ಮುಂಬಯಿ :ಭಾರತ್ ಕೋ.ಆಪರೇಟಿವ್‍ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ 68ನೇ ಶಾಖೆಯನ್ನುಅಂಧೇರಿ ಪೂರ್ವದ ಮಹಾಕಾಳಿ ಕೇವ್ಸ್ ರಸ್ತೆಯ ಹೋಲಿಸ್ಪಿರಿಟ್ ಹಾಸ್ಪಿಟಲ್‍ನ ಮುಂಭಾಗದಲ್ಲಿನ ರಮ್ಯ ಜೀವನ್ಕಟ್ಟಡದ ತಳಮಹಡಿಯಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಶುಭಾರಂಭಗೊಳಿಸಿತು.ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಬಿಡಿಸಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದ್ದು, ಇಎಂಎಸ್ ಇಲೆಕ್ಟ್ರಿಕಲ್ಸ್ ಮತ್ತು ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಹರೀಶ್ ಜಿ.ಅವಿೂನ್ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಂಧೇರಿ ಸ್ಥಳೀಯ ಕಚೇರಿ ಗೌರವ ಕಾರ್ಯಾಧ್ಯಕ್ಷ ಕಾರ್ಯಾಧ್ಯಕ್ಷ ರವೀಂದ್ರ ಕೋಟ್ಯಾನ್ ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಯನ್ನು ಉದ್ಘಾಟಿಸಿದರು.


ಬ್ಯಾಂಕ್‍ನ ನಿರ್ದೇಶಕ ಕೆ.ಎನ್ ಸುವರ್ಣ ಅವರು ಎಟಿಎಂ ಸೇವೆ, ಲಾಕರ್ ಸೌಲಭ್ಯ ಮತ್ತು ಬ್ಯಾಂಕ್‍ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗೆ ಚಾಲನೆಯನ್ನೀಡಿ ಶುಭಾರೈಸಿದರು. ಗೌರವ ಅತಿಥಿsಗಳಾಗಿ ಉದ್ಯಮಿಗಳಾದ ರವೀಂದ್ರನಾಥ ಭಂಡಾರಿ, ಸುರೇಶ್ ಶೆಟ್ಟಿ, ಎನ್‍ಸಿಪಿ ಮುಖಂಡ ಲಕ್ಷ್ಮಣ್ ಪೂಜಾರಿ, ಸಮಾಜ ಸೇವಕರುಗಳಾದ ಪ್ರವೀಣ್ ಸುವರ್ಣ, ಮೊಹಮ್ಮದ್ ಕೆ.ಖೈಸಾರ್, ಸುರೇಶ್ ಸುವರ್ಣ,ಅಶೋಕ ಎಂ.ಕರ್ಕೇರ, ಬಲವಂತ ರಾವ್ ಪಾಟೀಲ್, ಬ್ಯಾಂಕ್‍ನ ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನೀಲ್, ಎನ್.ನಿತ್ಯಾನಂದ್, ಹೋಲಿಸ್ಪಿರಿಟ್ ಆಸ್ಪತ್ರೆಯ ಭಗಿನಿಯರುಗಳಾದ ಸಿ| ರಿತಿ, ಸಿ| ಸುಚಾ, ಸಿ| ಶುೃತಿ ಮತ್ತಿತರ ಮಹಾನೀಯರು ಉಪಸ್ಥಿತರಿದ್ದು ಶುಭಾರೈಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ನಿರ್ದೇಶಕರುಗಳಾದ ಯು.ಎಸ್.ಪೂಜಾರಿ, ನ್ಯಾ| ಎಸ್.ಬಿ ಅವಿೂನ್, ಜ್ಯೋತಿ ಕೆ.
ಸುವರ್ಣ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್‍ಜೆ.ಪೂಜಾರಿ,ಸೂರ್ಯಕಾಂತ್‍ಜೆ.ಸುವರ್ಣ ಹಾಗೂ ಬ್ಯಾಂಕ್‍ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ ಕುಮಾರ್ ಆರ್.ಅವಿೂನ್ ಸೇರಿದಂತೆ ಬ್ಯಾಂಕ್‍ನ ಅನೇಕ ಷೇರುದರರು, ಸ್ಥಾನೀಯ ನೂತನ ಗ್ರಾಹಕರು, ಹಿತೈಷಿಗಳು ಆಗಮಿಸಿ ಶಾಖೆಯ ಸಾಧನಾಶೀಲ ಪ್ರಗತಿಗೆ ಶುಭಾರೈಸಿದರು. ಶ್ರೀ ಧನಂಜಯ ಶಾಂತಿ ಉಳ್ಳೂರು ಮತ್ತು ಶ್ರೀ ಶೇಖರ ಶಾಂತಿ ಉಳ್ಳೂರು ಅವರು ತಮ್ಮ ಪೌರೋಹಿತ್ಯದಲ್ಲಿ ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಮಹಾಪೂಜೆ, ದ್ವಾರಪೂಜೆ ನೆರವೇರಿಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಬ್ಯಾಂಕ್ ಸಿಬ್ಬಂದಿಗಳಾದ ಸುಖಾನಂದ ಕುಕ್ಯಾನ್ ಮತ್ತು ಶ್ರೀಮತಿ ಸ್ಮೀತಾ ಸುಖಾನಂದ್ ಅವರು ಪೂಜಾ ಯಜಮಾನತ್ವ ವಹಿಸಿದ್ದರು. ಬ್ಯಾಂಕ್‍ನ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿದರು. ಬ್ಯಾಂಕ್‍ನ ಮಹಾ ವ್ಯವಸ್ಥಾಪಕ ನಿತ್ಯಾನಂದ ಡಿ.ಕೋಟ್ಯಾನ್ ಬ್ಯಾಂಕ್‍ನ ಕಾರ್ಯವೈಖರಿ ಪ್ರಸ್ತಾಪಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಶಾಖೆಯ ಮುಖ್ಯಸ್ಥ ಕಿರಣ್‍ಕುಮಾರ್ ಬಿ.ಅಮೀನ್ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನು ನೀಡಿ ಸತ್ಕರಿಸಿದರು. ಶಾಖೆಯ ಸಹ
ಪ್ರಬಂಧಕ ಸುಖಾನಂದ ಕುಕ್ಯಾನ್ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪ ಪ್ರಧಾನ ಪ್ರಬಂಧಕರುಗಳಾದ ವಿವೇಕ್ ಎಸ್.ಶ್ಯಾನ್‍ಭಾಗ್, ಸುರೇಶ್ ಎಸ್. ಸಾಲ್ಯಾನ್, ದಿನೇಶ್ ಬಿ.ಸಾಲ್ಯಾನ್, ವಿದ್ಯಾನಂದ ಎಸ್.ಕರ್ಕೇರಾ, ನವೀನ್‍ಚಂದ್ರ ಎಸ್.ಬಂಗೇರಾ, ವಿಶ್ವನಾಥ್ ಸುವರ್ಣ, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದಸತೀಶ್ ಎಂ.ಬಂಗೇರಾ, ಡಾ| ಯು.ಧನಂಜಯ ಕುಮಾರ್, ವಾಸುದೇವ ಎಂ.ಸಾಲ್ಯಾನ್, ಮಹೇಶ್ ಕೋಟ್ಯಾನ್, ಹಿರಿಯ ಪ್ರಬಂಧರುಳಾದ ಹರೀಶ್ ಕೆ.ಹೆಜ್ಮಾಡಿ, ಅಭಿವೃದ್ಧಿ ಇಲಾಖಾಧಿಕಾರಿ ಸುನೀಲ್ ಗುಜರನ್, ಧನಂಜಯ ಅವಿೂನ್ ಹಾಗೂ ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.





