ಕಿನ್ನಿಗೋಳಿ: ಸುರತ್ಕಲ್ ಠಾಣಾ ವ್ಯಾಪ್ತಿಯ ಕ್ರಷ್ಣಪುರ ಯುವಕ ಮಂಡಲ ಬಳಿಯ ರಾಮ ಭಜನಾ ಮಂದಿರಕ್ಕೆ ನಿನ್ನೆ ತಡ ರಾತ್ರಿ ದುಷ್ಕರ್ಮಿಗಳು ಕಲ್ಲು ಎಸೆದ ಘಟನೆ ನಡೆದಿದೆ, ರಾಮ ಭಜನಾ ಮಂದಿರದ ಎರಡೂ ಬದಿಗಳಲ್ಲಿ ಗಾಜಿನ ಮೇಲೆ ಚಿತ್ರವಿರುವ ಕಲಾಕ್ರತಿಯನ್ನು ಅಳವಡಿಸಲಾಗಿದ್ದು ಇದ್ದಕ್ಕೆ ಕಲ್ಲು ಬಿಸಾಡಿ ಹೊಡೆದು ಹಾಕಿದ್ದಾರೆ, ಯಾರೂ ದುಷ್ಕರ್ಮಿಗಳು ಕೋಮು ಸೌಹರ್ದತೆಯನ್ನು ಕದಡುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಸುರತ್ಕಲ್ ಠಾಣಾಧಿಕಾರಿ ನಟರಾಜ್, ಪಣಂಬೂರು ಎ.ಸಿ.ಪಿ ರವಿಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಸುರತ್ಕಲ್ ಸುತ್ತ ಮುತ್ತ ಇತ್ತೀಚೆಗೆ ಹಲವು ಕಳ್ಳತನ ಪ್ರಕರಣಗಳು ನಡೆದಿದ್ದು ಇದುವರೆಗೆ ಯಾರೂ ಎಂಬುದೇ ಪತ್ತೆಯಾಗಿಲ್ಲ, ಈಗ ಈ ಪ್ರಕರಣದಿಂದ ಪೋಲಿಸರು ತಲೆ ಕೆಡಿಸುವಂತಾಗಿದೆ.


.
