ಧಾರ್ಮಿಕ ಕ್ರಿಯೆಗಳಲ್ಲಿ ಸಾಮೂಹಿಕ ಹಿತಚಿಂತನೆ ಇರಲಿ
ಬಜಪೆ: ಧಾರ್ಮಿಕ ಚಟುವಟಿಕೆಗಳಲ್ಲಿ ಸಾಮೂಹಿಕ ಹಿತಚಿಂತನೆ, ಸದ್ಭಾವನೆ ಇರಬೇಕು. ಇದರಿಂದ ಸಾಮಾಜಿಕ ಅಸಮಾನತೆ ನಿವಾರಿಸಿ ಶಾಂತಿ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದು ಕಟೀಲು ದೇವಳದ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಅಸ್ರಣ್ಣ ಹೇಳಿದರು.
ಪೆರ್ಮುದೆ ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಧರ್ಮನೇಮೋತ್ಸವ ಮಾಡ ಗಡಿ ಪ್ರಧಾನ ಕಾರ್ಯಕ್ರಮದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಕ್ಷೇತ್ರದ ಗೌರವಾನ್ವಿತರು ಹಾಗೂ ಸಾಧಕರ ಸನ್ಮಾನ – ಗೌರವಾರ್ಪಣೆ ಸಮಾರಂಭದಲ್ಲಿ ಆಶೀರ್ವಚವಿತ್ತರು.
ಬಂಟರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಅವರು ಸಭಾಕಾತ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಕಾಂತೇರಿ ಜುಮಾದಿ ಮುಕ್ಕಾಲ್ದಿ ಕಾಚೂರು ಶೇಖರ ಶೆಟ್ಟಿ, ದೀವಟಿಗಾರ ವಾಮನ ಮಡಿವಾಳ, ದೇಹದಾರ್ಢ್ಯಪಟು ಅಶೋಕ ಕೋಟ್ಯಾನ್, ಕ್ರೀಡಾಪಟು ಹರ್ಷಿತಾ ಕೋಟ್ಯಾನ್ ಅವರುಗಳನ್ನು ಸನ್ಮಾನಿಸಲಾಯಿತು. ಊರ ಪರವೂರ ಗಡಿಕಾರರು, ದೈವ ಸಂಬಂಧ ಗೌರವಾನ್ವಿತರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಸಚಿವ ಅಭಯಚಂದ್ರ ಜೈನ್, ಉಪನ್ಯಾಸಕ-ಸಾಹಿತಿ ಗಣೇಶ ಅಮೀನ್ ಸಂಕಮಾರ್, ವಿದ್ವಾನ್ ಮುರಳೀಧರ ತಂತ್ರಿ, ರಾಧಾಕೃಷ್ಣ ತಂತ್ರಿ, ಪಾರಾಳೆಗುತ್ತು ಭುಜಂಗ ಶೆಟ್ಟಿ, ಪೆರ್ಮುದೆ ಗ್ರಾ.ಪಂ. ಅಧ್ಯಕ್ಷ ಸಂದೇಶ್ ಪೂಜಾರಿ, ಬೊಳ್ಳೊಳ್ಳಿಮಾರು ಗುತ್ತಿನ ನೂತನ ಗಡಿಕಾರ ಗುರುರಾಜ ಮಾಡ, ಭುಜಂಗ ಶೆಟ್ಟಿ ಪಾರಾಳೆಗುತ್ತು, ಮುಕ್ಕೋಡಿ ಸುಧಾಕರ ಪೂಜಾರಿ ಮುಂತಾದವರು ವೇದಿಕೆಯಲ್ಲಿದ್ದರು.
ಉಲ್ಲಾಸ್ ಆರ್. ಶೆಟ್ಟಿ ಸ್ವಾಗತಿಸಿ, ಆರ್.ಎನ್.ಶೆಟ್ಟಿ ಕಳವಾರು ವಂದಿಸಿದರು. ಪ್ರಮೀಳಾ ದೀಪಕ್ ಹಾಗೂ ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
