ಮಂಗಳೂರು: ಮತದಾರರಿಗೆ ನರೇಂದ್ರ ಮೋದಿಯವರು ಮಾಡಿರುವ ಸಾಧನೆ ಮತ್ತು ಪಕ್ಷದ ಧ್ಯೇಯೋದ್ದೇಶಗಳನ್ನು ಮನದಟ್ಟು ಮಾಡಿಸುವ ಸಲುವಾಗಿ ಗುರುವಾರ ಮಾರ್ಚ್ 27ರಂದು ಕದ್ರಿ ದೇವಸ್ಥಾನ ವಠಾರದಲ್ಲಿ ಬಿಜೆಪಿಯು ‘ಟ್ರಕ್ ‘ ಪ್ರಚಾರ ಅಭಿಯಾನವೆಂಬ ವಿನೂತನ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡಿತು. ಬಿಜೆಪಿಯ ಯುವ ಮೋರ್ಚಾ ಈ ವಾಹನವನ್ನು ಸಿದ್ಧಪಡಿಸಿದ್ದು ಮಾಜಿ ಶಾಸಕ ಯೋಗೀಶ್ ಭಟ್ ಈ ವಾಹನವನ್ನು ಉದ್ಘಾಟಿಸಿದರು.

truck

ಈ ಟ್ರಕ್ ನಲ್ಲಿ ಬೃಹತ್ ಎಲ್ ಇಡಿ ಪರದೆಯನ್ನು ಅಳವಡಿಸಲಾಗಿದ್ದು ಅದರಲ್ಲಿ ಗುಜರಾತ್ ನಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳು ಮತ್ತು ಪಕ್ಷದ ಧ್ಯೇಯೋದ್ದೇಶಗಳ ಕುರಿತ ಚಿತ್ರಗಳು ಬಿತ್ತರವಾಗಲಿದೆ. ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿರುವ ಈ ಟ್ರಕ್ ಎರಡು ದಿನಗಳ ಅವಧಿಯಲ್ಲಿ ಪ್ರತಿಯೊಂದು ಕ್ಷೇತ್ರದ ಹತ್ತು ಸ್ಥಳಗಳಿಗೆ ಭೇಟಿ ನೀಡಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಹಿರಿಯ ಮುಖಂಡ ರವಿಶಂಕರ್ ಮಿಜಾರ್, ಕ್ಯಾ. ಬ್ರಿಜೇಶ್ ಚೌಟ, ವಿ. ಕಾಮತ್, ಪ್ರೇಮಾನಂದ ಶೆಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *