಯುವಲ್ಲಿ ಕಾರ್ಯನಿರತವಾಗಿದೆ. ಭವಿಷ್ಯತ್ತಿನ್ನುದ್ದಕ್ಕೂ ಬ್ಯಾಂಕು ಸೇವಾ ಮನೋವೃತ್ತಿಯಲ್ಲಿ ಮುನ್ನಡೆದು ಸರ್ವೋನ್ನತಿಯನ್ನ ಸಾಗುವಲ್ಲಿ ಬ್ಯಾಂಕ್ ನ ನಿರ್ದೇಶಕ ಮಂಡಳಿ ಹಾಗೂ ಅಧಿಕಾರಿಗಳ ಶ್ರಮ ಅನನ್ಯವಾದದ್ದು ಸರ್ವರಿಗೂ ಅಭಿವಂದನೆಗಳು ಎಂದರು.

Bharat Bank 39AGM-A1

Bharat Co-op. Bank Excecutive Comt.

 

Bharat Bank 39AGM-AA2

Bharat Bank 39AGM-C1

Bharat Bank 39AGM-C2

Bharat Bank AGM-2

Bharat Bank AGM-5

Bharat Bank AGM-6

Bharat Bank AGM-7

Bharat Bank AGM-13

Bharat Bank AGM-14

Bharat Bank AGM-16

Bharat Bank AGM-17

Bharat Bank AGM-24

Bharat Bank AGM-30
ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸಿ.ಆರ್ ಮೂಲ್ಕಿ ಸ್ವಾಗತಿಸಿ, ಬ್ಯಾಂಕ್ ಕಾರ್ಯಸಾಧನೆಗಳನ್ನು ವಿವರಿಸಿದರು. ಬ್ಯಾಂಕ್ನ ಪಾಲುದಾರಿಕ ಬಂಡವಾಳ (ಷೇರ್ ಕ್ಯಾಪಿಟಲ್) 124.70 ಕೋಟಿ, ಕಾಯ್ದಿರಿಸಿದ ಸ್ಥಿರನಿಧಿ (ರಿಝರ್ವ್ ಫಂಡ್) 563.80 ಕೋಟಿ, ಸ್ಥಿರ ಠೇವಣಾತಿ (ಫಿಕ್ಸೆಡ್ ಡಿಪಾಜಿಟ್) 6,077.60 ಕೋಟಿ, ಉಳಿತಾಯ ಠೇವಣಾತಿ (ಸೇವ್ಹಿಂಗ್ ಡಿಪಾಜಿಟ್) 971.92 ಕೋಟಿ, ಚಾಲ್ತಿ ಠೇವಣಾತಿ (ಕರೆಂಟ್ ಫಂಡ್) 510.48 ಕೋಟಿ, ಆವರ್ತ ಠೇವಣಾತಿ (ರೆಕರಿಂಗ್ ಡಿಪಾಜಿಟ್) 131.16 ಕೋಟಿ, ಭಾರತ್ ದೈನಂದಿನ ಠೇವಣಾತಿ (ಭಾರತ್ ಡೈಲಿ ಡಿಪಾಜಿಟ್) 66.75 ಕೋಟಿ ಆಗಿದ್ದು ಗತ ಸಾಲಿನಲ್ಲಿ ಒಟ್ಟು 7,757.91 ಕೋಟಿ ವ್ಯವಹಾರ ನಡೆಸಿದೆ. ಸಾಲ ಮತ್ತು ಮುಂಗಡ (ಲೋನ್ ಎಂಡ್ ಎಡ್ವಾನ್ಸಸ್) 5,253.06 ಕೋಟಿ, ನಿಬಿಡ ಆದಾಯ (ಗ್ರೋಸ್ ಇನ್ಕಮ್) 975.40 ಕೋಟಿ, ನಿವ್ವಳ ಲಾಭ (ನೆಟ್ ಪ್ರಾಫಿಟ್) ರೂಪಾಯಿ 112.66 ಕೋಟಿ, ಕಾರ್ಯಮಾನ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ರೂಪಾಯಿ 8,864.82 ಕೋಟಿ ವ್ಯವಹಾರಿಸಲಾಗಿದೆ ಎಂದು ಬ್ಯಾಂಕ್ನ ಕ್ಯಾಲೆಂಡರ್ ವರ್ಷದ ನಿವ್ವಳ ಲಾಭ ಮತ್ತು ಲೆಕ್ಕಾಚಾರ ವರದಿ ಭಿತ್ತರಿಸಿದರು. ಬ್ಯಾಂಕ್ನ ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರುಗಳಾದ ಎಂ.ಬಿ.ಕುಕ್ಯಾನ್, ವಾಸುದೇವ ಆರ್. ಕೋಟ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್, ರೋಹಿತ್ ಎಂ. ಸುವರ್ಣ, ಕೆ.ಎನ್ ಸುವರ್ಣ, ಜೆ.ಎ.ಕೋಟ್ಯಾನ್, ಯು.ಎಸ್.ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ.ಪೂಜಾರಿ, ಕೆ.ಬಿ.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕ್ ಅಧಿಕಾರಿ ಯಶೋಧರ ಡಿ.ಪೂಜಾರಿ ಇವರ ಪ್ರಾರ್ಥನೆಯೊಂದಿಗೆ ಮಹಾಸಭೆ ಆರಂಭ ಗೊಂಡಿತು. ಬ್ಯಾಂಕ್ನ ನೂರಾರು ಷೇರುದಾರರು, ಗ್ರಾಹಕರುಗಳು, ಹಿತೈಷಿಗಳು ಹಾಜರಿದ್ದು ಸಿಎ| ರಮೇಶ್ ಶೆಟ್ಟಿ, ಎನ್.ಎಂ ಸನೀಲ್, ಎಸ್.ಅಗರ್ವಾಲ್, ಸಂಜಯ್ ಜೋಶಿ, ಕೆ.ನಾಗೇಂದ್ರ, ಕೀರ್ತಿ ಜೆ.ಶ್ಹಾ, ಬಿ.ಜಿ ನಾಯಕ್, ಕಾಂಚನ್ ಆರ್.ಗೋವಿಂದ, ಎಸ್.ಕೃಷ್ಣಮೂರ್ತಿ, ಉದಯ್ ಚಿತ್ತಾಳೆ, ಕೃಷ್ಣರಾಜ್ ಕೋಟ್ಯಾನ್, ಡಾ| ಪ್ರಭಾಕರ್ ಶೆಟ್ಟಿ, ಎಂ.ಡಿ ಪೈ, ಪದ್ಮನಾಭ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಬ್ಯಾಂಕ್ನ ಉನ್ನತಿಗಾಗಿ ಸಲಹಿದರು. ಮಹಾಸಭೆಯಲ್ಲಿ ಬ್ಯಾಂಕ್ನ ಉನ್ನತಾಧಿಕಾರಿಗಳಾದ ಶೋಭಾ ದಯಾನಂದ್, ವಿವೇಕ್ ಎಸ್. ಶ್ಯಾನ್ಭಾಗ್, ರಘು ಪೂಜಾರಿ, ಸುರೇಶ್ ಎಸ್.ಸಾಲ್ಯಾನ್, ಪ್ರಭಾಕರ್ ಜಿ.ಸುವರ್ಣ, ಮೋಹನ್ದಾಸ್ ಹೆಜ್ಮಾಡಿ, ವಿಜಯನಂದ್ ಎಸ್.ಕರ್ಕೇರಾ, ವಿಶ್ವನಾಥ್ ಜಿ.ಸುವರ್ಣ, ದಿನೇಶ್ ಬಿ.ಸನೀಲ್, ನಿತ್ಯಾನಂದ ಎಸ್.ಕಿರೋಡಿಯನ್, ನವೀನ್ಚಂದ್ರ ಎಸ್.ಬಂಗೇರಾ, ರಮೇಶ್ ಹೆಚ್.ಪೂಜಾರಿ, ಪ್ರವೀಣ್ ಕುಮಾರ್ ಎಸ್.ಸುವರ್ಣ, ವಾಸುದೇವ ಎಂ.ಸಾಲ್ಯಾನ್, ಜಗಧೀಶ್ ನಾರಾಯಣ್, ಮಹೇಶ್ ಬಿ.ಕೋಟ್ಯಾನ್, ಜನಾರ್ಧನ್ ಎಂ.ಪೂಜಾರಿ, ಸತೀಶ್ ಎಂ.ಬಂಗೇರಾ,
ಪ್ರಭಾಕರ್ ಜಿ.ಪೂಜಾರಿ, ಯು.ಧನಂಜಯ ಕುಮಾರ್ ಸೇರಿದಂತೆ ನೌಕರ ವೃಂದವು ಹಾಜರಿದ್ದು, ಬ್ಯಾಂಕ್ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ ಕುಮಾರ್ ಆರ್.ಅವಿೂನ್ ವಂದಿಸಿದರು.

ಚಿತ್ರ: ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *