ಸುದ್ದಿ 9ಬಂಟ್ವಾಳ: ದೇಶದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಈ ನಿಟ್ಟಿನಲ್ಲಿ ಈ ಸಾಲಿನ ಲೋಕಸಭಾ ಚುನಾವಣೆಯ ಫಲಿತಾಂಶ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಎಂದು ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಹೇಳಿದ್ದಾರೆ.

ಸೋಮವಾರ ಸಂಜೆ ಬಿ.ಸಿ.ರೋಡಿನ ಕೈಕಂಬ ಪರಿಸರದಲ್ಲಿ ಅಂಗಡಿ ಮುಂಗಟ್ಟು ಹಾಗೂ ಮನೆ ಬೇಟಿಯ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿಯ ಪರವಾಗಿ ಮತಯಾಚಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷ ಅನುಭವಿ ಹಾಗೂ ಕಳಂಕ ರಹಿತ ಅಭ್ಯರ್ಯಥಿಯನ್ನು ಕಣಕ್ಕೆ ಇಳಿಸಿದೆ. ಆನಾರ್ದನ ಪೂಜಾರಿ ಬಡವರಿಗಾಗಿ ದುಡಿದವರು. ಬಡವರ ಪರ ಧ್ವನಿ ಎತ್ತಿದ ಅವರನ್ನು ನಮ್ಮ ಪ್ರತಿನಿಧಿಯಾಗಿ ಮತ್ತೊಮ್ಮೆ ಲೋಕಸಭೆಗೆ ಆರಿಸಿ ಕಳುಹಿಸ ಬೇಕಾಗಿದೆ ಎಂದರು. ಈ ಸಂದರ್ಭ ಪಕ್ಷ ಪ್ರಮುಖರಾದ ಸದಾಶಿವ ಬಂಗೇರ ಮಹಮ್ಮದ್ ನಂದರಬೆಟ್ಟು, ನೋಣಯ್ಯ ಪೂಜಾರಿ, ಜಯಸಾಮಾನಿ ಮತ್ತಿತರರು ಹಾಜರಿದ್ದರು. ಕೈಕಂಬ, ಶಾಂತಿ ಅಂಗಡಿ, ತಾಳಿಪಡ್ಪು ಪರಿಸರದಲ್ಲಿ ಅವರು ಮತಯಾಚಿಸಿದರು. ಅಪಾರ ಸಂಖ್ಯೆಯಲ್ಲಿ ಯುವಕಾರ್ಯಕರ್ತರು ಅಶ್ವನಿ ರೈ ಜತೆಗಿದ್ದರು.

