ಮುಂಬಯಿ, ಮಾ.22: ಸುಧಾರಣಾವಾದಿ ಸಮಾಜದಲ್ಲಿ ಸಂಸ್ಕೃತಿ ಪಲ್ಲಟಗಳು ಸದಾ ನಡೆಯುತ್ತಲೇ ಇವೆ.ಭಾರತೀಯ ಸಂಸ್ಕೃತಿ ಬಹು ಸಂಸ್ಕೃತಿಯನ್ನೊಳಗೊಂಡಿದೆ. ಏಕ ಸಂಸ್ಕೃತಿ ನಿಜವಾದ ಸಂಸ್ಕೃತಿಯಲ್ಲಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬಹುಸಂಸ್ಕೃತಿಯ ತೊಟ್ಟಿಲು ಆಗಿದೆ. ಆದರೆ ಇತ್ತೀಚೆಗೆ ಸಾಂಸ್ಕೃತಿಕ ಯಜಮಾನಿಕೆ ಕಂಡುಬರುತ್ತಿದ್ದು, ಇದು ತೀರಾ ಅಪಾಯಕಾರಿ ಎಂದು ಕ ಟಕ ರಾಜ್ಯ ಮುಖ್ಯಮಂತ್ರಿಗಳ ಪ್ರಧಾನ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕಳವಳ ವ್ಯಕ್ತ ಪಡಿಸಿದರು. ಕರ್ನಾ ಟಕ ಸಂಘ ಮುಂಬಯಿ ಇದರ ಸಾಹಿತ್ಯ ಭಾರತಿಯು ಇಂದಿಲ್ಲಿಶನಿವಾರ ಮಾಹಿಮ್ ಪಶ್ಚಿಮದಲ್ಲಿನ ತನ್ನ ಸಂಘದ ಸಮರಸ ಭವನದಲ್ಲಿ ಆಯೋಜಿಸಿದ್ದ`ಸಾಹಿತ್ಯ ಚಿಂತನ-20′ ಕಾರ್ಯಕ್ರಮವನ್ನುದ್ದೇಶಿಸಿ ದಿನೇಶ್ ಮಟ್ಟು ಮಾತನಾಡಿದರು.

DSC_7231

K'Sangha-Sahitya Chintana-A1

K'Sangha-Sahitya Chintana-C1

`ಸಮಕಾಲೀನ ಸಾಂಸ್ಕೃತಿಕ ಪಲ್ಲಟಗಳು’ ವಿಚಾರವಾಗಿ ಉಪನ್ಯಾಸ ನೀಡಿದ ಅಮೀನ್, ಸಂಸ್ಕೃತಿಗೆ ಬಹು ವ್ಯಾಖ್ಯಾನಗಳಿವೆ. ಅಧುನಿಕೋತ್ತರವಾದ ಪರಿಭಾಷೆಗಳಿವೆ. ಇದು ಬಹಳ ದೊಡ್ಡ ಚರ್ಚಿತ ವಿಚಾರವೂ ಹೌದು. ಇದರ ಸಂಪರ್ಕವು ಕಷ್ಟದ ವಿಷಯ. ಸಂಸ್ಕೃತಿ ಬಿಂಬಿಸುವುದೂ ಸುಲಭ-ಸರಳವವಲ್ಲ. ಸಂಸ್ಕೃತಿ ಶಬ್ದವ್ಯಾಮೋಹ, ಸಂಸ್ಕಾರಯುತ ಬದುಕಿನ ವ್ಯಾಖ್ಯಾನವಾಗಿದೆ. ನಾಗರೀಕತೆ ಬೆಳೆಯುತ್ತಿದ್ದಂತೆ ಅಸೂಕ್ಷ್ಮತೆ ಹೆಚ್ಚಾಗುತ್ತದೆ. ಸೂಕ್ಷ್ಮತೆಕಳಕೊಂಡರೆಮಾನವ ಮನುಷ್ಯನಾಗಲಾರನು. ಕೌಟುಂಬಿಕ ಕೇಂದ್ರಿತ ಮತ್ತು ಸಮಾಜ ಕೇಂದ್ರಿತಗಳೆಂಬ ಎರಡು ನೆಲೆಗಳಲ್ಲಿ ಸಂಸ್ಕೃತಿ ಪಲ್ಲಟಗಳಿವೆ. ಸಾಂಸ್ಕೃತಿಕ, ಸಾಹಿತ್ಯ ಎಲ್ಲವೂ ನಮ್ಮನ್ನು ಮಾನವೀಯರಾಗಿ, ಸೂಕ್ಷ್ಮಜ್ಞರನ್ನಾಗಿ ಮಾಡುವಂತಿರಬೇಕು. ಸಂಘರ್ಷ ಯಾವೊತ್ತೂ ನಮ್ಮ ಸಂಸ್ಕೃತಿಯ ಭಾಗವಲ್ಲ. ಆದುದರಿಂದಭಾರತೀಯ ಸಂಸ್ಕೃತಿ ಸಂಘರ್ಷ ಆಗದಿರಲಿ ಎಂದು ಸಲಹಿದರು. ಬಳಿಕ ನಡೆಸಲಾದ ಸಂವಾದ ಕಾರ್ಯಕ್ರಮದಲ್ಲಿ ಡಾ| ವ್ಯಾಸರಾಯ ನಿಂಜೂರು, ನ್ಯಾ| ವಸಂತ ಕಲಕೋಟಿ, ಮಮತಾ ರಾವ್, ಡಾ| ಎಸ್.ಕೆ ಭವಾನಿ, ಡಾ| ಸುನೀತಾ ಎಂ.ಶೆಟ್ಟಿ, ಮೋಹನ್ ಮಾನರ್ಾಡ್, ಸುಶೀಲಾ ದೇವಾಡಿಗ, ಹರೀಶ್ ಕೆ.ಹೆಜ್ಮಾಡಿ, ಎಸ್.ಟಿ ವಿಜಯಕುಮಾರ್ ತಿಂಗಳಾಯ, ಸುರೇಖಾ ದೇವಾಡಿಗ, ಸಾದಯ, ಗೋಪಾಲ ತ್ರಾಸಿ ಮತ್ತಿತರರು ಉಪಸ್ಥಿತರಿದ್ದು ಮಾತುಕತೆ ನಡೆಸಿ ಸಂವಾದದಲ್ಲಿ ಪಾಲ್ಗೊಂಡದರು. ಸಂಘದ ಮಾಜಿ ಅಧ್ಯಕ್ಷ ಮನೋಹರ್ ಎಂ. ಕೋರಿ ಅವರು ಮಟ್ಟು ಅವರಿಗೆ ಶಾಲು ಹೊದೆಸಿ, ಸ್ಮಾರಣಿಕೆ- ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ಸಂಘದ ಗೌರವ ಕಾರ್ಯದರ್ಶಿ  ಓಂದಾಸ್ ಕಣ್ಣಾಂಗಾರ್ ಸ್ವಾಗತಿಸಿ ಪ್ರಾಸ್ತವಿಕಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.  ಡಾ|ಭರತ್ಕುಮಾರ್ ಪೊಲಿಪು ಅಭಾರ ಮನ್ನಿಸಿದರು.

ಚಿತ್ರ ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *